ವಿಶ್ವ ಅಪ್ಪಂದಿರ ದಿನ ಆಚರಣೆ

ವಿಜಯಪುರ:ಜೂ.18: ಮಕ್ಕಳು ಹಾಗೂ ಅಪ್ಪನ ನಡುವಿನ ಪ್ರೀತಿಯ ಸಂಕೇತವಾಗಿ ಜೂನ್ 18 ರಂದು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ವ್ಯಾತ್ಸಲ್ಯ. ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು.
ಸಮಾಜದಲ್ಲಿ ಅಸ್ತಿತ್ವವನ್ನು ಒದಗಿಸಿಕೊಟ್ಟವರು ಅಪ್ಪ. ಅಪ್ಪ ಅಮ್ಮನಂತೆ ಸಲುಗೆಯಿಂದ ಇರುವುದು ತುಂಬಾ ಕಡಿಮೆ. ಹೀಗಾಗಿ ಅಪ್ಪನಿಗೆ ಸಲ್ಲಬೇಕಾದ ಪ್ರೀತಿಯ ಪಾಲು ಕೂಡ ಅಮ್ಮನತ್ತವೇ ಹರಿದು ಬಿಡುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಶಿಸ್ತಿನ ಸಿಪಾಯಿಯ ಪಾತ್ರ ನಿರ್ವಹಿಸುವ ಆತನ ಜೀವನದುದ್ದಕ್ಕೂ ಕೊಂಚ ಗಡುಸಾಗಿಯೇ ಕಾಣಿಸುತ್ತಾರೆ. ಆದರೆ ಅವರಲ್ಲೂ ಆಕಾಶದಷ್ಟು ಪ್ರೀತಿ, ವಾತ್ಸಲ್ಯ ಇರುತ್ತದೆ. ಅಪ್ಪನ ಪ್ರೀತಿ ಅಮ್ಮನಷ್ಟೇ ವಿಶಾಲವಾದದ್ದು. ಈ ನಿಟ್ಟಿನಲ್ಲಿ ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ-ಶ್ರೀನಿಧಿ ಬಂಡೆ ಅವರು ತಮ್ಮ ಅಪ್ಪ ಸಂತೋಷ ಬಂಡೆ ಅವರ ಜೊತೆ ವಿಶ್ವ ಅಪ್ಪಂದಿರ ದಿನವನ್ನು ಆಚರಿಸಿದರು.