ವಿಶ್ವ ತಂಬಾಕು ರಹಿತ ದಿನ ಜನ ಜಾಗೃತಿ ಕಾರ್ಯಕ್ರಮ

ದಾವಣಗೆರೆ. ಜೂ.೧; ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತವಾಗಿ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಎಸ್.ಎಸ್ ಕೇರ್ ಟ್ರಸ್ಟ್ ದಾವಣಗೆರೆ ವತಿಯಿಂದ ಬೇವಿನಹಳ್ಳಿ, ದೊಡ್ಡ ತಾಂಡ ಗ್ರಾಮಸ್ಥರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ದಂತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಸಮುದಾಯ ದಂತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳಾದ ಡಾ.ಸಪ್ನಾ ಬಿ, ಡಾ. ಉಷಾ ಜಿ.ವಿ ಮತ್ತು ಬಾಯಿ ರೋಗ ತಪಾಸಣ ಮತ್ತು ಕ್ಷ ಕಿರಣ ವಿಭಾಗದ ಡಾ. ಸಂಗೀತ ಸಿದ್ದ ಬಸಪ್ಪ, ಡಾ. ಶುಭ .ಸಿ ಹಾಗೂ ದಂತ ವೈದ್ಯಕೀಯ ವಿದ್ಯಾರ್ಥಿಗಳು ಬಾಯಿ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಉತ್ಸುಕತೆಯಿಂದ ಪಾಲ್ಗೊಂಡು ಕಾರ್ಯಕ್ರಮವು ಯಶಸ್ವಿಯಾಗಲು ನೆರವಾದರು.