ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ಸÀಂಜೆವಾಣಿ ವಾರ್ತೆ,
ವಿಜಯಪುರ,ಮಾ.15:ನಗರದ ಯಶೋದಾ ಟ್ರಸ್ಟ್, ಯಶೋದಾ ಆಸ್ಪತ್ರೆ ಮತ್ತು ಯಶೋದಾ ಸ್ಕೂಲ್ ಆಫ್ ನಸಿರ್ಂಗ್ ಕಾಲೇಜ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಅಸಾಂಕ್ರಾಮಿಕ ರೋಗದ ನಿಗಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಕಿಡ್ನಿ ದಿನಾಚರಣೆಯನ್ನು ವಿಜಯಪುರದ ಕಂದಗಲ್ ಹುಮಂತರಾಯ ರಂಗ ಮಂದಿರÀದಲ್ಲಿ ಆಚರಿಸಲಾಯಿತು.
ವಿಶ್ವ ಕಿಡ್ನಿ ದಿನಾಚರಣೆಯ ಅಂಗವಾಗಿ ಯಶೋದಾ ಆಸ್ಪತ್ರೆಯು, ವಿಜಯಪುರ ಜಿಲ್ಲೆಯ ವಿವಿಧ ನಸಿರ್ಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳ ಸಹಯೋಗದಲ್ಲಿ ಸಿದ್ದೇಶ್ವರ ಮಂದಿರದಿಂದ ಕಂದಗಲ್ ಹನುಮಂತರಾಯ ರಂಗಮಂದಿರದ ವರೆಗೆ ಬೃಹತ್ ಜನಜಾಗೃತಿ ಜಾಥಾವನ್ನು ಹಮ್ಮಿಕೊಂಡಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಅವರು ಹಸಿರು ನಿಶಾನೆ ತೋರಿಸುವ ಮುಖಾಂತರ ಜಾಥಾಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಯಶೋಧಾ ಆಸ್ಪತ್ರೆಯ ಅಧ್ಯಕ್ಷ ಡಾ. ರವೀಂದ್ರ ಮದ್ರಕಿ, ಉಪಾಧ್ಯಕ್ಷ್ಯ ಡಾ.ಕಮಲಾ ಮದ್ರಕಿ ಮತ್ತು ಡಾ. ಕವಿತಾ ದೊಡ್ಡಮನಿ ಡಿಸ್ಟ್ರಿಕ್ಟ್ ಸರ್ವೈವಲೆನ್ಸ್ ಅಧಿಕಾರಿ ಉಪಸ್ಥಿತರಿದ್ದರು.
ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದು ಮತ್ತು ನಾಮಫಲಕಗಳನ್ನು ಪ್ರದರ್ಶಿಸುವ ಮೂಲಕ ಕಿಡ್ನಿ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಸಿದ್ದೇಶ್ವರ ಮಂದಿರದಿಂದ ಹೊರಟ ಜಾಥಾವು ಗಾಂಧಿ ಚೌಕ್, ಬಸವೇಶ್ವರ ಚೌಕ್, ಅಂಬೇಡ್ಕರ್ ಚೌಕ್ ಹಾದು ಹೋಗುವ ಮೂಲಕ ಕಂದಗಲ್ ಹನುಮಂತರಾಯ ರಂಗಮಂದಿರವನ್ನು ತಲುಪಿತು.
ಕೆಂಗಲ್ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಕಿಡ್ನಿ ದಿನಾಚರಣೆ ಮತ್ತು ಉಚಿತ ಕಿಡ್ನಿ ತಪಾಸಣಾ ಶಿಬಿರವನ್ನು ಡಿಸ್ಟ್ರಿಕ್ಟ್ ಸರ್ಜನ್ ಶಿವಾನಂದ ಮಾಸ್ತಿಹೊಳಿ ಅವರು ಸಸಿಗೆ ನೀರುಣಿಸುವ ಮೂಲಕ ಚಾಲನೆಯನ್ನು ನೀಡಿದರಲ್ಲದೆ ಇಂದಿನ ಯುವಕರು ಮತ್ತು ಹಿರಿಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಮತ್ತು ದುಶ್ಚಟಗಳಿಗೆ ಬಲಿಯಾಗದೆ ತಮ್ಮ ದೇಹದ ಅಂಗಾಂಗಗಳನ್ನು ಕಾಪಾಡಿಕೊಳ್ಳಬೇಕೆಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಮಾತನಾಡಿ, ಎಲ್ಲರೂ ಕಿಡ್ನಿ ಆರೋಗ್ಯ ಮತ್ತು ಅದರ ಆರೈಕೆ ಬಗ್ಗೆ ಕಾಳಜಿವಹಿಸಿ ಮತ್ತು ಸಮಯಕ್ಕೆ ಸರಿಯಾಗಿ ಔಷದೋಪಚಾರವನ್ನು ಪಡೆದುಕೊಂಡು ನಮ್ಮ ಆರೋಗ್ಯದ ಕಡೆ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದÀ ವಿಜಯಪುರ ಜಿಲ್ಲೆಯ ಪ್ರಖ್ಯಾತ ಮೂತ್ರಪಿಂಡ ತಜ್ಞು ಡಾ. ರವೀಂದ್ರ ಮದ್ರಕಿ ಅವರು ವಿಶ್ವ ಕಿಡ್ನಿ ದಿನಾಚರಣೆಯ ಶುಭಾಶಯಕೋರುವ ಮುಖಾಂತರ ಕಾರ್ಯಕ್ರಮದಲ್ಲಿ ಸೇರಿರುವ ವಿದ್ಯಾರ್ಥಿಗಳು ಮತ್ತು ಜನರನ್ನು ಉದ್ದೇಶಿಸಿ ಕಿಡ್ನಿಯ ಆರೋಗ್ಯ ಮತ್ತು ಔಷದೊಪಚಾರದಲ್ಲಿ ಸುಧಾರಣೆ, ಕಿಡ್ನಿ ರೋಗವನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದÀ ಕ್ರಮಗಳು, ಆರೋಗ್ಯವಾಗಿರಲು ದೈನಂದಿನ ಬದುಕಿನಲ್ಲಿ ಅನುಸರಿಸಬೇಕಾದ ಜೀವನ ಶೈಲಿ, ಕಿಡ್ನಿ ರೋಗವು ಉಲ್ಬಣಿಸದಂತೆ ನೋಡಿಕೊಳ್ಳುವುದು ಮತ್ತು ಅಂಗಾಗ ದಾನದ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಅಲ್ಲದೆ ಯಾಶೋದಾ ಆಸ್ಪತ್ರಗೆ ಬರುವ ತುಂಬಾ ರೋಗಿಗಳು ಡಯಾಲಿಸಿಸ್ ಸ್ಟೇಜ್ ಬೇಕಾಗುವ ಅಥವಾ ಕಿಡ್ನಿ ನಿಷ್ಕ್ರಿಯ ಆದಂತಹ ಸಮಯದಲ್ಲಿ ನಮ್ಮ ಹತ್ತಿರ ಬರುತ್ತಾರೆ. ಅಂತಹ ಸಮಯದಲ್ಲಿ ನಾವು ಅನಿವಾರ್ಯವಾಗಿ ಡಯಲಿಸಿಸ್ ಅಥವಾ ಕಿಡ್ನಿ ಕಸಿ ಮಾಡಲೇಬೇಕಾಗುತ್ತದೆ. ಒಂದುವೇಳೆ ಅದೇ ರೋಗಿಯು ಮುಚಿತವಾಗಿ ನಮ್ಮಲ್ಲಿ ಬಂದಿದ್ರೆ ಅವರ ರೋಗವನ್ನು ಔಷದೋಪಚರದ ಮೂಲಕ ನಾವು ಗುಣಪಡಿಸಬಹುದಿತ್ತು. ಆದರೂ ಕೂಡ ಯಾವುದೇ ರೋಗಿ ಹೆದರುವ ಅವಶ್ಯಕತೆ ಇಲ್ಲ. ತಾವು ಧೈರ್ಯದಿಂದ ಇದ್ದು ಬಂದಿರುವ ರೋಗಕ್ಕೆ ಅನುಗುಣವಾಗಿ ವೈದ್ಯರು ನೀಡುವಂತಹ ಸಲಹೆ ಸೂಚನೆಗಳನ್ನು ಅನುಸರಿಸಿದರೆ ಸಾಕ ಎಂದರು.
ಕಿಡ್ನಿ ಕಸಿ ಮಾಡಿಸಿಕೊಂಡವರು ಮತ್ತು ಕಿಡ್ನಿ ಕೊಟ್ಟವರು ಕೂಡ ಎಲ್ಲರ ರೀತಿ ಸಾಮಾನ್ಯವಾಗಿ ಜೀವನ ಸಾಗಿಸಬಹುದು ಮತ್ತು ಜೀವನ ನಡೆಸಲು ಆರೋಗ್ಯವಾದ ಒಂದು ಕಿಡ್ನಿ ಸಾಕು ಎಂದು ಹೇಳುತ್ತ ಎಲ್ಲರೂ ಅಂಗಾಂಗ ದಾನವನ್ನು ಮಾಡಬೇಕು. ಬೇರೆಯವರ ಜೀವನಕ್ಕೆ ಆಸರೆಯಾಗಲು ಸಹಕಾರಿಯಾಗಬೇಕೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ 15 ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಕಿಡ್ನಿ ತೆಗೆದುಕೊಂಡ ಮತ್ತು ಕಿಡ್ನಿ ಕೊಟ್ಟಿರುವಂತಹ ಕುಟುಂಬಸ್ಥರಿಗೆ ಮತ್ತು 12 ವರ್ಷ ಗಳಿಂದ ಡೈಲಾಸಿಸ್ ತೆಗೆದುಕೊಳ್ಳುತ್ತಿರುವ ರೋಗಿಗಳಿಗೆ ಯಶೋದಾ ಆಸ್ಪತ್ರೆಯ ವತಿಯಿಂದ ಸನ್ಮಾನಿಸಲಾಯಿತು.
ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ನಡೆದಂತಹ ಉಚಿತ ಕಿಡ್ನಿ ತಪಾಸಣಾ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದು ಸುಮಾರು ಐವತ್ತಕ್ಕಿಂತ ಹೆಚ್ಚು ಶಿಬಿರಾರ್ಥಿಗಳಲ್ಲಿ ಅಧಿಕ ಸಕ್ಕರೆ ಕಾಯಿಲೆ ಮತ್ತು ರಕ್ತದೋತ್ತಡ ಕಂಡುಬಂದಿದ್ದು ಅಂತಹ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕಾಗಿ ಸೂಚಿಸಲಾಗಿದೆ.