ವಿಶ್ವ ಜಲದಿನೋತ್ಸವ- ವಿಶ್ವ ಗ್ರಾಹಕರ ದಿನಾಚರಣೆ


ಸಂಡೂರು:ಮಾ: 30:  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಪುರಸಭೆ, ಗ್ರಾಮೀಣ ನೀರು ಸರಬರಾಜು, ಶಿಕ್ಷಣ ಇಲಾಖೆ. ಕೆ.ಎಂ.ಎಫ್. ಸಂಸ್ಥೆಯ ವತಿಯಿಂದ ಪಟ್ಟಣದ ಎ.ಪಿ.ಎಂ.ಸಿ. ಶಾಲೆಯ ಅವರಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ, ವಿಶ್ವ ಜಲ ದಿನೋತ್ಸವ ಕಾರ್ಯಕ್ರಮವನ್ನು ಜಎ.ಎಂ.ಎಫ್.ಸಿ. ನ್ಯಾಯಾಧೀಶರು, ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ದೇವರೆಡ್ಡಿಯವರು ಸಸಿಗಳಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಷಡಾಕ್ಷರಿ ಹೆಚ್. ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ವಿರ್ಶವ ಜಲ ದಿನೋತ್ಸವ ಕುರಿತು ಹಿರಿಯ ವಕೀಲ ಅರ್. ವೀರೇಶಪ್ಪ, ವಿಶ್ವ ಗ್ರಾಹಕರ ದಿನಾಚರಣೆ ಕುರಿತು ಕೆ.ಎಂ. ಎಫ್. ಸಂಡೂರಿನ ಕಾರ್ಯದರ್ಶಿಗಳಾದ ಎಂ. ಸೋಮಶೇಖರ ಅದ್ಬುತವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಬಿ.ಎಸ್. ಮಂಜುನಾಥ ವಕೀಲರು ಪ್ರಾರ್ಥಿಸಿದರು, ಹೆಚ್. ಕುಮಾರಸ್ವಾಮಿ ಪ್ಯಾನಲ್ ವಕೀಲರು ಸ್ವಾಗತಿಸಿದರು, ಡಿ.ನಾಗರಾಜ ಪ್ಯಾನಲ್ ವಕೀಲರು ನಿರೂಪಿಸಿದರು, ಎಂ. ಅಂಜಿನಪ್ಪ ಪ್ಯಾನಲ್ ವಕೀಲರು ವಂದಿಸಿದರು. ಈ ಸಂದರ್ಭದಲ್ಲಿ ಬಾರ್ ಅಷೋಷಿಯೇಷನ್ ಅಧ್ಯಕ್ಷ ಬಿ. ವಿಜಯಕುಮಾರ, ಉಪಾಧ್ಯಕ್ಷ ಭುಜಂಗನಗರದ ಕಣ್ಣಿ ಕುಮಾರಸ್ವಾಮಿ, ಕಾರ್ಯದರ್ಶಿ ಎನ್.ಎಂ. ನಟರಾಜಶರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಪುರಸಭೆಯ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್, ಎ.ಇ.ಅರ್. ಡಬ್ಲ್ಯೂ.ಎಸ್ ಇಂಜಿನೀಯರ ಸಂಡೂರಿನ ವಿನಾಯಕ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಮಂಜುನಾಥಗೌಡರು, ಎ.ಪಿ.ಎಂ.ಸಿ. ಪ್ರೌಢಶಾಲಾ ಮುಖ್ಯಗುರುಗಳಾದ ಹೆಚ್.ಎನ್. ಬೋಸ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗುಡೇಕೋಟೆ ನಾಗರಾಜ, ಟಿ.ಎಂ. ಶಿವಕುಮಾರ್, ಅರಳಿ ಮಲ್ಲಿಪ್ಪ ಮೇಟಿ ಭುವನೇಶ್, ಜಿ.ಕೆ. ರೇಖಾ, ಅರ್. ವಿಷ್ಣುಕುಮಾರ್, ಅರ.ವಿ. ದತ್ತುರಾಜ, ಉಮ್ಮಾರ್ ಫಾರೂಕ್, ಎಂ.ಪಿ.ಎಂ. ಸುರೇಂದ್ರಸ್ವಾಮಿ, ಸಿದ್ದಿವಿನಾಯುಕ ಪಾಟೀಲ್, ಅಲ್ಲದೆ ಹಲವಾರು ಗಣ್ಯರು ಉಪಸ್ಥಿತರಿದ್ದರು.