ವಿಶ್ವಸಂಸ್ಥೆಯ ಪಟ್ಟಿಗೆ ಕನ್ನಡ ಸೇರಬೇಕುಃ ಶೇಷರಾವ ಮಾನೆ

ವಿಜಯಪುರ, ಜು.20-ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಇತ್ತಿಚಗಷ್ಟೇ ಹಿಂದಿ ಭಾಷೆಯನ್ನು ಸೇರ್ಪಡೆಗೊಳಿಸಲಾಗಿದೆ. ಇನ್ನೊಂದು ಗಮನಿಸಬೇಕಾದ ಸಂಗತಿ ಏನೆಂದರೆ ವಿಶ್ವ ಸಂಸ್ಥೆಯ ಅನಧಿಕೃತ ಭಾಷೆಗಳಾದ ಪೋರ್ಚುಗೀಸ್, ಕಿಸ್ಟಾಹಿಲಿ ಮತ್ತು ಪರ್ಷಿಯನ್ ಭಾಷೆಗಳನ್ನು ಕನ್ನಡ ಭಾಷೆಯೊಂದಿಗೆ ತುಲನೆ ಮಾಡಿದರೆ ವಿಶ್ವದಾದ್ಯಂತ ಕನ್ನಡ ಭಾಷೆ ಮಾತನಾಡುವ ಜನರೆ ಹೆಚ್ಚಾಗಿದ್ದಾರೆ. ಹೀಗಾಗಿ ವಿಶ್ವದೆಲ್ಲಡೆ ಇರುವ ಕನ್ನಡ ಭಾಷಿಕರಿಗೆ ಜಾಗತಿಕ ವಿಷಯಗಳ ಕುರಿತು ಕನ್ನಡದ ಮೂಲಕ ಅರಿವು ಮೂಡಿಸಲು ಭಾರತ ಸರ್ಕಾರದ ಅಧಿಕೃತ ಅನುಮತಿ ಪಡೆದ ಕನ್ನಡ ಭಾಷೆಯಾಗಿದೆ. ಹೀಗಾಗಿ ಕನ್ನಡ ಶಾಸ್ತ್ರೀಯ ಭಾಷೆಯಾಗಿರುವುದರಿಂದ ವಿಶ್ವ ಸಂಸ್ಥೆಯ ಭಾಷೆಗಳ ಪಟ್ಟಿಗೆ ತ್ವರಿತಗತಿಯಲ್ಲಿ ಕನ್ನಡವನ್ನು ಸೇರಿಸಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಕೆ.ಆರ್. ಮಕಾನದಾರ ಮತ್ತು ಅಶೋಕ ನಂದಿಹಾಳ ಮಾತನಾಡಿದರು.
ಡಾ. ಜಿ.ಆರ್. ಮಕಾನದಾರ, ಭಾಷಾಸಾಬ ವಾಲಿಕಾರ, ಎಸ್.ಎನ್. ಸಾಸನೂರ, ಶರಣಗೌಡ ಪಾಟೀಲ, ಮಹಮ್ಮದ ಇಲಾಯಿ ಅಕ್ಕಲಕೋಟ, ಡಿ.ಬಿ. ಕತ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.