ವಿಶ್ವ ಇಂಟರ್ನೆಟ್‌ ದಿನಾಚರಣೆ


ಇಂಟರ್ನೆಟ್ ಇಲ್ಲದಿದ್ದರೆ ಹೇಗೆ? ಹೀಗೆ ಒಂದು ಕ್ಷಣ ಯೋಚಿಸಿ. ಒಂದು ವೇಳೆ, ಇಂಟರ್ನೆಟ್ ಇರದಿದ್ದರೆ ನಾವೆಲ್ಲ ಮತ್ತೆ ಅದೇ ದ್ವೀಪಗಳಾಗಿ ಇರುತ್ತಿದ್ದೆವು. ಇಂದು ಇಡೀ ಜಗತ್ತು ಒಂದು ಹಳ್ಳಿಯಂತೆ ಭಾಸವಾಗುತ್ತಿದ್ದರೆ ಅದಕ್ಕೆ ಈ ಇಂಟರ್ನೆಟ್ಟೇ ಕಾರಣ. ಮಾನವನಿಗೆ ಮೂಲಭೂತವಾಗಿ ಬೇಕಾಗಿರುವುದು ಅನ್ನ, ಆಶ್ರಯ, ಬಟ್ಟೆ. ಈಗ ಈ ಸಾಲಿಗೆ ಇಂಟರ್ನೆಟ್ಟನ್ನ್ನು ಸೇರಿಸಿದರೂ ಅಭಾಸವಾಗದು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದಿದೆ.

ಮಾನವ ಸೃಷ್ಟಿಸಿದ ಮತ್ತು ಸಂಶೋಧಿಸಿದ ಅದ್ಭುತಗಳಲ್ಲಿ ‘ಇಂಟರ್ನೆಟ್’ ಕೂಡ ಒಂದು. ಇಂಟರ್ನೆಟ್ ಎನ್ನುವ ಮೂರ್ತರೂಪ ನಮ್ಮ ಮುಂದೆ ಈಗ ಬೃಹತ್ ಆಗಿ ಬೆಳೆದು ನಿಂತಿದೆ. ಅದಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎಂಬ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ನಿಜವೂ ಹೌದು.ನಮ್ಮ ಕೈಯಲ್ಲಿರುವ ಮೊಬೈಲ್‌ಗಳು ಇಂದು ಕೇವಲ ಮಾತನಾಡುವ ಸಾಧನಗಳಾಗಿಲ್ಲ. ಬಾಲಕ ಕೃಷ್ಣನ ಬಾಯಿಯಲ್ಲಿ ಇಡೀ ಭೂಮಿ ಕಂಡಂತೆ, ಇಂದು ನಮ್ಮ ಅಂಗೈಯಲ್ಲೇ ಈ ಮೊಬೈಲ್‌ಗಳು ಬ್ರಹ್ಮಾಂಡ ದರ್ಶಿಸುವ ಇಂದ್ರಜಾಲಿಕಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಇದೇ ಇಂಟರ್ನೆಟ್. ಹಾಗಾಗಿ ಇಂದು ವಿಶ್ವ ಇಂಟರ್ನೆಟ್‌ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಇಂಟರ್ನೆಟ್‌ಗೆ ಕನ್ನಡದಲ್ಲಿ ‘ಅಂತರ್ಜಾಲ’ ಎನ್ನುತ್ತೇವೆ. ಇದರ ಇತಿಹಾಸ ಕೆದಕಲು 1960ರ ದಶಕಕ್ಕೆ ಚಲಿಸಬೇಕು. 1991ರಲ್ಲಿ ಸ್ವಿಜರ್‌ಲೆಂಡ್‌ನಲ್ಲಿ ಮೊದಲಿಗೆ ಶುರುವಾಗಿದ್ದು ‘ವರ್ಲ್ಡ್ ವೈಡ್ ವೆಬ್. ’ ಮುಂದಿನ ಐದು ವರ್ಷದೊಳಗೆ ಅಂದರೆ, 1995 ಆಗಸ್ಟ್ 15ರಂದು ಭಾರತಕ್ಕೂ ಕಾಲಿಟ್ಟಿತ್ತು ಈ ಇಂಟರ್ನೆಟ್. ಸರಕಾರಿ ಒಡೆತನದ ‘ವಿದೇಶ ಸಂಚಾರ ನಿಗಮ ಲಿ.(ವಿಎಸ್‌ಎನ್‌ಎಲ್)’ ಮೊದಲಿಗೆ ಸಾರ್ವಜನಿಕರಿಗೆ ಇಂಟರ್ನೆಟ್ ಬಳಕೆಗೆ ಅವಕಾಶ ಕಲ್ಪಿಸಿತು. ಹೀಗೆ ಆರಂಭವಾದ ಒಂದು ವರ್ಷದೊಳಗೆ 14,000 ಇಂಟರ್ನೆಟ್ ಸಂಪರ್ಕಗಳು ದಕ್ಕಿದವು. ನೆನಪಿರಲಿ, ಆಗ ಇಂಟರ್ನೆಟ್ ತುಂಬಾ ಅಂದರೆ ತುಂಬಾ ದುಬಾರಿಯಾಗಿತ್ತು! ಆದರೆ, ಮುಂದಿನ ಐದು ವರ್ಷದಲ್ಲಿ ಡಿಡಿಡಿ ಮಹತ್ವ ಗೊತ್ತಾಗುತ್ತಿದ್ದಂತೆ ಇಂಟರ್ನೆಟ್ ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿತು. ಮೊದಲಿಗೆ ರೆಡಿಫ್, ಸಿಫಿ, ಇಂಡಿಯನ್ ಯಾಹೂ ಡಾಟ್ ಕಾಮ್‌ಗಳು ತಲೆ ಎತ್ತಿದವು. ಈಗ ನಾವು ಭಾರತದಲ್ಲಿ ಈ – ಕಾಮರ್ಸ್, ಈ – ಬಿಸಿನೆಸ್, ಸೋಷಿಯಲ್ ಮೀಡಿಯಾಗಳ ಪರ್ವವೇ ಶುರುವಾಗಿದ್ದನ್ನು ಕಾಣಬಹುದು.

ಇಂಟರ್ನೆಟ್‌ವರ್ಕಿಂಗ್‌ ವ್ಯವಸ್ಥೆಯ ಬಳಕೆಯು ವ್ಯಾಪಕವಾಗಿ ಹರಡುವುದಕ್ಕೂ ಮುಂಚೆ ಇದ್ದ ನೆಟ್‌ವರ್ಕಿಂಗ್‌ ವ್ಯವಸ್ಥೆಯು ಇಂಟರ್ನೆಟ್‌  ಉಗಮಕ್ಕೆ ಕಾರಣವಾಯಿತು. ಮೊದಲು ಹೆಚ್ಚಿನ ಸಂವಹನ ನೆಟ್‌ವರ್ಕ್‌ಗಳು ತಮ್ಮದೇ ಆದ ಮಿತಿಗಳನ್ನು ಹೊಂದಿದ್ದು, ಸ್ಥಳೀಯ ನೆಟ್‌ವರ್ಕ್‌ಗಳಲ್ಲಿ ಎರಡು ಸ್ಥಳಗಳ  ನಡುವೆ ಸಂವಹನ ನಡೆಸಲು ಮಾತ್ರ ಅವುಗಳು ಅನುವು ಮಾಡಿಕೊಡುತ್ತಿತ್ತು. ಪ್ರಮುಖ ಕಂಪ್ಯೂಟರ್‌ ನೆಟ್‌ವರ್ಕಿಂಗ್‌ ವಿಧಾನಗಳು ಕೇಂದ್ರೀಯ ಮೇನ್‌ಫ್ರೇಮ್ ಕಂಪ್ಯೂಟರ್‌ ಮಾದರಿಯನ್ನು ಆಧರಿಸಿದೆ. ಭೌತಿಕವಾಗಿ ಪ್ರತ್ಯೇಕವಾಗಿರುವ ನೆಟ್‌ವರ್ಕ್‌ಗಳ ನಡುವೆ ನೆಟ್‌ವರ್ಕಿಂಗ್‌ ತತ್ವಗಳನ್ನು ಅನ್ವೇಷಿಸಲು ಹಲವು ಸಂಶೋಧನಾ ಕಾರ್ಯಕ್ರಮಗಳು ಪ್ರಾರಂಭವಾದವು. ಇದು ಡಿಜಿಟಲ್‌ ನೆಟ್‌ವರ್ಕಿಂಗ್‌ನ ಪಾಕೇಟ್‌ ಸ್ವಿಚಿಂಗ್ ಮಾದರಿಯ ನೆಟ್‌ವರ್ಕಿಂಗ್‌ ಅಭಿವೃದ್ಧಿಗೆ ಕಾರಣವಾಯಿತು. ಡೊನಾಲ್ಡ್‌ ಡೇವಿಸ್‌, ಪೌಲ್ ಬ್ಯಾರನ್‌ , ಮತ್ತು MIT ಮತ್ತು UCLAಯಲ್ಲಿರುವ ಲಿಯೊನಾರ್ಡ್‌ ಕ್ಲೀನ್ರಾಕ್‌ ಪ್ರಯೋಗಾಲಯಗಳಲ್ಲಿನ ಸಂಶೋಧನಾ ಶ್ರಮವೂ ಇದರಲ್ಲಿ ಒಳಗೊಂಡಿತ್ತು. ಇದರಿಂದಾಗಿ ೧೯೬೦ ಮತ್ತು ೧೯೭೦ರ ದಶಕದ ಉತ್ತರಾರ್ಧದಲ್ಲಿ ಅರ್ಪಾನೆಟ್‌ ಮತ್ತು X.25 ಪ್ರೋಟಕಾಲ್‌ಗಳು ಸೇರಿದಂತೆ ಹಲವು ಪಾಕೆಟ್‌-ಸ್ವಿಚ್ಡ್‌ ನೆಟ್‌ವರ್ಕಿಂಗ್‌ ಮಾದರಿಗಳನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು. ಜೊತೆಗೆ ಯುನಿಕ್ಸ್‌ನಿಂದ ಯುನಿಕ್ಸ್‌ಗೆ ಪ್ರತಿಮಾಡುವುದು  ಮತ್ತು ಫಿಡೋನೆಟ್‌ಗಳು ಸಾರ್ವಜನಿಕನಿಕರಿಗೆ ನಿಲುಕುವಂತಾದದ್ದು ಮತ್ತು ಹವ್ಯಾಸಿ ನೆಟ್‌ವರ್ಕಿಂಗ್‌ ವ್ಯವಸ್ಥೆಯ ಜನಪ್ರಿಯತೆಯು ಹೆಚ್ಚಾಗಿತ್ತು. ಆದರೂ ಸಂಪರ್ಕ ರಹಿತ ಪ್ರತ್ಯೇಕ ನೆಟ್‌ವರ್ಕ್‌ಗಳು ಮಿತ ಪ್ರಮಾಣದ ಗೇಟ್‌ವೇಗಳ ಮೂಲಕ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇಂಟರ್ನೆಟ್‌ವರ್ಕಿಂಗ್‌ಗೆ ಹೊಂದುವ ಪ್ರೋಟಕಾಲ್‌ ಅಭಿವೃದ್ಧಿಸಲು ಪಾಕೇಟ್‌ ಸ್ವಿಚಿಂಗ್ ಅನ್ವಯವನ್ನು ರಚಿಸುದು ಇದರಿಂದಾಗಿ ಅಗತ್ಯವೆನಿಸಿತು. ಹೀಗಾಗಿ ವಿವಿಧ ನೆಟ್‌ವರ್ಕ್‌ಗಳನ್ನು ಒಂದು ಶ್ರೇಷ್ಠ ಚೌಕಟ್ಟಿನಲ್ಲಿ ಬಂಧಿಸುವುದು ಸಾಧ್ಯವಾಯಿತು.

ಇಂಟರ್ನೆಟ್‌ ಉಗಮಗೊಳ್ಳಲು ಕಾರಣವಾದ ಇಂಟರ್‌-ನೆಟ್‌ವರ್ಕಿಂಗ್‌ ವ್ಯಾಪಕವಾಗಿ ಹರಡುವ ಮೊದಲು, ಅಂದರೆ ೧೯೫೦ರ ದಶಕದಲ್ಲಿ ಮತ್ತು ೧೯೬೦ರ ದಶಕದ ಪೂರ್ವ ಭಾಗದಲ್ಲಿ ಹೆಚ್ಚಿನ ನೆಟ್‌ವರ್ಕ್‌ನಲ್ಲಿ ಕೇವಲ ಕೇಂದ್ರಗಳ ನಡುವೆ ಸಂವಹನ ನಡೆಸುವುದಕ್ಕಾಗಿ ಮಾತ್ರ ಹೆಚ್ಚಿನ ಸಂವಹನ ನೆಟ್‌ವರ್ಕ್‌ಗಳು ಸೀಮಿತವಾಗಿದ್ದವು. ಕೆಲವು ನೆಟ್‌ವರ್ಕ್‌ಗಳ ತಮ್ಮ ನಡುವೆ ಗೇಟ್‌ವೇಗಳು ಅಥವಾ ಬ್ರಿಡ್ಜ್‌ಗಳನ್ನು  ಹೊಂದಿರುತ್ತಿದ್ದವು. ಆದರೆ ಅನೇಕ ವೇಳೆ ಈ ಬ್ರಿಡ್ಜ್‌ಗಳನ್ನು ಮಿತವಾದ ಬಳಕೆಗೆ ಅಥವಾ ಏಕೋಪಯೋಗಕ್ಕೆಂದು ರಚಿಸಲಾಗುತ್ತಿತ್ತು. ವ್ಯಾಪಕವಾಗಿ ಹರಡಿದ ಕಂಪ್ಯೂಟರ್‌ ನೆಟ್‌ವರ್ಕಿಂಗ್‌ ಪ್ರಮುಖ ಮೇನ್‌ಫ್ರೇಮ್ ವಿಧಾನವನ್ನು ಆಧರಿಸಿದೆ. ಇದರಂತೆ ಉದ್ದದ ನಿರ್ದಿಷ್ಟ ಲೈನುಗಳ ಮೂಲಕ ನೆಟ್‌ವರ್ಕ್‌ಗಳ ಟರ್ಮಿನಲ್‌ಗಳನ್ನು ಸಂಪರ್ಕಿಸಲಾಗುವುದು. ೧೯೫೦ನೇ ದಶಕದಲ್ಲಿ ಕೈಗೊಂಡ ಪೆನ್‌ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿ ಕಾರ್ನೆಜಿ ಮೆಲನ್‌ ವಿಶ್ವವಿದ್ಯಾಲಯದ ಹರ್ಬರ್ಟ್‌ ಸಿಮೊನ್‌ರಂತಹ ವಿಜ್ಞಾನಿಗಳು ಪ್ರಾಜೆಕ್ಟ್‌ RANDನ ಸ್ವಯಂಚಾಲಿತ ಪ್ರಮೇಯ ಋಜುವಾತು ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನೆಗಳನ್ನು ಕೈಗೊಂಡರು. ಇವರ ಸಹಾಯಕ್ಕಾಗಿ ಇಲಿನೋಯ್ಸ್‌ನ ಸುಲ್ಲಿವಾನ್‌ನ ವಿಜ್ಞಾನಿಗಳೊಂದಿಗೆ ಖಂಡಾಂತರ ಸಹಯೋಗವನ್ನು ಪಡೆದುಕೊಳ್ಳುವಾಗ ಈ ನೆಟ್‌ವರ್ಕಿಂಗ್‌ ವಿಧಾನವನ್ನು ಬಳಸಲಾಗಿತ್ತು.