ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ರೇಡಿಯೋ ಕಾರ್ಯಕ್ರಮ

ಚಿತ್ರದುರ್ಗ,ಜೂ.4; ಜಿಲ್ಲೆಯಲ್ಲಿ ರಾಷ್ಟಿçÃಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 2021-22ನೇ ಸಾಲಿನಲ್ಲಿ ವಿಶ್ವ ತಂಬಾಕು ರಹಿತ ದಿನ-ಮೇ-31ರ ಈ ವರ್ಷದ ಘೋಷ ವಾಕ್ಯ “ತ್ಯಜಿಸಲು ಬದ್ಧರಾಗಿ” ಇದಾಗಿದ್ದು, ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಈಚೆಗೆ ರೇಡಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಆರ್.ರಂಗನಾಥ್ ಮಾರ್ಗದರ್ಶನದಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಂಡು ಆಚರಿಸಲಾಗುವುದು. ನಂತರ ರೇಡಿಯೋ ಕಾರ್ಯಕ್ರಮ ಕೈಗೊಂಡು ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ. ತಿಪ್ಪೇಸ್ವಾಮಿ ಅವರು ತಂಬಾಕಿನಿAದ ಆಗುವಂತಹ ದುಷ್ಪರಿಣಾಮಗಳ ಕುರಿತು, ವರ್ಷವಿಡೀ ಶಾಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಂಬಾಕಿನ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ತಂಬಾಕು ದಾಳಿಗಳನ್ನು ಹಮ್ಮಿಕೊಳ್ಳುವ ಮೂಲಕ ಕೋಟ್ಪಾ-2003ರ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಹಾಗೂ ಗುಂಪು ಚರ್ಚೆ ಮೂಲಕ ಜನರಲ್ಲಿ ತಂಬಾಕಿನ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಐಇಸಿ ಕಾರ್ಯಕ್ರಮಗಳ ಮೂಲಕ ಹಳ್ಳಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಕೊನೆಯದಾಗಿ ಈ ಕಾರ್ಯಕ್ರಮವು ಯಶಸ್ವಿಯಾಗಲು ಯುವಜನತೆ, ಸಾರ್ವಜನಿಕರು, ಎಲ್ಲಾ ಇಲಾಖೆಗಳ ಸಹಕಾರ ಬಹಳ ಅತ್ಯವಶ್ಯಕ. ಆದ್ದರಿಂದ ತಂಬಾಕನ್ನು ತ್ಯಜಿಸಲು ಮತ್ತು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರ ಸಹಕಾರವನ್ನು ಕೋರಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ. ತಿಪ್ಪೇಸ್ವಾಮಿ ಭಾಗವಹಿಸಿದ್ದರು.