
ಕೋಲಾರ,ಮಾ,೨೩-ಇತ್ತಿಚೀನ ದಿನಗಳಲ್ಲಿ ಗ್ರಾಹಕರು ಖರೀದಿಸುತ್ತಿರುವ ದಿನ ನಿತ್ಯದ ವಸ್ತುಗಳಲ್ಲಿ ಮೋಸವಾಗುತ್ತಿರುವುದರಿಂದ ಗ್ರಾಹಕರು ಕಾನೂನು ರೀತಿಯ ಹಕ್ಕನ್ನು ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನೀಲ್ ಎಸ್.ಹೊಸಮನಿ ಅವರು ತಿಳಿಸಿದರು.
ಇಂದು ಹೊರವಲಯದ ಮಂಗಸಂದ್ರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಕೀಲರ ಸಂಘ, ಕೋಲಾರ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಇವರ ಸಹಯೋಗದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ -೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರಿಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಪ್ಯಾಕೇಜ್ ಗುಣಮಟ್ಟವನ್ನು ಗ್ರಾಹಕರು ಪರಿಶೀಲಿಸಬೇಕು. ಪ್ಯಾಕೇಜ್ ಒಳಗಿನ ಪದಾರ್ಥಗಳ ವಿವg ಗಳನ್ನು ಆ ಪ್ಯಾಕೇಜ್ ಮೇಲೆ ಮುದ್ರಿಸಿರಬೇಕು. ಗ್ರಾಹಕರು ತಾವು ಖರೀದಿಸಿರುವ ವಸ್ತು ವಿನಲ್ಲಿ ಗುಣಮಟ್ಟವಿಲ್ಲದಿದ್ದಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ಹೋಗಬಹುದು. ನ್ಯಾಯೋಚಿತ ಡಿಜಿಟಲ್ ಹಣಕಾಸು ವ್ಯವಹಾರವನ್ನು ಗ್ರಾಹಕರು ಹೆಚ್ಚಾಗಿ ಮಾಡಬೇಕು. ಪ್ರತಿದಿನ ದಿನಚರಿಯಲ್ಲಿ ಆನ್‌ಲೈನ್ ಟಿಕೇಟ್ ಬುಕ್ಕಿಂಗ್ ಅಲ್ಲದೇ ಸಣ್ಣ ಪುಟ್ಟ ಆಂಗಡಿಗಳಲ್ಲಿಯೂ ಈ ಆನ್‌ಲೈನ್ ಪಾವತಿಯನ್ನು ಮಾಡಬೇಕು. ಡಿಜಿಟಲ್ ಪಾವತಿ ಮಾಡುವುದರಿಂದ ದಾಖಲೆಗಳು ಇರುತ್ತದೆ.
ಗ್ರಾಹಕರು ವಸು ಗಳನ್ನು ಖರೀದಿಸುವಾಗ ಆ ವಸ್ತುವಿನ ಎಂ.ಆರ್.ಪಿ, ಪ್ರಮಾಣ, ದಿನಾಂಕ ಇವುಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅz sಕ್ಷರಾದ ಸೈಯದ್ ಅನ್ಸರ್ ಕಲಿಂ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಾಹಿತಿ ಹಕ್ಕು, ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು, ದೂರು ನೀಡುವ ಹಕ್ಕನ್ನು ಗ್ರಾಹಕರು ಪಡೆದಿರುತ್ತಾರೆ. ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಗ್ರಾಹಕರಿಗೆ ಅವg ಖರೀದಿಸಿದ ವಸ್ತುವಿನಲ್ಲಿ ಅನ್ಯಾಯ ಕಂಡುಬಂದಲ್ಲಿ ರಾಜ್ಯ ಮತ್ತು ಜಿಲ್ಲೆಗಳಳ್ಲಿ ಗ್ರಾಹಕರ ನ್ಯಾಯಾಲಯಗಳಿವೆ ಅಲ್ಲಿ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಗ್ರಾಹಕರ ಸೇವೆಯಲ್ಲಿ ದಕ್ಕೆ ಉಂಟಾದಾಗ ಯಾವುದೇ ವ್ಯಕ್ತಿ ೩ ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳ ಎಲ್ಲರೂ ಕೂಡ ಈ ಕಾನೂನು ಸೇವೆಯನ್ನು ಉಚಿತವಾಗಿ ಪಡೆಯಬಹುದು. ಈ ವಿಷಯದಲ್ಲಿ ವಕೀಲರ ಅವಶ್ಯಕತೆ ಇದ್ದಲ್ಲಿ ಉಚಿತವಾಗಿ ವಕೀಲರ ವ್ಯವಸ್ಥೆಯನ್ನು ಕಾನೂನು ಸೇವಾ ಪ್ರಾಧಿಕಾರವೂ ಮಾಡಿಕೊಡುತ್ತದೆ. ಈ ಗ್ರಾಹಕರ ನ್ಯಾಯಾಲಯ ಕಛೇರಿಯು ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯದ ಆವರಣದಲ್ಲಿರುತ್ತದೆ. ಕೇಸು ಹಾಕಲು ನ್ಯಾಯಾಲಕ್ಕೆ ನೀq ಬೇಕಾದ ಶುಲ್ಕವನ್ನು ಈ ಕಾನೂನು ಸೇವಾ ಪ್ರಾಧಿಕಾರದಿಂದ ನೀಡಲಾಗುವುದು.
ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನಿನ ನೇರವನ್ನು ಮತ್ತು ಪ್ಯಾನಲ್ ವಕೀಲರನ್ನು ನೀಡಿ ನ್ಯಾಯ ಒದಗಿಸುತ್ತೇವೆ ಎಂದು ತಿಳಿಸಿದರು.
ಗ್ರಾಹಕರಿಗೆ ಆಗುತ್ತಿರುವಂತಹ ಅನ್ಯಾಯವನ್ನು ತಡೆಗಟ್ಟಬೇಕು. ನಾವು ಡಿಜಿಟಲ್ ಯುಗಕ್ಕೆ ಕಾಲಿಟ್ಟಿದ್ದೇವೆ. ಗ್ರಾಹಕರಿಗೆ ವಸ್ತುವನ್ನು ಗುಣಮಟ್ಟದಲ್ಲಿ ಸುರಕ್ಷತೆ ನೀq ಬೇಕು. ಗ್ರಾಹಕರು ವಸ್ತುವಿನ ಗುಣಮಟ್ಟವನ್ನು ಪರಿಶೀಲಿಸಿ ತೆಗೆದುಕೊಳ್ಳಬೇಕು. ಕೌಟಿಲ್ಯನ ಕಾಲz ಲ್ಲಿ ತೂಕ ಮತ್ತು ಅಳತೆಯಲಿ ಕಡಿಮೆ ಮಾಡಿದರೆ ಕಠಿಣ ಶಿಕ್ಷೆಯಾಗುತ್ತಿತ್ತು.
ಮಾರುವವರು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಜಾಹೀರಾತುಗಳು ನೀಡುವಾಗ ಎಚ್ಚರಿಕೆಯಿಂದ ನೀಡಬೇಕು. ಇದರಲ್ಲಿ ಸಮಸ್ಯೆ ಕಂಡು ಬಂದರೆ ಮಾಲೀಕರು ಮತು ಜಾಹೀರಾತಿನಲ್ಲಿ ನಟಿಸಿರುವವರಿಗೆ ಶಿಕ್ಷೆಯಾಗುತ್ತದೆ. ಈ ಜಾಹೀರಾತಿನಿಂದ ಗ್ರಾಹಕರಿಗೆ, ಸಾರ್ವಜನಿಕರಿಗೆ ಹಾನಿ ಅಥವಾ ದುಷ್ಟರಿಣಾಮಗಳು ಉಂಟಾಗುತ್ತದೆಯೇ ಎಂಬುದನ್ನು ರಿಶೀಲಿಸಿ ಮಾಲೀಕರು ಜಾಹೀರಾತು ನೀಡಬೇಕು ಎಂದು ತಿಳಿಸಿದರು.