ವಿಶ್ವ ಆರೋಗ್ಯ ದಿನಾಚರಣೆ

ಬಾದಾಮಿ,ಏ9: ಹದಿಹರೆಯದ ವಯಸ್ಸಿನ ಹೆಣ್ಣು ಮಕ್ಕಳ ಶಾರೀರಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ಪೂರಕವಾದ ವಾತಾವರಣ ಅವಶ್ಯಕವಾಗಿದೆ. ಹೆಣ್ಣುಮಕ್ಕಳು ಈ ವಯಸ್ಸಿನಲ್ಲಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಸಿ.ಭಂಡಾರಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ನಂದಿಕೇಶ್ವರ ಗ್ರಾಮದ ಶ್ರೀ ಕುಮಾರೇಶ್ವರ ಪ್ರಾಚ್ಯ ವಿದ್ಯಾ ಮಾಧ್ಯಮಿಕ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಹದಿಹರೆಯದ ಹೆಣ್ಣು ಮಕ್ಕಳಿಗೆ ಅರಿವು ಹಾಗೂ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಕ ಪಿ.ಎಚ್. ಮಹಾಲಿಂಗಪುರ ಹಾಗೂ ಜಿ.ವಿ.ಜೋಶಿ ಇವರು “ವಿಶ್ವ ಆರೋಗ್ಯ ದಿನಾಚರಣೆ” ಬಗ್ಗೆ ಮಾತನಾಡಿದರು.
ಮಂಜುನಾಥ್ ಆಂಗಡಿ ಮಲೇರಿಯಾ ರೋಗ ಹಾಗೂ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡಿದರು. ಶಾಂತಾ ಹಾಗೂ ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದ ಜಯಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಶಿಕ್ಷಕ ಹಾವೇರಿ ಸ್ವಾಗತಿಸಿದರು.
ಇನ್ನೋರ್ವ ಶಿಕ್ಷಕ ಉಪ್ಪಾರ ವಂದಿಸಿದರು. ಮುಖ್ಯಾಧ್ಯಾಪಕ ಗುರುಶಾಂತನ್ನವರ, ಆಶಾ ಕಾರ್ಯಕರ್ತೆ ಚನ್ನಮ್ಮ ಪಟ್ಟೇದ, ಆರೋಗ್ಯ ಕೇಂದ್ರದ ಗುರುಸ್ವಾಮಿ ಕೆ., ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.