ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.15: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಬಳ್ಳಾರಿ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಸಿರುಗುಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ರಾವಿಹಾಳು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆತ್ಮಹತ್ಯೆ ಎಂದರೇನು ಆತ್ಮಹತ್ಯೆಗೆ ಕಾರಕ ಅಂಶಗಳಾದ ಆರ್ಥಿಕ, ನಿರುದ್ಯೋಗ, ಮಾನಸಿಕ ಕೀಳರಿಮೆ, ಅನಾರೋಗ್ಯ, ಸಾಮಾಜಿಕ ಸಮಸ್ಯೆ, ಮಾದಕ ದ್ರವ್ಯಗಳ ವ್ಯಸನ, ಒತ್ತಡ, ಕುತೂಹಲ ಇತರೆ ಅಂಶಗಳು ಕಾರಣವಾಗಿರುವ ಅಂಶಗಳ ಬಗ್ಗೆ ತಿಳಿಸಲಾಯಿತು.
ಮಾನವನ ಜೀವನ ಅಮೂಲ್ಯವಾದದ್ದು ದುಡಿಕಿ ತೆಗೆದುಕೊಂಡು ನಿರ್ಧಾರ, ಬದುಕನ್ನು ಹಾಳು ಮಾಡಬಹುದು, ಆದ್ದರಿಂದ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಧೈರ್ಯದಿಂದ ಸಮಸ್ಯೆಗಳನ್ನ ಎದುರಿಸುವ ಗುಣ ನಮ್ಮದಾಗಬೇಕು. ಆತ್ಮಹತ್ಯಾ ಆಲೋಚನೆಗಳು ಬಂದ ಕೂಡಲೇ 14416 ಟೆಲಿ ಮನಸ್ ಉಚಿತವಾಣಿಗೆ ಕರೆ ಮಾಡಿ ತಜ್ಞರಿಂದ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು, ಯೋಗ ಧ್ಯಾನ ವ್ಯಾಯಾಮ ಪೂಜೆ ಸಂಗೀತ ಕೆಲಸದಲ್ಲಿ ತೊಡಗಿಸುವಿಕೆ ಇವುಗಳಿಂದ ಆತ್ಮಹತ್ಯೆ ಆಲೋಚನೆಯನ್ನು ದೂರ ಮಾಡಬಹುದು ಎಂದು ಮೊಹಮ್ಮದ್ ಖಾಸಿಂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಳು ಮಾಹಿತಿ ನೀಡಿದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಮಾಡಿ ಕನಕದಾಸ ವೃತದಲ್ಲಿ ರೈತಾಪಿ ವರ್ಗ ಯುವಕರಿಗೆ ಆತ್ಮಹತ್ಯಾ ತಡೆ ವೃತ್ತವನ್ನು ನಿರ್ಮಿಸಿ ಜನರಿಗೆ ಮಾನವನ ಅಮೂಲ್ಯ ಜೀವನದ ಬಗ್ಗೆ ಮಾಹಿತಿ ನೀಡಿ ಆತ್ಮಹತ್ಯೆ ನಾವ್ಯಾರೂ ಮಾಡಿಕೊಳ್ಳುವುದಿಲ್ಲವೆಂದು ಪ್ರತಿಜ್ಞೆಯನ್ನು  ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ರಾಮಚಂದ್ರಪ್ಪ, ವಿಶ್ವನಾಥ್, ನಾಗರಾಜ್, ರಾಮದಾಸ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಶೇಖರ್ ಮತ್ತು ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿನಿಯರು ಊರಿನ ಹಿರಿಯರು ಇದ್ದರು.