ವಿಶ್ವ ಕನ್ನಡ ಹಬ್ಬದ ನಿರೂಪಕ ವಿಜಯ ರಾಘವೇಂದ್ರ

ಬೆಂಗಳೂರು,ಸೆ೨೩:ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಮುಂಬರುವ ನ.೧೯ ದುಬೈನಲ್ಲಿ ಆಯೋಜಿಸಿರುವ ವಿಶ್ವ ಕನ್ನಡ ಹಬ್ಬದ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯನಿರ್ವಹಿಸಬೇಕೆಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ. ಟಿ. ಶಿವಕುಮಾರ್ ನಾಗರ ನವಿಲೆ ಅವರು ಮಾಡಿದ ಮನವಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ.
ವಿಶ್ವ ಕನ್ನಡ ಹಬ್ಬದ ಕಾರ್ಯಾಧ್ಯಕ್ಷರಾದ ಸುಧಾರವರು ಈವರೆಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಸಾಧಿಸಿರುವ ರಾಷ್ಟ್ರಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿನ ಸಾಧನೆಗಳನ್ನು ಹಾಗೂ ವಿಶ್ವ ಕನ್ನಡ ಹಬ್ಬದ ಸಂಪೂರ್ಣ ರೂಪುರೇಷೆಗಳನ್ನು ತಿಳಿಸಿದರು. ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಮಾತನಾಡಿ, ನಶಿಸುತ್ತಿರುವ ಕನ್ನಡ ಭಾಷೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಎತ್ತಿ ಹಿಡಿಯುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ನಾವು ಕನ್ನಡಗರೆಂದು ಹೇಳಿ ಕೊಳ್ಳುವುದಷ್ಟೇ ಅಲ್ಲಾ, ಕನ್ನಡವನ್ನು ಬೆಳೆಸಲು ಮುಂದೆ ಬರಬೇಕು. ಎಲ್ಲರೂ ಒಟ್ಟಾಗಿ ಕನ್ನಡವನ್ನು ಉಳಿಸುವ ಕೆಲಸ ಮಾಡಬೇಕು. ತಾವು ದುಬೈ ರಾಷ್ಟ್ರದಲ್ಲಿ ಹಮ್ಮಿಕೊಂಡಿರುವ ವಿಶ್ವ ಕನ್ನಡ ಹಬ್ಬದ ರೂಪುರೇಷೆಗಳು ವಿಶೇಷವಾಗಿದೆ ನಾನು ಖಂಡಿತ ನಿರೂಪಣೆ ಮಾಡ್ತೀನಿ ಎಂದು ತಿಳಿಸಿದ್ದಾರೆ. ಹಾಗೂ ಕನ್ನಡಕ್ಕೆ ಇದು ಅಳಿಲು ಸೇವೆ ಇರಲಿ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಂಜುಳಾಪಾವಗಡ, ಪಾರ್ಥ ರವರು ಜೊತೆಗಿದ್ದರು.