ವಿಶ್ವ ಕುಂದಾಪುರ ಇಂಗ್ಲಿಷ್ ಕೃತಿ ಪ್ರಕಟಣೆಗೆ ಸಿದ್ಧ

ಕೋಲಾರ, ನ,೨೪- ಪತ್ರಕರ್ತ ಹಾಗೂ ಕರ್ನಾಟಕ ಸಾಹಿತ್ಯಅಕಾಡೆಮಿ ಪುರಸ್ಕೃತಅನುವಾದಕ-ಲೇಖಕ ವಿಶ್ವಕುಂದಾಪುರಇವರ ಚೊಚ್ಚಲ ಇಂಗ್ಲಿಷ್‌ಕೃತಿ ‘ಕರ್ನಾಟಕ ಸ್ಟೂಡೆಂಟ್ಸ್‌ಇನ್ ಫ್ರೀಡಂ ಮೂವ್‌ಮೆಂಟ್ ಪ್ರಕಟಣೆಗೆ ಸಿದ್ಧವಾಗಿದೆ. ಸ್ವಾತಂತ್ರ್ಯಅಮೃತ ಮಹೋತ್ಸವ ಸಂಭ್ರಮದ ಸಂದರ್ಭಕ್ಕೆ ಬರೆದಿರುವ ಈ ಕೃತಿ, ದೇಶದ ವಿಮೋಚನೆಗಾಗಿ ನಡೆದ ವೀರೋಚಿತ ಹೋರಾಟದಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪಾತ್ರದಕಿರು ಪರಿಚಯ ಮಾಡಿಸುತ್ತದೆ.
ಕುಂದಾಪುರದ ‘ಜನಪ್ರತಿನಿಧಿ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ. ಹಿರಿಯಚಿಂತಕ ಹಾಗೂ ಲೇಖಕ ಡಾ. ಜಿ. ರಾಮಕೃಷ್ಣ ಮುನ್ನುಡಿ ಬರೆದಿದ್ದಾರೆ. ನಿವೃತ್ತಅಧ್ಯಾಪಕಿ-ಲೇಖಕಿ ಡಾ. ಜಿ. ಪಾರ್ವತಿ ಐತಾಳ್ ಅವರ ಹಿನ್ನುಡಿಯಿದೆ.
ಕೊಂಕಣಿ ಲೇಖನ ಸರಣಿ, ಕಿರು ನಾಟಕ
ದೇಶದ ಸ್ವಾತಂತ್ರ್ಯದ೭೫ನೇ ವರ್ಷಾಚರಣೆಯ ಪ್ರಯುಕ್ತ ವಿಶ್ವಕುಂದಾಪುರತಮ್ಮ ಮಾತೃ ಭಾಷೆಕೊಂಕಣಿಯಲ್ಲಿ ಬರೆಯುತ್ತಿರುವ ‘ಸ್ವಾತಂತ್ರ್ಯ ಲಡಾಯಿಂತು ವಿದ್ಯಾರ್ಥಿ ಲೇಖನ ಸರಣಿ ಮಣಿಪಾಲದಿಂದ ಹೊರಬರುತ್ತಿರುವ ‘ಪನವಾರ’ ಮಾಸ ಪತ್ರಿಕೆಯಲ್ಲಿ ಕಳೆದೊಂದು ವರ್ಷದಿಂದ ಪ್ರಕಟವಾಗುತ್ತಿದೆ. ಅಲ್ಲದೆ, ವಿಮೋಚನಾ ಸಂಗ್ರಾಮದಲ್ಲಿ ವಿದ್ಯಾರ್ಥಿಗಳ ಪಾತ್ರದಕುರಿತುಇವರು ‘ನಾವು ಎಳೆಯರು ಸ್ವಾತಂತ್ರ್ಯ ವೀರರು’ ಎಂಬ ಕಿರು ನಾಟಕಗುಚ್ಛವನ್ನು ಬರೆದಿದ್ದು ಮೂರು ಪ್ರದರ್ಶನಕಂಡಿವೆ.