ವಿಶ್ವ ಅಪ್ಪಂದಿರ ದಿನಾಚರಣೆ

ಮುದಗಲ್,ಜೂ.೨೪-
ಪಟ್ಟಣದ ಎಸ್.ಬಿ ಭಮಸಾಗರ ಶಾಲೆ ಹಾಗೂ ಆರೋಮಾ ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಪ್ಪಂದಿರ ದಿನ ಆಚರಣೆ ಮಾಡಿದರು. ಸಂಸ್ಥೆ ಅಧ್ಯಕ್ಷರು ಆದ ನೀತಾ ಭಮಸಾಗರ್, ಕಾರ್ಯದರ್ಶಿ ಡಾ. ಸಂಜೀವ ಭಮಸಾಗರ, ಆರೋಮ ಪಿಯು ಕಾಲೇಜು ಉಪನ್ಯಾಸಕ ಮಂಜುನಾಥ ಗುಡಿಹಾಳ ಹಾಗೂ ವಿದ್ಯಾರ್ಥಿಗಳ ಅಪ್ಪಂದಿರಾದ ಸುರೇಶ, ಸಿಕಂದರ್, ಶಶಿಧರ ಕಂಚಿಮಠ ಕಾರ್ಯಕ್ರಮ ಕುರಿತು ಮಾತನಾಡಿದರು.
ಅಪ್ಪಂದಿರಗೋಸ್ಕರ ಸಂಸ್ಥೆಯವರು ಹಲವು ಕ್ರೀಡೆಗಳನ್ನು ಆಯೋಜನೆ ಮಾಡಿದ್ದರು. ಗೆದ್ದವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಅಪ್ಪಂದಿರ ಜೊತೆಗೆ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಿ ಸಂತಸ ಪಟ್ಟರು.
ಕಾಲೇಜು ಉಪನ್ಯಾಸಕರು ಹಾಗೂ ಶಾಲಾ ಶಿಕ್ಷಕ ವೃಂದ, ಮಕ್ಕಳು, ಸಿಬ್ಬಂದಿಗಳು ಇದ್ದರು.