
ವಿಜಯಪುರ:ಮಾ.10: ಪ್ರತಿ ವರ್ಷ ದಿನೇ ದಿನೇ ಕಿಡ್ನಿ ಸಮಸ್ಯೆಗಳು ಉ ಲ್ಬಣವಾಗುತ್ತಿರುವುದಕ್ಕೆ ಮುಖ್ಯ ಕಾರಣ ಸೇವಿಸುವ ಕಳಪೆ ಆಹಾರ ಹಾಗೂ ಕಡಿಮೆ ನೀರು ಸೇವನೆ ಇಂದ ಬರುವ ಮದುಮೇಹ ,ರಕ್ತದೊತ್ತಡ, ಹರಳು ಹಾಗೂ ಅತಿಯಾದ ನೋವು ನಿವಾರಿಕ ಸೇವನೆ. ಎಂದು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದ ನಗರದ ಹೆಸರಾಂತ ತಜ್ಞರಾದ ಡಾ. ನವೀನ್ ಪಟ್ಟಣಶೆಟ್ಟಿ ಹೇಳಿದರು.
ನಗರದ ಮೀನಾಕ್ಷಿ ಚೌಕದಲ್ಲಿನ ಕಿಡ್ನಿಕೇರ್ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಮಾತನಾಡಿದ ಡಾಕ್ಟರ್ ನವೀನ್ ಅವರು, ಈ ವರ್ಷದ ದಿನಾಚರಣೆಯ ಘೋಷಣೆ ಎಂದರೆ ಮೂತ್ರಪಿಂಡ ವೈಫಲ್ಯ ತಿಳುವಳಿಕೆ ,ಜಾಗೃತಿ ಹಾಗೂ ರೋಗ ಬರದಂತೆ ಕಾಳಜಿ ವಹಿಸುವುದು ಮತ್ತು ಉಪಚಾರಕ್ಕೆ ಸನ್ನದ್ಧವಾಗುವುದು ಎಂದು ತಿಳಿಸಿದರು. ಆದ್ದರಿಂದ ಪ್ರತಿ ವರ್ಷ ಒಮ್ಮೆಯಾದರೂ ರಕ್ತದ ಕ್ರಿಯಾಟಿನ್ ಹಾಗೂ ಮೂತ್ರದ ಅಲ್ಗೋಮಿನ್ ಗಳನ್ನು ಮದು ಮೇಹಿಗಳು ,ರಕ್ತದ ಒತ್ತಡ ಇರುವವರು, ಹರಳಿನ ರೋಗಿಗಳು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಹೃದಯ ತಜ್ಞರಾದ ಡಾ. ಸೃಷ್ಟಿ ವಾಳದ್ ಮಾತನಾಡಿ, ದೇಹದ ಅಂಗಾಂಗಳು ಸಮಯೋಚಿತ ಕಾರ್ಯಮಾಡುತ್ತದೆ ಆದ್ದರಿಂದ ಹೃದಯ ರೋಗಿಗಳಲ್ಲಿ ಕಿಡ್ನಿ ಸಮಸ್ಯೆ ಉಂಟಾಗುವುದು ಹಾಗೂ ಕಿಡ್ನಿ ರೋಗಿಗಳು ರಕ್ತದ ಒತ್ತಡ ಮಾತ್ರೆಗಳನ್ನು ತಪ್ಪದೇ ತೆಗೆದುಕೊಳ್ಳಬೇಕು.
ಕಾರ್ಯಕ್ರಮದ ರೂವಾರಿಯಾದ ಡಾ. ಸುರೇಶ್ ಕಾಗಲ್ಕರ್ ರೆಡ್ಡಿ ಮಾತನಾಡಿ, ಉಷ್ಣವಲಯದ ಪ್ರದೇಶಗಳಲ್ಲಿ ಕಿಡ್ನಿ ಹರಳಿನ ಸಮಸ್ಯೆ ಅಂದರೆ ಹೆಚ್ಚಾಗಿ ಹೊಟ್ಟೆ ನೋವಿನ ವಿಪರೀತ ಸಮಸ್ಯೆ ನೋಡುತ್ತಿದ್ದೇವೆ ಆದ್ದರಿಂದ ಶುಚಿಯಾದ, ಸ್ವಚ್ಛ ನೀರನ್ನು ಸುಮಾರು ಆರು ಗ್ಲಾಸುಗಳಿಗಿಂತ ಹೆಚ್ಚಾಗಿ ಪ್ರತಿದಿನ ತಪ್ಪದೆ ಕುಡಿಯಬೇಕು ಹಾಗೂ ಹೊಟ್ಟೆಯ ಪಕ್ಕದ ಕಡೆ ನೋವುಂಟಾದಲ್ಲಿ ಕಿಡ್ನಿ ಸೋನೋಗ್ರಪಿ ಮಾಡಿಸಿಕೊಂಡು ಹರಳುಗಳ ಇದ್ದರೆ , ನೂತನ ಸುಧಾರಿತ ಲೇಸರ್ ಚಿಕಿತ್ಸೆಯಿಂದ ಹರಳಿನ ಚಿಕಿತ್ಸೆ ನಮ್ಮ ಆಸ್ಪತ್ರೆಯಲ್ಲಿ ಮಾಡಲಾಗುವುದು ಎಂದು ತಿಳಿಸಿದರು
ಖ್ಯಾತ ನರರೋಗ ತಜ್ಞರಾದ ಡಾಕ್ಟರ್ ಕಲ್ಲಪ್ಪ ಹುಗ್ಗಿ ಮಾತನಾಡಿ, ನರಗಳ ದೌರ್ಬಲ್ಯ ಇರುವ ರೋಗಿಗಳಲ್ಲಿ ಮೂತ್ರದ ಚೀಲದ ದೌರ್ಬಲ್ಯ,, ಮೂತ್ರ ವಿಸರ್ಜನೆ ಕಷ್ಟದಾಯಕವಾಗಿರುತ್ತದೆ. ಆದ್ದರಿಂದ ಸೂಕ್ತ ಚಿಕಿತ್ಸೆ ಹಾಗೂ ಕೀಗಲ್ ವ್ಯಾಯಾಮ, ಸಿಐಸಿ ಛಿಚಿಣheಣeಡಿisಚಿಣioಟಿ ಮುಖಾಂತರ ಕಿಡ್ನಿ ಕಾಪಾಡಿಕೊಳ್ಳಬೇಕು ಎಂದರು
ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಆದ ಡಾಕ್ಟರ್ ಅವಿನಾಶ್ ಜುಗತಿ ಮಾತನಾಡಿ, ಬಿಪಿ ಕಡಿಮೆ ಇರುವ ರೋಗಿಗಳಲ್ಲಿ ಕಿಡ್ನಿ ವೈಫಲ್ಯ ಆಗುವುದು ಆದ್ದರಿಂದ ನಮ್ಮ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಯಿಂದ ರಕ್ತದ ಕ್ರಿಯಾಟಿನ್ ಹಾಗೂ ದೇಹದ ಬಾವುಗಳನ್ನು ಕಡಿಮೆ ಮಾದಲಾಗುವುದು ಎಂದರು.
ನಗರದ ಹೆಸರಾಂತ ಪ್ರಯೋಗಾಲಯ ತಜ್ಞರಾದ ಡಾಕ್ಟರ್ ಮಹೇಶ್ ಕರಿಗೌಡರ್ ಮಾತನಾಡಿ, ಲ್ಯಾಬ್ ಗಳ ಎರ ರ್ರನ್ನು ನಿಯಂತ್ರಿಸಲು ಸಮಯೋಚಿತ ಹಾಗೂ ನೂತನ ಯಂತ್ರಗಳಿಂದ ,ಸುಧಾರಿತ ತಂತ್ರಜ್ಞಾನದ ಶಿಕ್ಷಣ ಅತ್ಯವಶ್ಯ ಎಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ. ರಮೇಶ್ ಸಜ್ಜನರ ಹಾಗೂ ಡಾಕ್ಟರ್ ಅಬ್ದುಲ್ಲಾ , ಆಡಿ ಆಯ್ತ ಶ್ಯಾಮ ಅವರುಗಳನ್ನು ಸನ್ಮಾನಿಸಲಾಯಿತು ಶಾಂತಾ ಜೋಗೇನವರ್ ಸಾಹಿತಿಗಳು ಸುಸ್ರಾ ವ್ಯವಾಗಿ ಹಾಡಿದರು.
ಕಾರ್ಯಕ್ರಮದಲ್ಲಿ ರೋಗಿಗಳು ಹಾಗೂ ಕರಿಗೌಡರ ಲ್ಯಾಬರೋಟಿನ ಸಿಬ್ಬಂದಿ ಪಾಲ್ಗೊಂಡಿದ್ದರು, ಕಿಡ್ನಿಕೆರ್ ಆಸ್ಪತ್ರೆ ಸಿಬ್ಬಂದಿಗಳಾದ ವಿಜಯ ಬಡಿಗೇರ್ ಬಸು ಪಾಟೀಲ್, ಬಸು ಶಾಸ್ತ್ರಿ,, ಸಂತೋಷ, ಪ್ರಶಾಂತ್, ಶಬಾನಾ, ಮಹದೇವ ಕಾಗಲ್ಕರ್, ವಿಜಯ್, ಇನ್ನಿತರರು ಭಾಗವಹಿಸಿದ್ದರು ಸುರೇಶ್ ಹುಬ್ಬಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ವಂದನಾರ್ಪಣೆ ಸಲ್ಲಿಸಿದರು.