ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.31: ನಗರದ ಸಿಡಿಪಿಒ ಸಭಾಂಗಣದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು ಕೆಟ್ಟವರಲ್ಲ,ಆದುದರಿಂದ ಸರ್ಕಾರ ಮನುಷ್ಯನ ಭವಿಶ್ಯದ ಬಗ್ಗೆ ಚಿಂತಿಸಿ ತಂಬಾಕು ನಿಷೇಧವನ್ನು ಮಾಡುತ್ತಾರೆ.ಭಾರತ ದೇಶದಲ್ಲಿ ಕ್ಯಾನ್ಸರ್ ಹೆತ್ತ ಸೊಸೈಟಿ ರೆಡ್ ಕ್ರಾಸ್ ಸಂಸ್ಥೆ,ಯೆನ್ ಜಿ ಒ,ಮುಂತಾದ ಸಂಸ್ಥೆ ಗಳು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಉಪನ್ಯಾಸ ಗಳನ್ನು,ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಮೂಡುತ್ತಿವೆ ಎಂದು ತಾಲೂಕು ವ್ಯೆದ್ಯಾಧಿಕಾರಿ ಡಾ.ಈರಣ್ಣ ತಿಳಿಸಿದರು.
ಒಂದು ದಿನ ಸಂಪೂರ್ಣವಾಗಿ 24ಗಂಟೆಗಳ ಕಾಲ ಯಾವುದೇ ರೀತಿಯ ತಂಬಾಕು ಇರುವ ವಸ್ತುಗಳನ್ನು ಸೇವಿಸದಿರುವುದು ಅಥವಾ ಉಪಯೋಗಿಸದೆ ಇರುವುದು ಮತ್ತು ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಅಂದರೆ 30-40 ಹರೆಯದವರಿಗಿ೦ತ ಹೆಚ್ಚಾಗಿ ಯುವಕರೆ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನು ಸೇವಿಸುತಿದ್ದಾರೆ.ಯುವಕರಿಗೆ ಅದರಿಂದಾಗಿ ಹಾಗುವ ಹಾನಿ,ತೊಂದರೆ ಗಳನ್ನು ಅರ್ಥಮಾಡಿಸಲು ಈ ದಿನ ಒಂದು ಪ್ರಯತ್ನ ಇದನ್ನು ವಿಶ್ವದಾದ್ಯ೦ತೆ ಆಚರಿಸುತ್ತಾರೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಖಾಸಿಂ ಹೇಳಿದರು.
ತಂಬಾಕು ಸೇವನೆ ಯಿಂದ ಆಗುತ್ತಿರುವ ಸಾವಿನ ಸಂಖ್ಯೆಯು ಕ್ಷೀಣವಾಗಿ ಹೆಚ್ಚುತ್ತಲೇ ಇದೆ.ಸಿಗರೇಟ್ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೆಚ್ಚಿನ ಹಾನಿಯನ್ನು ಮಾಡುತ್ತಾದೆ.ಹೀಗೆ ತಮಗೆ ಕಾಯಿಲೆಯನ್ನು ತಂದುಕೊಳ್ಳುವುದಲ್ಲದೆ ಇ ಚಟ ಇಲ್ಲದೆ ಜನಕ್ಕೂ ಅವರೂ ಕಾಯಿಲೆಗಳನ್ನು ಬರಿಸುತ್ತಾರೆ.ಹೀಗಾಗಿ ಬಹಳಷ್ಟು ಜನ ಸಾಯುತ್ತಾರೆ.ಇದನ್ನು ತಡೆಯುವ ದಿನವನ್ನಾಗಿ ಈ ದಿನ ವಿಶ್ವ ತಂಬಾಕು ಮುಕ್ತ ದಿನವಾಗಿ ಆಚರಿಸಲಾಗುತ್ತದೆ ಎಂದು ಸಿರುಗುಪ್ಪ ವಕೀಲರ ಸಂಘದ ಅಧ್ಯಕ್ಷ ಎಸ್.ಮಂಜುನಾಥ ಗೌಡ ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಪ್ಯಾಟೆ ಗೌಡ ಹಾಗೂ ಅಬ್ದುಲ್ ಸಾಬ್ ವಕೀಲರ ಸಂಘ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
One attachment • Scanned by Gmail