ವಿಶ್ವ ತಂಬಾಕು ರಹಿತ ದಿನ: ಕೆಬಿಎನ್ ದಿಂದಜಾಗೃತಿ ಕಾರ್ಯಕ್ರಮ

ಕಲಬುರಗಿ :ಜೂ.2- ಧೂಮಪಾನದ ಅಪಾಯಗಳು ಮತ್ತು ತಂಬಾಕು ಸೇವನೆಯನ್ನು ತಪ್ಪಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸ್ಥಳೀಯ ಖಾಜಾ ಬಂದೇನವಾಜ ಆಸ್ಪತ್ರೆಯು ಖಾಜಾ ಬಜಾರಿನ ನಗರ ಆರೋಗ್ಯ ತರಬೇತಿ ಕೇಂದ್ರದ ಹತ್ತಿರ
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬೀದಿ ನಾಟಕವನ್ನು ಪ್ರದರ್ಶಿಸಿತು.

ಈ ನಾಟಕ ಯೋಗಕ್ಷೇಮದ ಮೇಲೆ ಧೂಮಪಾನದ ಹಾನಿಕಾರಕ ಪರಿಣಾಮಗಳನ್ನು ಚಿತ್ರಿಸುವ ಸನ್ನಿವೇಶಗಳನ್ನು ಒಳಗೊಂಡಿತ್ತು. ಧೂಮಪಾನವನ್ನು ತ್ಯಜಿಸುವ ಪ್ರಯೋಜನಗಳನ್ನು ಪ್ರದರ್ಶಿಸಿತು ಅಲ್ಲದೇ ಆರೋಗ್ಯಕರ ಆಯ್ಕೆಗಳನ್ನು ಮಾಡಲು ವೀಕ್ಷಕರನ್ನು ಉತ್ತೇಜಿಸಿತು. ಒಟ್ಟಾರೆಯಾಗಿ, ತಂಬಾಕು ಬಳಕೆಯನ್ನು ನಿರುತ್ಸಾಹಗೊಳಿಸುವುದು ಮತ್ತು ಧೂಮಪಾನ-ಮುಕ್ತ ಜೀವನಶೈಲಿಯನ್ನು ಪ್ರೋತ್ಸಾಹಿಸಿವುದು ಈ ನಾಟಕದ ಮೂಲ ಧ್ಯೇಯವಾಗಿತ್ತು.

ಡಾ.ಅನಿಶ್, ಪಿಜಿ ವಿದ್ಯಾರ್ಥಿ ನಾಟಕವನ್ನು ನಿರ್ದೇಶಿಸಿದ್ದರು. 10 ಮೆಡಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ವಿಜಲಕ್ಷ್ಮಿ, ಡಾ. ರಶೀದಾ ಫಾತಿಮಾ, ಡಾ. ರೆಹಮಾನ್, ಇಂಟರ್ನೆಗಳು ಮತ್ತು ಪಿಜಿ ವಿದ್ಯಾರ್ಥಿಗಳು ಹಾಜರಿದ್ದರು.