ವಿಶ್ವ ಅಯೋಡಿನ್ ಕೊರತೆಯ ದಿನ, ಸಪ್ತಾಹ ಕಾರ್ಯಕ್ರಮ ಉದ್ಘಾಟನೆ

ಕೆ.ಆರ್‍ಪೇಟೆ, ನ.7: ಮಾನವನ ದೇಹಕ್ಕೆ ಬೇಕಾದ ಅಗತ್ಯ ಪೆÇೀಷಕಾಂಶಗಳಲ್ಲಿ ಅಯೋಡಿನ್ ಕೂಡ ಒಂದಾಗಿದೆ, ಅಯೋಡಿನ್ ಕೊರತೆಯಿಂದಾಗಿ ಮಾನವನ ಬೆಳವಣಿಗೆಯ ಮೇಲೆ ಅನೇಕ ದುಷ್ಪÀರಿಣಾಮಗಳು ಉಂಟಾಗುತ್ತವೆ ಹಾಗೂ ನನೇಕ ರೋಗಗಳಿಗೆ ಕಾರಣವಾಗುತ್ತದೆ ಎಂದು ಮಕ್ಕಳ ತಜ್ಞ ಡಾ. ಚಂದನ್ ತಿಳಿಸಿದರು.
ಅವರು ಕಿಕ್ಕೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಅಯೋಡಿನ್ ಕೊರತೆಯ ದಿನ ಮತ್ತು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಥೈರಾಯಿಡ್ ಗ್ರಂಥಿಯ ಸಮರ್ಪಕ ಕಾರ್ಯ ನಿರ್ವಹಣೆಗೆ ಹಾಗೂ ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಮಗುವಿನ ದೈಹಿಕ, ಮಾನಸಿಕ ಬೆಳವಣಿಗೆಗೆ ಅಯೋಡಿನ್ ಅಗತ್ಯ. ಸಮುದ್ರದ ಆಹಾರಗಳಾದ ಮೀನು ಸಿಗಡಿ ಹಾಗೂ ಸಮುದ್ರ ಕಳೆಗಳಲ್ಲಿ ಅಯೋಡಿನ್ ಹೆಚ್ಚಾಗಿರುವ ಕಾರಣ ಅವುಗಳನ್ನು ಸೇವಿಸಬೇಕು.
ನಮ್ಮ ಶರೀರಕ್ಕೆ ಬೇಕಾಗುವಷ್ಟು ಅಯೋಡಿನ್ ಸೇವಿಸದಿದ್ದರೆ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಕಲಿಕೆಯಲ್ಲಿ ಹಿಂದುಳಿಯುವಿಕೆ, ಶಕ್ತಿಯ ನಷ್ಟ ದೈಹಿಕ ಮತ್ತು ಮಾನಸಿಕ ವಿಕಲತೆ, ಕಿವುಡು, ಮೂಕತನ, ಮಳೆಗಣ್ಣು, ಸ್ನಾಯುಗಳ ಮರಗಟ್ಟುವಿಕೆ ,ಕುಬ್ಜ ತನ, ನಡಿಗೆಯಲ್ಲಿ ಲೋಪದೋಷ, ವಯಸ್ಕರಲ್ಲಿ ನಿಶಕ್ತಿ, ದೈನಂದಿನ ಕಾರ್ಯಕ್ರಮಗಳಲ್ಲಿ ವೈಫಲ್ಯತೆ, ಗಳಗಂಡ ರೋಗ, ಗರ್ಭಿಣಿಯರಲ್ಲಿ ಮೈಯಿಳಿತ, ಸತ್ತು ಹುಟ್ಟುವ ಮಕ್ಕಳು, ಶಿಶುವಿನ ಮೆದುಳಿನ ಮೇಲೆ ದುಷ್ಪರಿಣಾಮ ಹೀಗೆ ಅನೇಕ ಕಾಯಿಲೆಗಳು ಮಾನವನಿಗೆ ಬರುತ್ತವೆ ಆದ್ದರಿಂದ ತಾವುಗಳೆಲ್ಲರೂ ನಿಗದಿತ ಪ್ರಮಾಣದ ಶುದ್ಧವಾದ ಅಯೋಡಿನ್ ಬಳಸಬೇಕು ಆ ಮೂಲಕ ಮುಂದೆ ಬರುವ ರೋಗಗಳನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಆರೋಗ್ಯ ಪರಿವೀಕ್ಷಕ ನಾಗೇಂದ್ರ ,ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮೇಘನಾ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು .