ರಾಮದುರ್ಗ,ಜೂ3: ಸ್ಥಳೀಯ ಸಿ.ಎಸ್.ಬೆಂಬಳಗಿ ಕಾಲೇಜಿನಲ್ಲಿ ರೋವರ್-ರೇಂಜರ್, ಎನ್ನೆಸ್ಸೆಸ್‍ಹಾಗೂ ಐಕ್ಯೂಎಸಿ ಘಟಕಗಳ ಅಡಿಯಲ್ಲಿ ವಿಶ್ವ ತಂಬಾಕು ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತಾಲ್ಲೂಕು ಆರೋಗ್ಯ ಕೇಂದ್ರದ ಶಿಕ್ಷಣ ಅಧಿಕಾರಿ ಎಸ್. ಡಿ.ಐನಾಪುರ ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಶಂಕರ ಲಕಾಟಿ ಆಗಮಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿದರು.
ತಾಲ್ಲೂಕು ಆಸ್ಪತ್ರೆಯ ದಂತ ವೈದ್ಯೆ ಡಾ. ನಾಗರತ್ನ ಮಾತನಾಡಿ, ಮನುಷ್ಯನ ಅರಿವಿಗೆ ಬರದ ಹೊರತು ಯಾರು ದುಷ್ಚಟಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಎಲ್ಲರೂ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಂ.ಸಕ್ರಿ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಪಿ.ಬಿ. ತೆಗ್ಗಿಹಳ್ಳಿ ಹಾಜರಿದ್ದರು.
ಎನ್ನೆಸ್ಸೆಸ್ ಸಂಯೋಜಕ ಎಂ.ಎನ್. ಭಜಂತ್ರಿ ಸ್ವಾಗತಿಸಿದರು. ರೇಂಜರ್ ಅಧಿಕಾರಿ ಮಂಜುಳಾ ಡಿ. ಮೂಡ್ಲವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯಶ್ರೀ ಪಾಟೀಲ ಹಾಗೂ ಐಶ್ವರ್ಯ ಜಗತಾಪ ಕಾರ್ಯಕ್ರಮ ನಿರೂಪಿಸಿದರು.