ವಿಶ್ವ ಅಯೋಡಿನ್ ದಿನಾಚರಣೆ

ಧಾರವಾಡ, ನ.20- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಉಪ್ಪಿನ ಬೆಟಗೇರಿ ಇವರ ಆಶ್ರಯದಲ್ಲಿ ವಿಶ್ವ ಅಯೋಡಿನ್ ದಿನಾಚರಣೆ ಹಾಗೂ ಕೋವಿಡ್-19 ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು ಉಪ್ಪಿನ ಬೆಟಗೇರಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇತ್ತೀಚಿಗೆ ಜರುಗಿತು.

   ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ ಮಾತನಾಡಿ, ಅಯೋಡಿನ್ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಾದ ಥೈರಾಯ್ಡ್ ಸಮಸ್ಯೆಯಿಂದ ಗರ್ಭಿಣಿಯರಲ್ಲಿ ಗರ್ಭಪಾತವಾಗುವುದು, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಅದೇ ರೀತಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತ, ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ನಡಿಗೆಯಲ್ಲಿ ಲೋಪದೋಷಗಳು ಉಂಟಾಗುತ್ತವೆ, ದೊಡ್ಡವರಲ್ಲಿ ನಿಶಕ್ತಿ, ಗಳಗಂಡ ರೋಗದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರು ದಿನನಿತ್ಯದ ಆಹಾರದಲ್ಲಿ ಅಯೋಡಿನ್‍ಯುಕ್ತ ಉಪ್ಪನ್ನೆ ಬಳಸಬೇಕು ಹಾಗೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡಬೇಕು. ಬಳಸಿದ ಉಪ್ಪನ್ನು ಡಬ್ಬಿಯಲ್ಲಿ ಮುಚ್ಚಳ ಹಾಕಿ ಇಡಬೇಕು.  ಅಯೋಡಿನ್‍ಯುಕ್ತ ಉಪ್ಪು ನಮ್ಮ ಮಕ್ಕಳ ಹಾಗೂ ಕುಟುಂಬದ ಆರೋಗ್ಯದ ಸಂರಕ್ಷಕ ಎಂದು ತಿಳಿಸಿದರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೊರೊನಾ ತಡೆಗಟ್ಟುವ ಕುರಿತು ಪ್ರತಿಜ್ಞಾ ವಿಧಿ ಭೋದಿಸಿದರು.

  ಸಭೆಯಲ್ಲಿ ವೈದ್ಯ ಎಮ್.ಜಿ. ದೇಸಾಯಿ ಮಾತನಾಡಿದರು.  ಶಂಕ್ರಯ್ಯ ಕರಜಗಿಮಠ ಕಾರ್ಯಕ್ರಮ ಉದ್ಘಾಟಿಸಿದರು.  

  ಕಾರ್ಯಕ್ರಮದಲ್ಲಿ ಸುಮಿತ್ರಾ ಯಲಿಗಾರ, ಅಮೀನಾ ಮಕನದಾರ, ಗ್ರಾಮದ ಮಹಿಳೆಯರು, ಸಾರ್ವಜನಿಕರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

  ಶಾಂತಾ ಚವ್ಹಾಣ ಹಾಗೂ ಪ್ರೇಮಾ ದಿವಟಗಿ ಪ್ರಾರ್ಥನೆ ಮಾಡಿದರು. ಎಮ್.ಆರ್. ದೇಸಾಯಿ ಸ್ವಾಗತಿಸಿ ವಂದಿಸಿದರು.