ವಿಶ್ವ ಡೇರಿ ಶೃಂಗಕ್ಕೆ ಕೆಎಂಎಫ್ ಪ್ರಾಯೋಜಕತ್ವ

ಬೆಂಗಳೂರು, ಆ. ೪- ದೇಶದಲ್ಲಿ ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌ನ ವಿಶ್ವ ಡೇರಿ ಶೃಂಗ ಸಭೆಯು ಮುಂದಿನ ತಿಂಗಳ ಸೆ. ೧೨ ರಿಂದ ೧೫ರವರೆಗೆ ಉತ್ತರ ಪ್ರದೇಶದ ನೋಯಿಡಾದಲ್ಲಿ ನಡೆಯಲಿದ್ದು, ಈ ಸಮಾವೇಶದಲ್ಲಿ ಅಮೂಲ್ ಜತೆಗೆ ಕರ್ನಾಟಕದ ಹಾಲು ಮಹಾ ಮಂಡಳಿಯೂ ಪ್ರಾಯೋಜಕತ್ವ ಪಡೆದುಕೊಂಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಕೆಎಂಎಫ್ ಅಂತಾರಾಷ್ಟ್ರೀಯ ಡೇರಿ ಫೆಡರೇಷನ್ ವಿಶ್ವ ಡೇರಿ ಶೃಂಗಸಭೆಯಲ್ಲಿ ಪ್ರಪಂಚದಾದ್ಯಂತ ೧,೫೦೦ ಸಂಖ್ಯೆಯ ಅಭ್ಯರ್ಥಿಗಳು ಭಾಗವಹಿಸುತ್ತಿದ್ದು, ಡೇರಿ ಸಂರಕ್ಷಣಾ ಕಂಪನಿಗಳ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳು ಮತ್ತು ಉದ್ಯೋಗಿಗಳು ಡೇರಿ ರೈತರು, ಡೇರಿ ಉದ್ಯಮ ಪೂರೈಕೆದಾರರ, ಶಿಕ್ಷಣ ತಜ್ಞರು, ಸರ್ಕಾರಿ ಪ್ರತಿನಿಧಿಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ.
ಸಭೆಯಲ್ಲಿ ಡೇರಿ ವಲಯಕ್ಕೆ ಸುರಕ್ಷಿತ ಮತ್ತು ಸಮರ್ಥನೀಯ ಡೇರಿ ಉತ್ಪನ್ನಗಳೊಂದಿಗೆ ಜಗತ್ತು ಹೇಗೆ ಪೋಷಿಸಲು ಕೊಡುಗೆ ನೀಡುತ್ತದೆ ಎಂಬುದರ ಕುರಿತು ಜ್ಞಾನ ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ.
ಇದಲ್ಲದೆ ಹವಮಾನ ಬದಲಾವಣೆಗೆ ಸಂಬಂಧಿಸಿದಂತೆ ಸವಾಲುಗಳನ್ನು ಎದುರಿಸಿ ಲಾಭದಾಯಕವಾಗಿ ಅಳವಡಿಸಿ ಕೊಳ್ಳಲು ಇದು ಸಹಕಾರಿಯಾಗುತ್ತದೆ. ಆಸಕ್ತಿ ಡೇರಿ ಉತ್ಸಾಹಿಗಳು, ರೈತರು, ಶಿಕ್ಷಣ ತಜ್ಞರು, ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭೇಟಿ ನೀಡಲು ಹಾಗೂ ಡೇರಿ ಉದ್ಯಮದ ಬಗ್ಗೆ ಮತ್ತಷ್ಟು ಅರಿವು ಹೆಚ್ಚಿಸಿಕೊಳ್ಳಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕ ಮಹಾಮಂಡಳಿ ನಿಗಮ ಸ್ವಾಗತಿಸಿದೆ.
ಕರ್ನಾಟಕ ಹಾಲು ಮಹಾಮಂಡಳಿಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವಾಗಿದ್ದು, ಗ್ರಾಹಕರಿಗೆ ನಂದಿನಿ ಬ್ರಾಂಡ್‌ನ ಶುದ್ಧ ಹಾಗೂ ತಾಜಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಿ ಮನೆ ಮಾತಾಗಿದೆ. ದೇಶದ ಇತರೆ ರಾಜ್ಯಗಳಲ್ಲಿಯೂ ಸಹ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲವನ್ನು ವಿಸ್ತರಿಸಲಾಗಿದೆ.
ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಹಾಮದ ವ್ಯವಹಾರ ಅಭಿವೃದ್ಧಿಯ ಏಳಿಗೆಗೆ ಹೆಚ್ಚಿನ ಒತ್ತು ನೀಡಿದ್ದು ಆರ್ಥಿಕ ವರ್ಷದಲ್ಲಿ ೩೦,೦೦೦ ಕೋಟಿ ರೂ. ವಹಿವಾಟು ನಡೆಸುವ ಗುರಿ ಇದೆ. ಕಹಾಮವು ಹೈನು ಉತ್ಪಾದಕರಿಗೆ ಒಟ್ಟಾರೆ ದಿನವಹಿ ೨೭ ಕೋಟಿ ರೂ. ಪಾವತಿಸುತ್ತಿದ್ದು, ವಹಿವಾಟಿನ ಲಾಭಾಂಶ ೧ ರೂ.ನಲ್ಲಿ ರೈತರಿಗೆ ೮೦ ಪೈಸೆ ಪಾವತಿಸಿ ಕೇವಲ ೨೦ ಪೈಸೆಯಷ್ಟು ಆಡಳಿತಾತ್ಮಕ ವೆಚ್ಚಗಳನ್ನು ಭರಿಸಲು ಬಳಕೆಯಾಗುತ್ತಿದೆ.

ಗುಜರಾತ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಡೇರಿ ಫೆಡರೇಷನ್‌ನ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮದರ್ ಡೈರಿ ವ್ಯವಸ್ಥಾಪಕ ನಿರ್ದೇಶಕ ಮನೀಶ್, ಕರ್ನಾಟಕ, ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಲಿಮಿಟೆಡ್‌ನ ಎಂ.ಡಿ. ಬಿ.ಸಿ. ಸತೀಶ್, ಎನ್‌ಡಿಡಿಬಿ ಅಧ್ಯಕ್ಷ ಮೀನೇಶ್ ಶಾ, ಶಾಮಲ್ ಭಾಯಿ ಪಟೇಲ್, ಅಮೂಲ್ ಅಧ್ಯಕ್ಷ ಆರ್.ಎಸ್. ಸೋದಿ, ಎಂಡಿ ಅಮೂಲ್‌ರವರು ಭಾಗವಹಿಸಿದ್ದರು.