ವಿಶ್ವ ಆಹಾರ ಸಂರಕ್ಷಣೆ ದಿನ ಆಚರಣೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜೂ.10: ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ  ವಿಶ್ವ ಆಹಾರ ಸಂರಕ್ಷಣೆ ದಿನವನ್ನು  ಆಚರಿಸಲಾಯಿತು.
 ನಂತರ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಎಂ. ರವಿಕುಮಾರ್ ಮಾತನಾಡಿ  ಆಹಾರ ಸೇವನೆ ಚಟುವಟಿಕೆಯಲ್ಲಿ ತುಂಬಾ ಕಾಳಜಿ ವಹಿಸಬೇಕು ಇಂದಿನ ದಿನಗಳಲ್ಲಿ ಯುವಕರು ಪಿಜ್ಜಾ ಬರ್ಗರ್ ಹಾಗೂ ಎಣ್ಣೆಯಲ್ಲಿ ಕರೆದಂತಹ ಪದಾರ್ಥಗಳನ್ನು ತಿಂದು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ, ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಇಂದಿನ ಯುವಕರು ಪೌಷ್ಟಿಕ ಆಹಾರವನ್ನು ಸೇವಿಸುವ ಮುಖಾಂತರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು  ಹೇಳಿದರು.
ಸದೃಢವಾದ ದೇಹವನ್ನು ಪಡೆಯಬೇಕಾದರೆ ಪೌಷ್ಟಿಕ ಆಹಾರ ಹಾಗೂ ನಿಯಮಿತ ಆಹಾರ ಸೇವಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಪ್ರಾಚಾರ್ಯರಾದ ಪ್ರಶಾಂತ್ ಕುಮಾರ್ ಎಂ. ಹೆಚ್,  ಪ್ರೊಫೆಸರ್ ರವೀಂದ್ರ ಗೌಡ ,ಪ್ರೊಫೆಸರ್. ಸಿ .ಬಸವರಾಜ , ಹಾಗೂ ಗಣಕಯಂತ್ರ ಉಪನ್ಯಾಸಕರಾದ ಶ್ರೀ ಆರಾಧ್ಯಮಠ ಉಪಸ್ಥಿತರಿದ್ದರು.   ಡಾ. ಶಿವಕುಮಾರ. ದೈಹಿಕ ಶಿಕ್ಷಣ ನಿರ್ದೇಶಕರು ನಿರೂಪಿಸಿದರು. ಪದವಿ ಪೂರ್ವ ಉಪನ್ಯಾಸಕರಾದ ಸುದರ್ಶನ್, ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್, ಶ್ರೀಮತಿ ಅನಿತಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.