ವಿಶ್ವ ಅಂಚೆ ದಿನಾಚರಣೆಅಂಚೆ ಇಲಾಖೆಯ ನೌಕರರಿಗೆ ಸನ್ಮಾನ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಅ.14 ಅಂಚೆ ಇಲಾಖೆಯಲ್ಲಿನ ನೌಕರರ ಸೇವೆಯನ್ನು ಇಂದು ಸ್ಮರಿಸಲೇಬೇಕು, ಸಾರ್ವಜನಿಕರ ನಂಬಿಕೆಯನ್ನುಳಿಸಿಕೊಂಡು, ತನ್ನ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿರುವ ಕೇಂದ್ರದ ಅಂಚೆ ಕಚೇರಿಯ ಸೇವೆ ಶ್ಲಾಘನೀಯ ಎಂದು ತಂಬ್ರಹಳ್ಳಿಯ ಕಿನ್ನಾಳ್ ಫೌಂಡೇಶನ್ ಸಂಚಾಲಕರಾದ ಕಿನ್ನಾಳ್ ಸುಭಾಷ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ರಾಮನಗರದಲ್ಲಿರುವ ಅಂಚೆ ಇಲಾಖೆಯ ಮುಖ್ಯ ಕಚೇರಿಯ ಆವರಣದಲ್ಲಿ ವಿಶ್ವ ಅಂಚೆ ದಿನಾಚರಣೆಯ ಹಿನ್ನೆಲೆಯಲ್ಲಿ, ಅಂಚೆ ನೌಕರರಿಗೂ ಮತ್ತು ಅಂಚೆ ವಿತರಣೆಮಾಡುವವರು, ನಿವೃತ್ತ ನೌಕರರಿಗೂ ಸನ್ಮಾನ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ಕೋರಿಯರ್ ಮತ್ತು ಗ್ರಾಹಕರ ಸೆಳೆಯುವ ಜಾಲಾತಾಣಗಳ ಈ ಶಾಪಿಂಗ್‍ಗಳ ಪೈಪೋಟಿಯ ಯುಗದಲ್ಲಿ ಅಂಚೆ ಸೇವೆ ಇನ್ನೂ ಜೀವಂತ ಉಳಿಸುಕೊಂಡಿದೆ ಎಂದರೆ ಅದರಲ್ಲಿನ ನೌಕರರ ಸೇವೆ ಅಮೋಘ. ಅಲ್ಲದೆ, ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಅಂಚೆ ಇಲಾಖೆಯನ್ನು ಗ್ರಾಹಕರ ಹತ್ತಿರವಾಗಲು ಬ್ಯಾಂಕ್‍ನ್ನಾಗಿ ಅಳವಡಿಸಿಕೊಂಡಿದ್ದು ಇನ್ನಷ್ಟು ವ್ಯವಹಾರಿಕವಾಗಿ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದರು. ಇದು ಬಹುದಿನಗಳಿಂದ ಬಾಡಿಗೆ ಕಟ್ಟದಲ್ಲಿದ್ದು, ಬಸವೇಶ್ವರ ಬಜಾರದ ದೂರವಾಣಿ ಕಚೇರಿಯ ಪಕ್ಕದಲ್ಲಿರುವ ಅಂಚೆ ಇಲಾಖೆಯ ಸ್ವಂತ ಜಾಗದಲ್ಲಿ, ಕಚೇರಿ ತೆರೆಯಲು ಸಂಸದರ ಮೂಲಕ ಮುಖ್ಯ ಇಲಾಖೆಗಳ ಗಮನ ಸೆಳೆಯುತ್ತೇನೆ ಎಂದರು.
ಬಳಿಕ ಕರವೇ(ಪ್ರವೀಣ್ ಶೆಟ್ಟಿಬಣ) ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ, ಅಂಚೆ ಇಲಾಖೆಗಳ ಸೇವೆಯಿಂದ ದೇಶದ ಹಳ್ಳಿಹಳ್ಳಿಗಳಲ್ಲಿನ ನಿರುದ್ಯೋಗ ನೌಕರರಿಗೆ, ಸರ್ಕಾರದ ಆದೇಶಗಳು, ತರಬೇತಿಗೆ ಕರೆಗಳು ಮತ್ತದ ಮೂಲಕವೇ ನಡೆಯುತ್ತಿದ್ದವು. ಸಾರ್ವಜನಿಕರ ಮತ್ತು ಸೌಲಭ್ಯಗಳ ಸೇತುವೆಯಾಗಿ ಅಂಚೆ ಇಲಾಖೆ ಕೆಲಸ ಮಾಡಿದೆ ಎಂದರು.
ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ನೆರೆಗಲ್ ಕೊಟ್ರೇಶ್, ಬಿ.ಜಿ.ಬಡಿಗೇರ್, ಕರವೇ ಅಧ್ಯಕ್ಷ ಶಾಬುದ್ದೀನ್, ಸನ್ಮಾನಿತ ಪೋಸ್ಟ್‍ಮಾಸ್ಟರ್ ಎನ್.ಮಲ್ಲಪ್ಪ ಸೇರಿದಂತೆ ಅನೇಕರು ಮಾತನಾಡಿದರು.
ಪೋಸ್ಟ್‍ಮಾಸ್ಟರ್ ಎನ್.ಮಲ್ಲಪ್ಪ, ಅಂಚೆ ವಿತರಕ ಬಿ.ಸುರೇಶ್, ಲತಾ, ನಿವೃತ್ತ ನೌಕರ ಬಿ.ಕೆ.ರಾಜಶೇಖರ್ ಹಾಗೂ ಸಿಡಿಎಸ್‍ಎಂಪಿ ಎಸ್.ಯಶೋಧ ಸೇರಿದಂತೆ ಇತರರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು.
ಈ ವೇಳೆ ಹೋಟಲ್ ಸಿದ್ದರಾಜ್, ಶ್ರೀಶೈಲ, ಶಿವಕುಮಾರ್, ಬ್ರೇಡ್ ನಜೀರ್, ಮುಟುಗನಹಳ್ಳಿ ಹನುಮಂತ, ಟೈಲರ್ ಶರೀಫ್ ಸಾಬ್, ಚಂದ್ರು ದಶಮಾಪುರ, ಮೆಕಾನಿಕ್ ಇಸ್ಮಾಯಿಲ್ ಹಾಗೂ ಎಸ್.ಎಸ್.ಪೌಂಡೇಷನ್ ಹಾಗೂ ಕಿನ್ನಾಳ್ ಪೌಂಡೇಷನ್‍ನ ಸದಸ್ಯರು ಸೇರಿದಂತೆ ಇತರರಿದ್ದರು.

One attachment • Sca