ವಿದ್ಯಾರ್ಥಿಗಳಲ್ಲಿನ ಕ್ರಿಯಾತ್ಮಕ ಯೋಜನೆ ಹಾಗೂ ಸಂಶೋಧನೆಗಳಸಂರಕ್ಷಣೆಗಾಗಿ ಐಪಿಆರ್ ಕೋಶ ಅವಶ್ಯಕ: ಡಾ. ಅಜಯ್ ಸಿಂಗ್

ಕಲಬುರಗಿ: ಅ.19: ವಿದ್ಯಾರ್ಥಿಗಳಲ್ಲಿನ ಕ್ರಿಯಾತ್ಮಕ ಯೋಜನೆ ಹಾಗೂ ಸಂಶೋಧನೆಗಳನ್ನು ಸಂರಕ್ಷಣೆಗಾಗಿ ಐಪಿಆರ್ ಕೋಶದ ಅವಶ್ಯಕತೆ ಮುಖ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಗುರುವಾರ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಬೌದ್ಧಿಕ ಸಂಪತ್ತು ಘಟಕ ಸ್ಥಾಪನೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೌದ್ಧಿಕ ಸಂಪತ್ತು ಘಟಕ ಇಲ್ಲದೇ, ವಿದ್ಯಾರ್ಥಿಗಳ ಸಂಶೋಧನೆಗಳನ್ನು ಸಂರಕ್ಷಣೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಚಟುವಟಿಕೆಗಳ ರಕ್ಷಣೆ ಮಾಡುವ ಅಗತ್ಯತೆಯನ್ನು ವಿಟಿಯು ಅರಿತು ತನ್ನ ಐಪಿಆರ್ ಕೋಶ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಪೇಪರ್ ಪ್ರೆಸೆಂಟೇಷನ್ ನೀಡಲು ಅನಾನುಕೂಲ ಉಂಟಾಗುತ್ತದೆ. ಹೊರ ರಾಜ್ಯ, ಹೊರ ದೇಶಗಳಿಗೆ ಹೋಗಿ ಪೇಪರ್ ಪ್ರೆಸೆಂಟೇಷನ್ ನೀಡುವ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಸಹಕಾರ ಕೆಕೆಆರ್‍ಡಿಬಿ ನೀಡುತ್ತದೆ ಎಂದು ಹೇಳಿದರು.
ಅಲ್ಲದೇ, ಶಿಕ್ಷಣ, ಅರೋಗ್ಯ, ನೈರ್ಮಲ್ಯ,ಉದ್ಯೋಗ ಹಾಗೂ ಕೃಷಿಗೆ ಕೆ.ಕೆ.ಆರ್.ಡಿ.ಬಿ. ಹೆಚ್ಚಿನ ಆದ್ಯತೆ ನೀಡಿದ್ದು, 2023-24ನೇ ವರ್ಷವನ್ನು ಶಿಕ್ಷಣದ ವರ್ಷ ಎಂದು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಶೇ.25% ರಷ್ಟು ಅನುದಾನ ಮೀಸಲು ಇಡಲಾಗಿದೆ. ಅದರಂತೆ ಎಲ್ಲಾ ಶಾಸಕರು ತಮ್ಮ ಅನುದಾನದಲ್ಲಿ ಶೇ.25% ಅನುದಾನ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರರಿನ ಕೆ.ಎಸ್.ಸಿ.ಎಸ್.ಟಿ. ಮುಖ್ಯ ಕಾರ್ಯದರ್ಶಿ ಡಾ. ಯು.ಟಿ ವಿಜಯ ಮಾತನಾಡಿ, ಇಂದಿಲ್ಲಿ ಉದ್ಘಾಟನೆಗೊಳ್ಳುತ್ತಿರುವ ಬೌದ್ಧಿಕ ಅಸ್ತಿ ಕೋಶ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಬ್ಬಾಗಿಲು ಇದ್ದಂತೆ. ನಮ್ಮೆಲ್ಲರ ಸಂಶೋಧನೆಗಳನ್ನು ರಕ್ಷಿಸಲು ಐಪಿಆರ್ ಸೆಲ್ ಸಹಾಯಕವಾಗಲಿದೆ. ಪ್ರತಿಯೊಬ್ಬರಲ್ಲಿ ನಾವಿನ್ಯತೆಯನ್ನು ಜಗತ್ತಿಗೆ ಪರಿಚಯಿಸಲು ಬೌದ್ಧಿಕ ಸಂಪತ್ತು ಘಟಕ ಅವಶ್ಯಕವಾಗಿದ್ದು, ಹೀಗಾಗಿ ಇಲ್ಲಿನ ಕಲೆ, ಸಾಹಿತ್ಯ, ಕೃಷಿ, ಅರೋಗ್ಯ, ಶಿಕ್ಷಣ ಸೇರಿ ಎಲ್ಲಾ ಬಗೆಯ ನಾವಿನ್ಯತೆಯನ್ನು ಗುರುತಿಸಿ ರಕ್ಷಿಸುವ ಜವಾಬ್ದಾರಿ ನಮ್ಮಮೇಲಿದೆ. ಇದಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ರಾಜ್ಯ ವಿಜ್ಞಾನ ತಾಂತ್ರಿಕ ಮಂಡಳಿಯು ಎಲ್ಲಾ ತರಹದ ಸಹಕಾರ ನೀಡಲಿದ್ದೆ ಎಂದು ಪ್ರಾಸ್ತವಿಕ ಮಾತುಗಳನ್ನಾಡಿದರು.

ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಡಾ. ಬಸವರಾಜ್ ಗಾದಗೆ ಮಾತನಾಡಿ, ವಿದೇಶಗಳಲ್ಲಿ ಐಪಿಆರ್ ಕೋಶ ಮೂಲಕ ಅವರಲ್ಲಿನ ಸಂಶೋಧನೆಗಳನ್ನು ರಕ್ಷಿಸುವಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ ನಾವು ಸಹ ನಮ್ಮಲ್ಲಿನ ಸಂಶೋಧನೆಗಳನ್ನು ರಕ್ಷಣೆ ಮಾಡುವ ಅಗತ್ಯ ಇಂದಿನ ಆಧುನಿಕ ಪ್ರಪಂಚದಲ್ಲಿದೆ. ಆದರಿಂದ ಇಂದಿನ ವಿಟಿಯು ನಲ್ಲಿ ಸಾಕಷ್ಟು ಮೂಲಭೂತ ಸೌಕರ್ಯದ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಹೊಸ ಐದು ಕೋರ್ಸ್ ಆರಂಬಿಸುವ ಉದ್ದೇಶ ಹೊಂದಲಾಗಿದೆ.  ಎಂದರು  

ಹೆಚ್.ಕೆ.ಇ. ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ ರವರು ಮಾತನಾಡಿ ಅತಿ ಕಡಿಮೆ ಸಮಯ ದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಕೇಂದ್ರ ಮತ್ತು ಪ್ರಾದೇಶಿಕ ಕಛೇರಿಯು ತುಂಬಾ ಸಾಧನೆ ಮಾಡಿದೆ ಮತ್ತು ಹಾಗೆ ಮುಂದುವರೆಯಲಿ ಎಂದು ತಿಳಿಸಿದರು.
ಬೌದ್ದಿಕ ಸಂಪತ್ತು ಕೋಶ ಕೇವಲ ವಿಟಿಯುಗಳಿಗಷ್ಟೆ ಅಲ್ಲ ಎಲ್ಲಾ ಅನುದಾನಿತ ಕಾಲೇಜುಗಳಿಗೂ ಒಂದೊಂದು ಐಪಿಆರ್ ಕೋಶ ಸ್ಥಾಪನೆಗೆ ಅವಕಾಶ ನೀಡಬೇಕು.
ಎಸ್ಇ ವಿಭಾಗದ ಪೆÇ್ರೀ. ಡಾ. ಶುಭಾಂಗಿ ಸ್ವಾಗತಿಸಿದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರೀ. ದಯಾನಂದ ಅಗಸರ, ಪೆÇ್ರೀ. ಎಂ.ಎಸ್ ಜೋಗದ್, ಸಿಎಸ್ಇ ವಿಭಾಗದ (ಎಂಸಿಎ) ಪೆÇ್ರೀ. ಅಂಬರೀμï ಭದ್ರಶೆಟ್ಟಿ ಪ್ರೋಫೆಸರ್ ವಿರೇಶ ಪೂಜಾರಿ,ಸೇರಿ ಮುಖಂಡರಾದ ನೀಲಕಂಠರಾವ್ ಮೂಲಗೆ, ಶರಣು ಭೂಸನೂರ್, ವಿಟಿಯುನ ಸಿಬ್ಬಂದಿ ವರ್ಗ ಇದ್ದರು.