
ಗದಗ, ಮೇ 2 : ಗದಗ ಜಿಲ್ಲೆ ರೋಣ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಬಧು ನಿರ್ಮಾಣ ಕಾರ್ಯದಲ್ಲಿ ಕೇಕ್ ಕತ್ತರಿಸುವ ಮೂಕಲ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಬಧು ನಿರ್ಮಾದ ಕಾಮಗಾರಿಯಲ್ಲಿ ಮಹಿಳಾ ಕಾಯಕ ಮಿತ್ರರಾದ ಶಿಲ್ಪ ತಳವಾರ, ಅಕ್ಷತಾ ಕುರಿ, ಲಲಿತ ಬಡಿಗೇರ, ಕಾಳಮ್ಮ ಬಡಿಗೇರ, ಶೃತಿ ಮೇಟಿ, ಭೀಮಾಂಬಿಕಾ ರಬ್ಬನಗೌಡರ, ನೇತ್ರಾ ಹಡಪದ, ಶಕಿಲಾಬಾನು ಮುದ್ದಗಲ್ಲ, ಅಕ್ಷತಾ ಯರಗೇರಿ ಸೇರಿ ಗ್ರಾಮದ ನಿಡಗುಂದಿ ರಸ್ತೆಯಲ್ಲಿರುವ ಸುರೇಶ್ ತೆಗಿನಕೇರಿ ಅವರ ಜಮೀನಿನಲ್ಲಿ ಬಧು ನಿರ್ಮಾಣ ಕಾರ್ಯದಲ್ಲಿ ತೊಡಗಿದ ಕಾರ್ಮಿಕರಿಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯ ಕೋರಿ ಕೇಕ್ ಕತ್ತರಿಸಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಇಟಗಿ ಗ್ರಾಮ ಪಂಚಯಾತ ಅಭಿವೃದ್ಧಿ ಅಧಿಕಾರಿ ಮಂಜುನಾಥ ಜಾವೂರ ಮಾತನಾಡಿ ಮುಂಬರುವ ವಿಧಾನಸಭೆ ಚುಣಾವನೆಗೆ ಮತದಾನವು ಮೇ 10 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಿ ಮತದಾನ ಪ್ರಮಾಣವನ್ನು ಶೇ 100 ರಷ್ಟು ಗುರಿ ಸಾಧನೆಗೆ ಎಲ್ಲರೂ ತಪ್ಪದೇ ಮತ ಚಲಾಯಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಎನ್.ಬಿ. ಉಗಲಾಟದ, ಹಾಗೂ ಸಿಬ್ಬಂದಿ ಮಾಹಂತೇಶ ಕೋಮಾರ, ಕಂಪ್ಯೂಟರ್ ಆಪರೇಟರ ಮಲ್ಲು ಹೂಗಾರ ಮತ್ತು ಗ್ರಾಮದ ಕಾರ್ಮಿಕರಾದ ಭೀಮಶಿ ಸಜ್ಜನರ ಗುರು ಗವಿಮಠ ರಮೇಶ ಸಂನಾಳ ಮಲ್ಲಿಕಾರ್ಜುನ ಮೇಟಿ ರಾಜೇಸಾಬ ಜಂಗ್ಲಪನವರ ಧರ್ಮಪ್ಪ ವಡಗೇರಿ ನಿಂಗಪ್ಪ ಕುರಿ ಭಾಗಿಯಾಗಿದ್ದರು