ವಿಶ್ವ ತಂಬಾಕು ರಹಿತ ದಿನ

ಸಿರವಾರ,ಜೂ.೦೧-
ಗುಟ್ಕಾ ಸೇವನೆ,ಧೂಮಪಾನ ಮತ್ತು ಹೊಗೆಯುಕ್ತ ತಂಬಾಕು ಉತ್ಪನ್ನಗಳ ಸೇವೆನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ತಂಬಾಕು ನಿಷೇಧದ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು, ಸಂಘ -ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಡಾ.ಪರಿಮಳ ಮೈತ್ರಿ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ದಲ್ಲಿ ಬುಧವಾರ ಮಾತನಾಡಿದರು.
ತಂಬಾಕಿನಲ್ಲಿರುವ ನಿಕೋಟಿನ್ ವಿಷಕಾರಕ ಅಂಶವು ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಗರ್ಭಪಾತ, ನಿರ್ಜೀವ ಜನನ, ಅವಧಿ ಪೂರ್ವಜನನ ಮತ್ತು ಕಡಿಮೆ ತೂಕದ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ.
ಆರೋಗ್ಯ ಮತ್ತು ಆರೋಗ್ಯಕರ ಜೀವನ ಭವಿಷ್ಯದ ಪೀಳಿಗೆಯನ್ನು ರಕ್ಷಿಸಲು ಈ ದಿನವನ್ನು ಆಚರಿಸಲು ಮಹತ್ವ ನೀಡಬೇಕು ಎಂದರು.
ಈ ವೇಳೆ ಡಾ.ಸುನಿಲ್ ಸರೋದೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಹಿರಿಯ ಆರೋಗ್ಯ ಸಹಾಯಕ ಶರಣಬಸವ ಹಾಗೂ ಫಾರ್ಮಾಸಿಸ್ಟ್ ವಿದ್ಯಾರಾಣಿ, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.