ವಿಶ್ವ ಅಮ್ಮಂದಿರ ದಿನದ ಪ್ರಯುಕ್ತ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ,ಮೇ.15:ವಿಶ್ವ ಅಮ್ಮಂದಿರ ದಿನದ ಪ್ರಯುಕ್ತ ಜೈನ್ ಸಾಮಾಜಿಕ ತಂಡ ಸಂಗಿನಿ ಹಾಗೂ ಅಲ್-ಬದರ್ ಮಹಾವಿದ್ಯಾಲಯ ಆಸ್ಪತ್ರೆಯ ವತಿಯಿಂದ ಮಹಾದೇವಿ ತಾಯಿ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಉಚಿತ ದಂತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಸಂಗಿನಿ ತಂಡದ ಅಧ್ಯಕ್ಷೆ ಡಾ. ಪ್ರಣೋತಿ ಇಟಾಗಂಪಳ್ಳಿ ಹಾಗೂ ಡಾ.ಸಂಗೀತಾ ಮಹೇಂದ್ರಕರ್ ಮಾತನಾಡಿ, ಆರೋಗ್ಯಕ್ಕೆ ಹಲ್ಲುಗಳ ಪಾತ್ರಮುಖ್ಯ ಆರೋಗ್ಯ ಚೆನ್ನಾಗಿ ಇರಬೇಕಾದರೆ ಹಲ್ಲಿನ ಆರೋಗ್ಯ ಮೊದಲು ಸರಿಯಿರಬೇಕು. ಹಲ್ಲುಗಳು ಸರಿಯಾಗಿದ್ದಾಗ ಎಲ್ಲ ಬಗೆಯ ಆಹಾರ ಸೇವಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಲ್ಲಾ ವೃದ್ಧಾಶ್ರಮದ ಜನರಿಗೆ ಈ ಉಚಿತ ದಂತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು
ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವೈದ್ಯ ತಂಡದವರು ವೃದ್ಧಾಶ್ರಮದ ನಿವಾಸಿಗಳಿಗೆ ಉಚಿತ ದಂತ ಚಿಕಿತ್ಸೆ ಸಲುವಾಗಿ ಅಲ್-ಬದರ್ ಮಹಾವಿದ್ಯಾಲಯ ವತಿಯಿಂದ ಉಚಿತ ಬಸ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಕಾರ್ಯಕ್ರಮದ ನಿಮಿತ್ತವಾಗಿ ಎಲ್ಲಾ ವೃದ್ಧಾಶ್ರಮದ ನಿವಾಸಿಗಳಿಗೆ ಉಪಹಾರ ಮತ್ತು ಹಣ್ಣು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೇತನ ದೋಶಿ, ಸುನೀಲ ಲೋಡಾ, ಡಾ.ಖಾಜಾ ಮೈನುದಿನ್, ಶಿತಲ ಕುಲಕರ್ಣಿ, ಜಯಾ ಅಂಚಲಿಯಾ ಸೇರಿದಂತೆ ಸಂಗಿನಿ ತಂಡದ ಎಲ್ಲಾ ಮಹಿಳೆಯರು ಇದ್ದರು.