ವಿಶ್ವೇಶತೀರ್ಥರಲ್ಲಿ ಭಾರತೀಯ ಏಕತೆಯ ಶಕ್ತಿ ಇತ್ತು ; ಭೃಂಗಿಮಠ

ವಿಜಯಪುರ ;ಮೇ.21: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಸರ್ವಧರ್ಮದವರೊಂದಿಗೆ ಬಾಂಧವ್ಯ ಬೆಸೆಯುವ, ಪರಸ್ಪರ ಸಹಕಾರದ ಮೂಲಕ ಭಾರತದ ಏಕತೆಯನ್ನು ವಿಶೇಷವಾಗಿ ಭಾರತೀಯ ದಾರ್ಶನಿಕರು ಕಂಡ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಶಕ್ತಿ ಅವರಲ್ಲಿತ್ತು, ಅದ್ದರಿಂದಲೇ ಅವರ ಪ್ರತಿ ಪರ್ಯಾಯ ಕಾರ್ಯಕ್ರಮಗಳಲ್ಲಿ ಬಹಳಷ್ಟು ಜನರು ಪಾಲ್ಗೊಳ್ಳುತ್ತಿದ್ದರು. ಎಂದು ನ್ಯಾಯವಾದಿ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.

ಅವರು ಭೃಂಗಿಮಠ ಕ್ರಿಯಾತ್ಮಕ ವೇದಿಕೆಯು ಹಮ್ಮಿಕೊಂಡಿದ್ದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಜನ್ಮ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪೇಜಾವರದ ವಿಶ್ವೇಶತೀರ್ಥ ಶ್ರೀಗಳು ವಿವಿಧ ಸಮುದಾಯದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು, ಎಲ್ಲರನ್ನು ಒಂದಾಗಿಸಲು ವಿಶ್ವಪ್ರಯತ್ನ ಮಾಡಿದ ಅವರು ಭಾರತೀಯರ ದೇಶ ಭಕ್ತಿ ಮತ್ತು ಏಕತೆಯನ್ನು ಕೊಂಡಾಡುತ್ತಿದ್ದರು, ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯವಾಗಿ ಅದು ತಪ್ಪು ಎಂದು ಹೇಳುತ್ತಿದ್ದರು, ಸಮಾಜ ಬೆಳೆಬೆಳೆದಂತೆ ಜೀವನ ಪರಿಸರವೂ ಬೆಳೆಯುತ್ತದೆ ಬದಲಾವಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಮಾನವ ಕಲ್ಯಾಣಕ್ಕಾಗಿ ಬದಲಾವಣೆಯಾಗಬೇಕು ಅದು ಅಭಿವೃದ್ಧಿ ಪರ ಇರಬೇಕು ಎನ್ನುತ್ತಿದ್ದರು, ದೊಡ್ಡ ಮತ್ತು ಸಣ್ಣ ಸಮುದಾಯಗಳ ನಡುವೆ ಉತ್ತಮ ಭಾವೈಕ್ಯತೆ ಬೆಸೆದು ಸದಾ ಭಾರತೀಯರು ಒಂದಾಗಿರಬೇಕು ಆಮೂಲಕ ವಿಶ್ವ ಶಾಂತಿಯಿಂದಿರಬೇಕು ಎಂದು ಹೇಳುತ್ತಿದ್ದರು. ಅವರು ನುಡಿದಂತೆ ನಡೆಯುತ್ತಿದ್ದರು ಅದ್ದರಿಂದಲೇ ಅವರು ವಿಶ್ವವಂದ್ಯರಾಗಿದ್ದರು ಎಂದು ಭೃಂಗಿಮಠ ಹೇಳಿದರು.

ಶ್ರೀಗಳು ತಮ್ಮ ಇಡೀ ಎಂಬತ್ತು ವರ್ಷದ ಯತಿ ಜೀವನದಲ್ಲಿ ಸಾಕಷ್ಟು ಗ್ರಂಥಗಳನ್ನು ಸಂಪಾಧಿಸಿದ್ದರು, ಧರ್ಮ ಸುಧಾರಣೆಗೆ ತಮ್ಮ ಕೆಲಸದಿಂದಲೆ ಹೊಸ ವ್ಯಾಖ್ಯಾನ ಬರೆದರು ಅವರು ಹೇಳಿಕೊಟ್ಟ ಪಾಠಗಳು ಅವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ ಅವರ ಸುಧಾ ಸಾಹಿತ್ಯ ಸಮಾಜಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ವಿವಿರಿಸಿದರು. ಪೇಜಾವರ ಶ್ರೀಗಳು ಉಡುಪಿಯ ತಮ್ಮ ಮಠದಲ್ಲಿ ಭೃಂಗಿಮಠದ ಸಮಾಜಿಕ ಸೇವೆ ಗುರುತಿಸಿ ಸನ್ಮಾನಿಸಿ ಸಾಹಿತ್ಯ ಸೇವೆ ನಿಮ್ಮಿಂದಾಗುತ್ತದೆ ಎಂದು ಆಶೀರ್ವಾ ಮಾಡಿ ಹರಿಸಿದ್ದನ್ನು ಹರಿಸಿದ್ದನ್ನು ನೆನಪಿಸಿದ ಭೃಂಗಿಮಠ ಪೇಜಾವರ ಶ್ರೀಗಳು ದೈಹಿಕವಾಗಿ ಮಾತ್ರ ಅಗಲಿದ್ದಾರೆ ಅದರೆ ಅವರು ಮಾಡಿದ ಸಮಾಜ ಪರ ಕೆಲಸಗಳ ಮೂಲಕ ನಮ್ಮಲ್ಲಿ ಅಮರವಾಗಿದ್ದಾರೆ ಎಂದು ತಿಳಿಸಿದರು.

ಪಂಚಾಕ್ಷರಿ ಮಠ ಅವರು ಮಾತನಾಡಿ ಪೇಜಾವರದ ಹಿರಿಯ ಶ್ರೀಗಳು ಬಾಲ್ಯದಲ್ಲಿಯೆ ಉಡುಪಿ ಮಠದ ಯತಿಗಳಾಗಿ ಬರುಬರುತ್ತಾ ವಿಶ್ವ ಮೆಚ್ಚು ಕೆಲಸಗಳನ್ನು ಮಾಡಿದ್ದಾರೆ.ಪೇಜಾವರದ ಹಿರಿಯ ಶ್ರೀಗಳಾಗಿದ್ದ ಅವರಲ್ಲಿ ಸಮಾಜಿಕ ಬದಲಾವಣೆಯ ಮನಸ್ಸು ಇತ್ತು ಅವರು ವಿಜಯಪುರಕ್ಕೂ ಬಂದಿದ್ದರು ಎಂದು ನೆನಪಿಸಿದರು. ಪ್ರಜ್ವಲಕುಮಾರ ಬಸವರಾಜ, ಋಷೀಲ ಭೃಂಗಿಮಠ, ಜಗು ದಂಡೋತಿ, ಮುಂತಾದವರು ಶ್ರೀಗಳನ್ನು ನೆನೆದರು.