ವಿಶ್ವ ಕಮ೯ ದಿನಾಚರಣೆ


ಸಂಜೆವಾಣಿ ವಾರ್ತೆ
ಕುಕನೂರು, ಸೆ.23:. ಇಲ್ಲಿಯ ಶ್ರೀ ಗವಿಸಿದ್ಧೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ೭೫ ನೇ ಕಲ್ಯಾಣ ಕರ್ನಾಟಕ ದಿನಾಚರಣೆ ಮತ್ತು ಭಗವಾನ್ ವಿರಾಟ್ ವಿಶ್ವಕರ್ಮ ಜಯಂತಿ ಯನ್ನು ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ ಶಿಕ್ಷಕರಾದ ಶ್ರೀ ಎಸ್ ಹೆಚ್ ಗುಡ್ಲಾನೂರ ಮಾತನಾಡುತ್ತಾ ಸುಮಾರು ೨೦೦ ವರ್ಷಗಳ ಕಾಲ ಬ್ರಿಟಿಷರು ಭಾರತ ದೇಶವನ್ನಾಳಿದರು ಈಗ ಸ್ವಾತಂತ್ರ್ಯದ ಸವಿ ಲಭಿಸುತ್ತಿದೆ ಎಂದರು. ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇ.ಸಿ ಒ ಆದ ಶ್ರೀ ಶರಣಪ್ಪ ರಾವಣಕಿ ಅವರು ಯಲಬುರ್ಗಾ ತಾಲೂಕಿನ ಯರೇ ಹಂಚಿನಾಳದಲ್ಲಿ ೧೨ ಜನ ವೀರ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ ಅದರಲ್ಲಿ ಲಕ್ಷ್ಮಪ್ಪ ಪೂಜಾರ    ಎಂಬಾತನ್ನು ಕೈ ಕಾಲು ಕಟ್ಟಿ ನಾಲಗೆಗೆ ಮೊಳೆ ಹೊಡೆದು ಹಿಂಸೆ ಮಾಡಿದ ಬಗ್ಗೆ ಹೇಳಿದರು ಅತ್ಯಂತ ಹೆಚ್ಚು ವೀರ ಯೋದರನ್ನು ಹೊಂದಿದ ಗ್ರಾಮ ಎಂಬುದನ್ನು ತಿಳಿಸಿದರು ಬ್ರಿಟಿಷರ ವಿರುದ್ಧ ಯಾವುದೆ ಘೋಷಣೆಯನ್ನು ಕೂಗುವಂತಿದ್ದಿಲ್ಲ .ಅವರೆಲ್ಲರನ್ನು ಇಂದು ಸ್ಮರಣೆ ಮಾಡಿಕೊಳ್ಳುವ ಸುದಿನವಾಗಿದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ ಎಸ್ ಜೆ ಪಾಟೀಲ್ ಅವರು ನಮ್ಮ ಕಲ್ಯಾಣ ಕರ್ನಾಟಕ ಭಾಗದವರು ಅತ್ಯಂತ ಹಿಂದುಳಿದವರು ಎಂಬುದು ಈಗ ಅದು ಕ್ರಮೇಣ ಕಡಿಮೆಯಾಗುತ್ತಿದೆ.೩೭೧ ಜೆ ಪ್ರಕಾರ ಇವತ್ತು ಎಲ್ಲಾ ಹುದ್ದೆಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸಿ ಈ ಭಾಗದ ಶೈಕ್ಷಣಿಕ ವಾಗಿ, ಸಾಮಾಜಿಕವಾಗಿ,ಆರ್ಥಿಕವಾಗಿ ಸಮಗ್ರ ಅಭಿವೃದ್ಧಿಯಾಗುತ್ತಾ ಸಾಗಿದೆ ನಾವೆಲ್ಲರೂ ಧನ್ಯರು.ವಿದ್ಯಾರ್ಥಿಗಳು ಸತತ ಪ್ರಯತ್ನ ಮತ್ತು ಪರಿಶ್ರಮ ದಿಂದ ಎಲ್ಲರೂ ಶಿಕ್ಷಣವನ್ನು ಪಡೆಯಿರಿ ಎಂದು ತಿಳಿಸಿದರು.ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನಿ ಶ್ರೀ ಮತಿ ಬಿ ಎಸ್ ಅರಳೆಲೆಮಠ. ಹಾಗೂ ಸರ್ವ ಶಿಕ್ಷಕರಾದ ವಿ ಬಿ ಕಟ್ಟಿ,ಬಿ ವಿ ಲಕ್ಷಾಣಿ,ವಿ ಆರ್ ಹಿರೇಮಠ. ಎಸ್‌ ಎಂ ಹಿರೇಮಠ, ಜಿ ಎಸ್ ಹೊಸಮನಿ,ಡಿ ಡಿ ಜೋಗಣ್ಣವರ ,ಆರ್ ಡಿ ರಾಠೋಡ ಶಿಕ್ಷಣ ಸಂಯೋಜಕ ಶ್ರೀ ಗವಿಸಿದ್ಧಪ್ಪ ಕರಮುಡಿ ಉಪಸ್ಥಿತಿಯಿದ್ದರು.ಕಾರ್ಯಕ್ರಮವನ್ನು ಶ್ರೀ ವಿ ಆರ್ ಹೀರೆಮಠ ನಿರೂಪಿಸಿದರು.ಶ್ರೀ ಎನ್ ಟಿ ಸಜ್ಜನ್ ವಂದನೆಗಳನ್ನು ಸಲ್ಲಿಸಿದರು.

One attachment • Scanned by Gmail