ವಿಶ್ವ ಡಯಾಬಿಟಿಕ್ ದಿನಂದು ಉಚಿತ ತಪಾಸಣಾ ಶಿಬಿರ

ಮಂಗಳೂರು, ನ.೧೯- ಇತ್ತೀಚೆಗೆ ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋಗೋಲ್ಡ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ದಕ್ಷಿಣ ಭಾರತೀಯ ಸಾಂಸ್ಕೃತಿಕ ಸಂಘ (ರಿ) ದೆಹಲಿ, ಗಿರಿಜಾ ಹೆಲ್ತ್ ಕೇತ್ ಮತ್ತು ಸರ್ಜಿಕಲ್ಸ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ವಿಶ್ವ ಡಯಾಬಿಟಿಕ್ ದಿನಾಚರಣೆಯ ಪ್ರಯುಕ್ತ ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರ- ೨೦೨೦ ನಗರದ ಮಂಗಳಾದೇವಿ ಸಭಾಭವನದಲ್ಲಿ ಮೆಟ್ರೋ ಗೋಲ್ಡ್ ಅಧ್ಯಕ್ಷ ಜಿ.ಕೆ. ಹರಿಪ್ರಸಾದ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಲಯನ್ ವಸಂತ ಕುಮಾರ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಕ್ಕರೆ ಖಾಯಿಲೆ ಬಗ್ಗೆ ಸಮಗ್ರ ಮಾಹಿತಿಯನ್ನು ಡಾ| ಅಣ್ಣಯ್ಯ ಕುಲಾಲ ಉಳ್ಕೂರು ನೀಡಿದರು. ಮುಖ್ಯ ಅತಿಥಿ ಡಾ| ಸುಜಯ ಭಂಡಾರಿ ಪ್ರಸ್ತುತ ಸರಕಾರದ ಕೋವಿಡ್- ೧೯ ನ ಜಾಗೃತ ಸೂತ್ರಗಳಾದ ಎಸ್.ಎಂ.ಎಸ್ (ಎಸ್=ಸಾಮಾಜಿಕ ಅಂತರ, ಎಂ= ಕಡ್ಡಾಯ ಮುಖ ಕವಚ, ಎಸ್ = ಸ್ಯಾನಿಟೈಶೇಷನ್) ನ್ನು ಪ್ರತಿಯೊಬ್ಬರು ಪಾಲಿಸುವಂತೆ ಸಭಿಕರಿಗೆ ತಿಳಿ ಹೇಳಿದರು. ಖಜಾಂಜಿ ಪ್ರೀತಿ ರೈ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಿದರು.
ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ, ರವೀಂದ್ರ ಶೆಟ್ಟಿ, ನರೇಂದ್ರ ರೈ, ಸದಾನಂದ ರಾವ್ ಪೇಜಾವರ, ರಮೇಶ್ ಶೆಟ್ಟಿ, ಚಂದ್ರಶೇಖರ್ ಆಕಾಶವಾಣಿ ಹಾಡುಗಾರ, ದಿವ್ಯ ಶೆಟ್ಟಿ, ತ್ರಿವೇಣಿ ಕ್ಲಬ್ ಅಧ್ಯಕ್ಷ, ಶಾಲಿನಿ ಸುವರ್ಣ ಮುತಾಂದವರು ಪಾಲ್ಗೊಂಡು, ೨೫೦ ಕ್ಕಿಂತಲೂ ಹೆಚ್ಚು ಜನರು ಸದುಪಯೋಗ ಪಡೆದರು.
ಕಾರ್ಯಕ್ರಮ ಪ್ರಾರ್ಥನೆಯನ್ನು ಶ್ರೀಮತಿ ಜ್ಯೋತಿ ಚಂದ್ರಶೇಖರ್ ಆಕಾಶವಾಣಿ ಹಾಡುಗಾರ್ತಿ ನೇರವೇರಿಸಿದರು. ಕಾರ್ಯದರ್ಶಿ ನ್ಯಾಯವಾದಿ ಪನ್ನ ಪ್ರಸಾದ್ ಧನ್ಯವಾದವಿತ್ತರು. ರಕ್ತದೊತ್ತಡ, ಮಧುಮೇಹ, ರಕ್ತಪರೀಕ್ಷೆ, ಆಮ್ಲಜನಕ ಶುದ್ಧತ್ವ ಮಟ್ಟ, ನಾಡಿ ಬಡಿತ ಪರೀಕ್ಷೆ ನಡೆಯಿತು.