ವಿಶ್ವ ಗುರು ಭಾರತ ಪ್ರತಿಷ್ಠಾನದ ಗೌರವ ಸಲಹೆಗಾರರಾಗಿ ನೇಮಕ

ದಾವಣಗೆರೆ. ಜ.೨;ವೈದ್ಯಕೀಯ ಸವಾಲಿನ ಮಕ್ಕಳನ್ನು ಪೋಷಿಸುತ್ತಿರುವ ಮಧ್ಯ ಕರ್ನಾಟಕದ ಏಕೈಕ ಸೇವಾ ಸಂಸ್ಥೆ ದಾವಣಗೆರೆ ತಾಲೂಕಿನ ದೊಡ್ಡಬಾತಿಯ ವಿಶ್ವಗುರು ಭಾರತ ಪ್ರತಿಷ್ಠಾನದ ಗೌರವ ಸಲಹೆಗಾರರಾಗಿ ದಾವಣಗೆರೆಯ “ಸಾಂಸ್ಕೃತಿಕರಾಯಭಾರಿ”, “ಸಾಂಸ್ಕೃತಿಕ ಸೌರಭ” ಅಭಿನಂದನಾ ಗ್ರಂಥ ಸೇರಿದಂತೆ ಕಳೆದ ನಾಲ್ಕು ದಶಕಗಳಿಂದ ಕನ್ನಡ ನಾಡು, ನುಡಿ, ಸಾಮಾಜಿಕ ಕಾಳಜಿ ಸೇವಾ ಮನೋಭಾವನೆಯ ಸಾಲಿಗ್ರಾಮ ಗಣೇಶ್ ಶೆಣೈಯವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಮೇಗಳಮನಿ ತಿಳಿಸಿದ್ದಾರೆ.ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತಿಸುವ ಪ್ರಯತ್ನದ ರೂವಾರಿಗಳಲ್ಲಿ ಒಬ್ಬರಾದ  ಶೆಣೈಯವರು ಪ್ರತಿಷ್ಠಾನದ ಆಶ್ರಯದಲ್ಲಿ ನಿರಂತರವಾಗಿ ನಡೆಸುತ್ತಿರುವ “ನಮ್ಮ ಸಾಧಕರು” ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುವ ಶೆಣೈಯವರಿಗೆ ಪ್ರತಿಷ್ಠಾನದ ಸರ್ವ ಸದಸ್ಯರು ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೃದಯ ಪೂರ್ವಕ ಸ್ವಾಗತಿಸಿದ್ದಾರೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಹೊಸಮನಿ ತಿಳಿಸಿದ್ದಾರೆ.