ವಿಶ್ವ ಕಲಾ ದಿನಾಚರಣೆ: ಚಿತ್ರ- ಕಾವ್ಯ ಪ್ರದರ್ಶನ


ಧಾರವಾಡ,ಏ.16: ಕಲೆ ಮನುಷ್ಯನಲ್ಲಿ ಸೌಂದರ್ಯ ಪ್ರಜ್ಞೆಯನ್ನುಂಟು ಮಾಡಿ, ಮನಸ್ಸಿಗೆ ಮುದ ನೀಡುವ ಪ್ರಭಲ ಮಾಧ್ಯಮವಾಗಿದೆ. ಅದು ನಮ್ಮ ಶ್ರೀಮಂತ ಸಂಸ್ಕøತಿಯ ಬುನಾದಿಯೂ ಹೌದುಎಂದು ಹಿರಿಯಕಲಾವಿದ ಬಿ.ಮಾರುತಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ‘ವಿಶ್ವ ಕಲಾ ದಿನಾಚರಣೆ’ ಅಂಗವಾಗಿ ಆಯೋಜಿಸಲ್ಪಟ್ಟ ಹುಬ್ಬಳ್ಳಿಯ ಕಿರಣಜತ್ತಿಅವರಚಿತ್ರ-ಕಾವ್ಯ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಭಾಷೆ ಹಾಗೂ ಅಕ್ಷರಕ್ಕಿಂತ ಮೊದಲು ಮನುಷ್ಯತನ್ನ ಭಾವನೆಗಳನ್ನು ಚಿತ್ರದ ಮೂಲಕ ಅಭಿವ್ಯಕ್ತಗೊಳಿಸುತ್ತಿದ್ದನು.ಮಾನವನಉಗಮದೊಂದಿಗೆಚಿತ್ರಕಲೆ ಬೆಳೆದು ಬಂದಿದೆ.ಜನಸಮುದಾಯದಲ್ಲಿಕಲಾಭಿರುಚಿಯನ್ನು ಪ್ರೇರೇಪಿಸುವ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ದೆಸೆಯಿಂದ ಈ ದಿನಾಚರಣೆಆಚರಿಸಲಾಗುತ್ತದೆ. ಜಗತ್ಪ್ರಸಿದ್ದಚಿತ್ರಕಾರ ಲಿಯೋನಾರ್ಡಡ. ವಿಂಚಿಯಜನ್ಮದಿನವಾದಏಪ್ರೀಲ್ 15ರ ಗೌರವಾರ್ಥ ಈ ದಿನಾಚರಣೆಯೂಆಗಿದೆ.
2012 ರಲ್ಲಿ ‘ಇಂಟರ್‍ನ್ಯಾಶನಲ್ ಅಸೋಸಿಯೇಶನ್ ಆಫ್‍ಆರ್ಟ” ಪ್ರಥಮ ಬಾರಿಗೆ ಈ ದಿನಾಚರಣೆಗೆ ಮುನ್ನಡಿ ಹಾಕಿತು.ದುರ್ದೈವವೆಂದರೆಜಾಗತೀಕರಣದ ಪ್ರಭಾವದಿಂದ ಹಿಂದೆ ಸಿಗುವಷ್ಟು ಉತ್ತೇಜನ, ಪ್ರೋತ್ಸಾಹ ಕಲಾ ಪ್ರಕಾರಗಳಿಗೆ ಸಿಗುತ್ತಿಲ್ಲ. ಕಲಾವಿದರ ಬದುಕುಇಂದುತ್ರಿಶಂಕು ಸ್ಥಿತಿಯಲ್ಲಿದೆ. ಸಮಾಜ ಹಾಗೂ ಸರ್ಕಾರಕಲಾವಿದರನ್ನುಅವರಕಲೆಯನ್ನು ಪ್ರೋತ್ಸಾಹಿಸಬೇಕು.ಆ ದೆಸೆಯಲ್ಲಿಕಲಾವಿದರಚಿತ್ರ ಪ್ರದರ್ಶನಕ್ಕೆಧಾರವಾಡ ನಗರದಲ್ಲಿಒಂದು ಸುಸಜ್ಜಿತವಾದಆರ್ಟ್‍ಗ್ಯಾಲರಿಅಗತ್ಯತೆಇದೆ.ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಆ ಕೆಲಸ ಆಗಬೇಕೆಂದು ತಿಳಿಸಿ, ಶಾಲೆಗಳಲ್ಲೂ ಚಿತ್ರ ಕಲಾ ವಿಷಯ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ತೊಂದರೆಯಾಗಿದೆಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಗ್ಗಾಂವಿ ಕಾಲೇಜಿನ ಪ್ರಾಚಾರ್ಯರಾದ ನಾಗರಾಜದ್ಯಾಮನಕೊಪ್ಪ ಹಾಗೂ ಚಿತ್ರ-ಕಾವ್ಯ ಪ್ರದರ್ಶಕರಾದಕಿರಣಜತ್ತಿ ಉಪಸ್ಥಿತರಿದ್ದು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಾವೇರಿಯ ಹಿರಿಯ ಸಾಹಿತಿ ಸತೀಶಕುಲಕರ್ಣಿ ಮಾತನಾಡಿ, ಚಿತ್ರಕಲಾವಿದರಾದಕಿರಣಜತ್ತಿಅವರು ಶ್ರಮವಹಿಸಿ ಚಿತ್ರ-ಕಾವ್ಯ ರಚಿಸಿದ್ದಾರೆ.ಅವರ ಶ್ರಮ ಸಾರ್ಥಕ. ಈ ವೈವಿಧ್ಯಮಯ ಚಿತ್ರಗಳು ಮನಮೋಹಕವಾಗಿದ್ದುಒಂದೊಂದು ಸಂದೇಶ ಸಾರುತ್ತಿವೆ. ಈ ಪ್ರದರ್ಶನ ಸೀಮಿತ ಸ್ಥಳಕ್ಕೆ ಮೀಸಲಾಗದೆ ನಾಡಿನಲ್ಲೆಲ್ಲಾ ಪ್ರದರ್ಶನವಾಗಬೇಕೆಂದು ಹಾರೈಸಿದರು.
ವೇದಿಕೆಯಲ್ಲಿ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಇದ್ದರು.ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣಒಡ್ಡೀನ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹ ಕಾರ್ಯದರ್ಶಿ ಶಂಕರ ಕುಂಬಿ ನಿರೂಪಿಸಿದರು.ಎಂ.ಎಂ. ಚಿಕ್ಕಮಠ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಆನಂದ ಪಾಂಡುರಂಗಿ, ಎಸ್. ವ್ಹಿ. ಪಟ್ಟಣಶೆಟ್ಟಿ, ಕಾಟೇನಹಳ್ಳಿ, ಪ್ರತಿಭಾಜತ್ತಿ, ಸವಿತಾಎನ್,ಎಮ್, ರವಿ, ಅನಿಲ ನಾಯ್ಕರ, ರೇಖಾ ನಾಯ್ಕರ, ಸಂಗೀತಾ ನಾಯ್ಕರ, ಸೃಷ್ಠಿ ಹೊಸಕೇರಿ, ಕಾವ್ಯಾ ಹೊಸಕೇರಿ, ಶ್ರೀನಿಧಿ ಮುಂಡಗೋಡ ಸೇರಿದಂತೆ ಮುಂತಾದವರಿದ್ದರು.