ವಿಶ್ವಾಸಾರ್ಹ ವ್ಯವಹಾರದಿಂದ ಸಹಕಾರ ಸಂಘಗಳ ಏಳ್ಗೆ ಸಾಧ್ಯ

 ಜಗಳೂರು.ನ.೧೯: ರೈತರೊಂದಿಗೆ ವಿಶ್ವಾಸಾರ್ಹ ವ್ಯವಹಾರ ಮಾಡಿದರೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಅಷ್ಟೇ ಅಲ್ಲ ಸಹಕಾರ ಸಂಘಗಳು ರೈತರಿಗೆ ವರದಾನವಾಗಲಿವೆ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ  ಸಹಕಾರ ಇಲಾಖೆ ದಾವಣಗೆರೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ,ದಾವಗೆರೆ ಜಿಲ್ಲಾ ಸಹಕಾರ ಯೂನಿಯನ್ ನಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ , ಇಪ್ಕೋ ಸಂಸ್ಥೆ, ಜಗಳೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಹಾಯೋಗದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ತಾಲೂಕಿ ಸಹಕಾರ ಸಂಘಗಳು ಹೆಚ್ಚಾಗಿ ಬೆಳೆಸಿ ಉಳಿಸಬೇಕು, ಸಂಘದಿಂದ ಕೊಡುವ ಸಾಲ ಪಡೆದ ಸಾವಿರಾರು ರೈತ ಕುಟುಂಬಗಳು ಕೃಷಿ ಚಟುವಟಿಕೆಗಳಿಗೆ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ. ಸಂಘದ ಅಧಿಕಾರಿಗಳು ಇನ್ನು ಹೆಚ್ಚಿನ ಸಾಲ ಸೌಲಭ್ಯವನ್ನು ರೈತರಿಗೆ ಕಲ್ಪಿಸಿ ಕೈ ಹಿಡಿದು ನಡೆಸಬೇಕು ಎಂದರು.ಡಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಜೆ.ಎಸ್ ವೇಣುಗೋಪಾಲರೆಡ್ಡಿ ಮಾತನಾಡಿ, ಸಹಕಾರ ಸಂಘ ಆರಂಭದಿಂದ ರೈತರಿಗೆ ಒಳಿತಾಗಿದೆ. ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಯಾರು ಸಾಲ ಕೊಡುವುದಿಲ್ಲ ನಮ್ಮ ಸೊಸೈಟಯಿಂದ ಲಕ್ಷಾಂತರ ರೂಗಳವರೆಗೂ ಸಾಲಸೌಲಭ್ಯವನ್ನು ನೀಡುತ್ತದೆ. 30 ವರ್ಷ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿದ್ದರಿಂದ ಈ ವರ್ಷ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ಕೆಲಸ ಮಾಡುವ ಜವಾಬ್ದಾರಿ ಹೆಚ್ಚಾಗಿದೆ. ಆರಂಭದಲ್ಲಿ ಸಣ್ಣಪ್ರಮಾಣದಲ್ಲಿ ಆರಂಭವಾದ ಬ್ಯಾಂಕುಗಳು ಇಂದು ಬೃಹತ್ ಪ್ರಮಾಣದಲ್ಲಿ ರೈತರಿಗೆ ಸಾಲ ನೀಡತ್ತಿದ್ದು 700 ಕೋಟಿ ಸಾಲ ನೀಡಿದ್ದೇವೆ ಎಂದರು.