ವಿಶ್ವ ಓಆರ್‌ಎಸ್ ಸಪ್ತಾಹ ಕಾರ್ಯಕ್ರಮ

ರಾಯಚೂರು,ಜು.೨೬- ಸಮುದಾಯ ವೈದ್ಯಕೀಯ ವಿಭಾಗದ, ನವೋದಯ ವೈದ್ಯಕೀಯ ಕಾಲೇಜ್ ರಾಯಚೂರು ಇವರ ವತಿಯಿಂದ ನಗರ ಆರೋಗ್ಯ ತರಬೇತಿ ಕೇಂದ್ರ ಆಶಾಪೂರ ರಸ್ತೆ ರಾಯಚೂರು ವಿಶ್ವ ಓಆರ್‌ಎಸ್ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆಯಾದ ಡಾ. ಗೀತಾಲಕ್ಷ್ಮೀ ಆರ್.ಜಿ. ಇವರ ನೇತೃತ್ವದಲ್ಲಿ ಪ್ರಾದ್ಯಾಪಕರಾದ ಡಾ. ಮಹಮದ್ ಇಲಿಯಾಜ್ ಹಾಗೂ ಸಹಾಯಕ ಪ್ರಾದ್ಯಾಪಕರಾದ ಡಾ. ರೂಪಕಲಾ.ಎನ್ ಮತ್ತು ಕಿರಿಯ ವೈದ್ಯಾಧಿಕಾರಿಗಳು ವಾಂತಿ, ಬೇಧಿಯ ಕಾರಣಗಳು. ಅದನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಮಾತನಾಡಿದರು.
ಓ,ಆರ್,ಎಸ್, ಹಾಗೂ ಜಿಂಕ್ ಮಾತ್ರೆಯ ಪ್ರಾಮುಖ್ಯತೆ ಹಾಗೂ ಅದನ್ನು ಬಳಸುವ ವಿಧಾನಗಳ ಬಗ್ಗೆ ವಿವರಿಸಿದರು. ಬಂದಿರುವ ಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿ ಓ,ಆರ್,ಎಸ್, ಹಾಗೂ ಜಿಂಕ್ ಮಾತ್ರೆಗಳ ವಿತರಣೆ ಮಾಡಲಾಯಿತು.
ಸಹ ಪ್ರಾದ್ಯಾಪಕರಾದ ಡಾ.ಅರ್ಶಿಂii.ಟಿ ವೈದ್ಯಾದಿಕಾರಿಗಳಾದ ಡಾ.ಎಮ್.ಬಿ.ಪಟೇಲ್ ಹಾಗೂ ಕಿರಿಯ ವೈದ್ಯಕೀಯ ವಿಧ್ಯಾರ್ಥಿಗಳು ಹಾಗೂ ಸಮಾಜ ಕಾರ್ಯಕರ್ತರಾದ ನಾಗರಜ, ಡಿ. ಓಂಕಾರ್ ಮತ್ತು ಎಲ್ಲಾ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.