ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೩೧; ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಭರವಸೆ ನೀಡಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಮಹಲಿಂಗರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ೨೦ ಕೋಟಿ ಅನುದಾನ ನೀಡಲಾಗಿತ್ತು ಹಾಗೂ ಸಮ್ಮೇಳನಕ್ಕೆ ಸಕಲ ಸಿದ್ದತೆಯೂ ಮಾಡಲಾಗಿತ್ತು ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಯಿತು.ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಲುಹಿರಿಯ ಸಾಹಿತಿಗಳು ಕನ್ನಡಾಭಿಮಾನಿಗಳು ಹಿಂದೆ ಸಾಕಷ್ಟು ಕೆಲಸ ಮಾಡಿದ್ದರು. ಅದೇ ರೀತಿ ಮುಂದೆಯೂ ಕೆಲಸ ಮಾಡೋಣ.ಎಲ್ಲರೂ ಸಂಪೂರ್ಣ ಜವಾಬ್ದಾರಿ ವಹಿಸೋಣ ಎಂದರು.ಕಸಾಪ ಜಿಲ್ಲಾಧ್ಯಕ್ಷರು ಬಂದರೆ ಮುಖ್ಯಮಂತ್ರಿಗಳನ್ನು ಭೇಟಿಮಾಡಿಸಲಾಗುವುದು ಆದರೆ ಮಾರ್ಚ್ ನಂತರ ಸಿಎಂ ಭೇಟಿ ಮಾಡಲಾಗುವುದು ಕಾರಣ ಮಾರ್ಚ್ ನಂತರವೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಅನುದಾನ ಸಿಗುವುದು ಎಂದರುಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ.ಹಿಂದೆಯೂ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆಯೂ ಕನ್ನಡಭವನಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಜಾಗ ಹಾಗೂ ರಸ್ತೆ ನೀಡಿದ್ದು ನಮ್ಮ ಸರ್ಕಾರ ಇದ್ದ ವೇಳೆ ಮುಂದೆಯೂ ಕಸಾಪ ಕಾರ್ಯಗಳಿಗೆ ನಮ್ಮ ಸಹಕಾರ ಇದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆಇನ್ನೊಂದು ಮುಖವಿದೆ ಅದು ಸಾಹಿತ್ಯದ ಒಲವಿನ ಮುಖ ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ ಎಂದರು ದಾವಣಗೆರೆಯಲ್ಲಿ ಸಾಹಿತ್ಯದ ಕೆಲಸ ಹೆಚ್ಚಾಗಿ ನಡೆಯಲಿ. ಕಸಾಪ ಹೆಚ್ಚು ಕೆಲಸ ಮಾಡಲಿ ಕನ್ನಡದ ಒಲವು ಹೆಚ್ಚಾಗಲಿ.ಜಿಲ್ಲೆಯವರೇ ಆದ ಮಹಲಿಂಗರಂಗ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕಾರ್ಯ.ಪ್ರತಿ ವರ್ಷ ಈ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಒಳ್ಳೆಯ ಕೆಲಸ.ಕಸಾಪ ಅಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ.ಕನ್ನಡದ ಕೆಲಸಕ್ಕೆ ನಮ್ಮಸಹಕಾರವಿದೆ ಎಂದರು.ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ನಟ ರಂಗಕರ್ಮಿ ಟಿ.ಎಸ್ ನಾಗಾಭರಣ ಮಾತನಾಡಿ ಭವಿಷ್ಯದ ಕನ್ನಡ ಲೋಕಕ್ಕೆ, ಸಾರಸ್ವತ ಲೋಕಕ್ಕೆ ಕೊಡುಗೆ ನೀಡಲು ಬಹುಮುಖಿ ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ನಾಳೆಗಳನ್ನು ಕಟ್ಟುವವರು ನಮ್ಮ ಮುಂದಿನಪೀಳಿಗೆ ಅಂತಹವರು ರೂಪಿತಗೊಳ್ಳುವುದು ಇಂತಹ ವೇದಿಕೆಗಳಲ್ಲಿ ಸೌಹಾರ್ದತೆ ಸಹೃದಯತೆ ನಿಧಾನವಾಗಿ ಹೋಗುತ್ತಿರುವ ಕಾಲದಲ್ಲಿ ವಿಶ್ವಾಸಾರ್ಹತೆಯನ್ನು ಹುಟ್ಟುಹಾಕುವಲ್ಲಿ ಮಹಲಿಂಗರಂಗ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಉತ್ತಮ ಕಾರ್ಯವಾಗಿದೆ ಎಂದರು.ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಗಲೇಬೇಕು ಕನ್ನಡದ ಅಸ್ಮಿತೆ ಪ್ರಪಂಚದಾದ್ಯಂತ ಇದೆ.ಕನ್ನಡ ಸಮ್ಮೇಳನ ಹೆಚ್ಚಾಗಬೇಕು.ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಮಾಡಿರುವುದು ಶ್ಲಾಘನೀಯ ಎಂದರು.ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಿ.ಎನ್ ಮಲ್ಲೇಶ್ ಅಭಿನಂದನಾ ನುಡಿಗಳನ್ನಾಡುತ್ತಾ ಧಾರವಾಡದ ಚಂಪಾ ಅವರ ರೀತಿ ಬಸವರಾಜಯ್ಯ ದಾವಣಗೆರೆಯ ಬಾಮಾ ಆಗಿದ್ದಾರೆ. ಬಾಮಾ ಒಂದು ಕ್ಷೇತ್ರದಲ್ಲಿ ಇರಲಿಲ್ಲಒಳ್ಳೆಯ ಪತ್ರಕರ್ತರು, ಪ್ರಗತಿಪರ ಚಿಂತಕರು.ವೈಚಾರಿಕವಾಗಿ ಬಡವರ ಪರ ಇದ್ದವರು.