ವಿಶ್ವಸಂಸ್ಥೆಯ ೩ ಸಮಿತಿಗಳ ಅಧ್ಯಕ್ಷತೆ ಭಾರತದ ಹೆಗಲಿಗೆ

ದೆಹಲಿ, ಜ.೯- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿ ಆಯ್ಕೆಗೊಂಡಿರುವ ಭಾರತವು ಮೂರು ನಿರ್ಣಾಯಕ ಅಂಗಸಂಸ್ಥೆ ಸಮಿತಿಗಳ ಅಧ್ಯಕ್ಷತೆವಹಿಸಿಕೊಂಡಿದೆ
ತಾಲಿಬಾನ್ ಮತ್ತು ಲಿಬಿಯಾ ನಿರ್ಬಂಧ ಸಮಿತಿಗಳು ಮತ್ತು ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ,
ಇದೇ ತಿಂಗಳ ೧ ರಂದು ಭಾರತವು ಯುಎನ್‌ಎಸ್‌ಸಿಯಲ್ಲಿ ಎರಡು ವರ್ಷಗಳ ಅಧಿಕಾರಾವಧಿಯನ್ನು ಪ್ರಾರಂಭಿಸಿದ್ದು, ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಬಂಧಗಳ ನಿಯಮಗಳು ಸೇರಿದಂತೆ ನಿರ್ದಿಷ್ಟ ವಿಷಯಗಳ ಬಗ್ಗೆ ಅಂಗಸಂಸ್ಥೆಗಳನ್ನು ಸ್ಥಾಪಿಸುತ್ತದೆ ಎಂದು ಹೇಳಿದರು
೧೯೮೮ರ ನಿರ್ಬಂಧ ಸಮಿತಿ ಎಂದೂ ಕರೆಯಲ್ಪಡುವ ತಾಲಿಬಾನ್ ನಿರ್ಬಂಧ ಸಮಿತಿಯು ಯಾವಾಗಲೂ ಭಾರತಕ್ಕೆ ಹೆಚ್ಚಿನ ಆದ್ಯತೆಯಾಗಿತ್ತು. ಅಫ್ಘಾನಿಸ್ತಾನದ ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಪ್ರಗತಿಗೆ ದೇಶದ ಬಲವಾದ ಆಸಕ್ತಿ ಮತ್ತು ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಸಮಿತಿಯೂ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ನೀಡುವ ಜೊತೆಗೆ ಭಯೋತ್ಪಾದಕರು ಮತ್ತು ಅವರಿಗೆ ಕುಮ್ಮಕ್ಕು ನೀಡುವ ಬೆದರಿಕೆ ಹಾಕುವ ಬಗ್ಗೆ ಗಮನ ಹರಿಸಲು ಸಹಾಯ ಮಾಡುತ್ತದೆ ಎಂದು ಅವರು ನುಡಿದರು.
ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಪ್ರಜಾತಂತ್ರ, ಮಾನವ ಹಕ್ಕುಗಳು ಹಾಗೂ ಅಭಿವೃದ್ಧಿ ಸೇರಿದಂತೆ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯಲು ಸದಾ ಶ್ರಮಿಸುತ್ತದೆ ಎಂದು ಅವರು ತಿಳಿಸಿದರು.