ವಿಶ್ವಸಂತ ಜೋಳಿಗೆಯ ವಿಜಯ ಮಹಾಂತ

ಸಿಂಧನೂರು,ಜು.೨೯-
ಹೌದು ಇವರೊಬ್ಬ ವಿಶ್ವ ಸಂತರೇ ಸರಿ, ವಿಶ್ವದಲ್ಲಿ ಯಾರೂ ಮಾಡದ ಕಾರ್ಯ ಮಾಡಿದವರು, ಕಾಣಬಾರದ ಜೊಳಿಗೆಯ ಹಿಡಿದು ಬೇಡಬಾರದ ಭಿಕ್ಷೆ ಬೇಡಿದವರು ಮಾನವ ಸಮಾಜದ ಸುರಕ್ಷೆಗೈದವರು ಹಳ್ಳಿಗೆ ಏಕೆ ರಾತ್ರಿ ಪಟ್ಟಣಕ್ಕೆ ಪಂಚರಾತ್ರಿಯಂತೆ ಸಂಚರಿಸಿ ನೀಡಿರಯ್ಯ ದುಷ್ಟ ಚಟಗಳ ತುಂಬಿಕೊಳ್ಳುವೆ ಜೋಳಿಗೆ ಎಂದು ಭಿಕ್ಷೆ ಬೇಡಿ ವ್ಯಸನಿಗಳ ಬಾಳು ಹಸನುಗೈದವರು ಅವರೇ ನಮ್ಮೆಲ್ಲರ ಪರಮರಾಧ್ಯರಾದ ಮಹಾಂತಜೋಳಿಗೆಯ ಶಿವ ಶಿಲ್ಪಿ ಚಿತ್ತರಗಿ ಇಲಕಲ್ ಸಂಸ್ಥಾನ ಮಠದ ಡಾಕ್ಟರ್ ಪೂಜಾಶ್ರೀ ಸಂಯಮ ಪ್ರಶಸ್ತಿ ಪುರಸ್ಕೃತರಾದ ವಿಜಯ ಮಹಾಂತ ಅಪ್ಪಗಳು
೧೯೭೫ರಲ್ಲಿ ಅಪ್ಪಗಳ ಸತ್ಯ ಸಂಕಲ್ಪದ ಮಹತ್ತಾಗಿ ಚಿತ್ತರಗೆ ಇಳಕಲ್ ಸಂಸ್ಥಾನ ಮಠದ ಶಾಖ ಮಠ ವಾದ ಗುಣಗುಂದದ ವಿಶೇಷ ಕಾರ್ಯಕ್ರಮದಲ್ಲಿ ರೂಪ ತಾಳಿತು ಈ ಮಹಾಂತ ಜೋಳಿಗೆ ಅಂದು ಪೂಜ್ಯರ ಸೇವಾ ಕೈಂಕರ್ಯದಲ್ಲಿ ನಾನಿದ್ದೆ ಅದೊಂದು ಪವಾಡ ಸದೃಶ ಸಂಕಲ್ಪ ಜಂಗಮ ಜಗದ ಜಂಜಡವ ಪರಿಹರಿಸಬೇಕು ಸಮಾಜ ಸುಖಿ ಸಮಾಜವಾಗಬೇಕು.
ಮನವನ್ನು ಮನೆತನವನ್ನು ಹಾಳು ಮಾಡುವ ಸಂಸಾರವನ್ನು ನರಕವಾಗಿಸುವ ದುರ್ವ್ಯಸನಗಳು ಮಾನವರ ಬದುಕಿನಿಂದ ದೂರವಾಗಬೇಕು ಅದಕ್ಕಾಗಿ ಏನಾದರೂ ಒಂದು ಕಾರ್ಯ ಕೈಗೊಳ್ಳಲೇಬೇಕೆಂದು ಸಂಕಲ್ಪಿಸಿ ೬೩ ಜಂಗಮರ ಮಂಟಪ ಪೂಜಾ ಸಂದರ್ಭದಲ್ಲಿ ಜಂಗಮ ಸಂಕುಲಕ್ಕೆ ಪ್ರಣಾಮಗೈದು ಜಂಗಮನ ಜೋಳಿಗೆ ಅದು ಕೇವಲ ಅರಿವೆಯ ಹಿಟ್ಟು ಕಾಳು ಕಡಿ ಧನ ಕನಕ ಬೇಡುವ ಜೋಳಿಗೆ ಆಗಬಾರದು ಅದು ಅರಿವಿನ ಜೋಳಿಗೆ ಆಗಬೇಕು ಅದು ಸಮಾಜವನ್ನು ಎಚ್ಚರಿಸುವ ಆಗಬೇಕು ಸಮಾಜದ ಸ್ವಾಸ್ಥ್ಯ ಚೆನ್ನಾಗಿರಬೇಕೆಂದರೆ ಈ ಕಾರ್ಯ ಇಂದಿನಿಂದಲೇ ಆರಂಭವಾಗಬೇಕೆಂದು ಚಿಂತನಗೈದು ಮಹಾಂತರು.
ಅಂದೇ ಮಹಾಂತಜೋಳಿಗೆಯನ್ನು ಹಿಡಿದುಕೊಂಡು ಘನವಂತ ಮಹಾಂತರದರು ಜೋಳಿಗೆಯ ಶಿವಸಂತರಾದರು ೧೯೭೫ರಲ್ಲಿ ಆರಂಭವಾದ ಮಹಾಂತಜೋಳಿಗೆಯ ಕ್ರಿಯಾತ್ಮಕ ಕಾಯಕ ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಬೇರೆ ಬೇರೆ ನಾಮರೂಪಗಳೊಂದಿಗೆ ಸಾಗಿದೆ ಮಹಂತ ಜೋಳಿಗೆ ಎಂಬ ಈ ಪರಿಕಲ್ಪನೆ ವಿಶ್ವದಲ್ಲಿಯೇ ಬಹಳ ವಿಶಿಷ್ಟ ಹಾಗೂ ವೈಶಿಷ್ಟ ಪೂರ್ಣ ವಿಶ್ವ ವಿನೂತನ ಹಾಗಾಗಿ ವಿಶ್ವ ಸಂತ ಜೋಳಿಗೆಯ ವಿಜಯ ಮಹಾಂತ ಎಂಬ ಶೀರ್ಷಿಕೆಯನ್ನು ಈ ಶೀರ್ಷಿಕೆಗೆ ನೀಡಲಾಗಿದೆ
ಪೂಜ್ಯ ಅಪ್ಪನವರು ತಮ್ಮ ಬಾಳಿನುದ್ದಕ್ಕೂ ೧೦ ಹಲವು ಸ್ವಾಮೀಜಿಗಳನ್ನು ಜೊತೆಗೂಡಿಕೊಂಡು ಸದಾ ಚರ ಜಂಗಮರಾಗಿ ದುಶ್ಚಟಗಳ ಬಿಕ್ಷೆಗಾಗಿ ನಿರಂತರ ಸಂಚಾರಗೈದರು ಮನೆ ಮನೆಗಳಿಗೆ ಓಣಿ ಓಣಿಗಳಿಗೆ ಊರು ಊರುಗಳಿಗೆ ತಾಲೂಕು ಜಿಲ್ಲೆಗಳಿಗೆ ರಾಜ್ಯ ಹೊರ ರಾಜ್ಯಗಳಿಗೆ ದೇಶ ವಿದೇಶಗಳಿಗೆ ಮಹಾಂತ ಜೋಳಿಗೆ ಸಂಚರಿಸಿ ಸಮಾಜದಲ್ಲಿ ಒಂದು ಹೊಸ ಸಂಚಲನವನ್ನೇ ಉಂಟುಮಾಡಿರುವುದು ಅದ್ಭುತವಾದ ಸತ್ಕಾರ್ಯವಾಗಿದೆ.
ಪಟ್ಟಣ ಪ್ರದೇಶಗಳಲ್ಲಿ ಎಂಟೆಂಟು ದಿನಗಳ ಶಿಬಿರಗಳನ್ನು ಸಂಘಟಿಸಿ ನಾಡಿನ ಚಿಂತಕರನ್ನ ಅನುಭವಿಗಳನ್ನು ಪೂಜ್ಯರನ್ನ ಶ್ರೀಮಠದ ಪ್ರಸಾದ ನಿಲಯದ ವಿದ್ಯಾರ್ಥಿ ವಟುಗಳನ್ನು ಅಕ್ಕನ ಬಳಗದ ತಾಯಂದಿರನ್ನು ಜೊತೆಗೂಡಿಕೊಂಡು ಸುಪ್ರಭಾತ ಸಮಯದಿ ಜನಜಾಗೃತಿ ಪಾದಯಾತ್ರೆ ಗೈಯುವುದರ ಮೂಲಕ ವ್ಯಸನ ಮುಕ್ತ ಸಮಾಜಕ್ಕಾಗಿ ಪಣತೊಟ್ಟ ಮಹಾ ಪಥಿ ಕರಾಗಿ ಸಂಚರಿಸಿ ಜಾಗೃತಿ ಮೂಡಿಸುವ ಆ ಸು ಪ್ರಸಂಗ ಧನ್ಯತೆಗೆ ಸಾಕ್ಷಿಯಾದ ಪುಣ್ಯ ಕ್ಷಣ.
ನಾವೆಲ್ಲ ಜೊತೆಗೂಡಿ ಮಹಾಂತ ಬಂದಿ ಯನೇಳು ಬಾಗಿಲಿಗೆ ಮಹಾಂತ ಬಂದಿ ಯನೇಳು ಹೊನ್ನು ಕೇಳಲು ಅಲ್ಲ ಚಿನ್ನ ಕೇಳಲು ಅಲ್ಲ ಹಾಳು ಮಾಡುವ ಚಟವ ಬೇಡ ಬಂದಿಹನು ಮಹಾಂತ ಎಂದು ಹಾಡುತ್ತಿರುವಾಗ ಪಡೆದ ಆನಂದ ಅಷ್ಟಿಷ್ಟಲ್ಲ ಅದು ನಿತ್ಯ ನಮ್ಮಲ್ಲಿ ಮಾರ್ಧನಿಸುತ್ತದೆ ತಿಳಿದೋ ತಿಳಿಯದೆಯೋ ಸಹವಾಸ ದೋಷದಿಂದಲೂ ಅಂಟಿಕೊಂಡ ಚಟಗಳ ಬಗ್ಗೆ ತಾಯಿತನದ ಪ್ರೀತಿಯ ಅಪ್ಪಗಳು ಚಟಗಳ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಿ ತಿದ್ದಿ ತಿಡಿ ಬುದ್ದಿ ಹೇಳಿ ಮಹಾಂತ ಜೋಳಿಗೆಗೆ ಚಟಗಳನ್ನು ಹಾಕಿಸಿಕೊಂಡು ಅವರನ್ನು ವ್ಯಸನ ಮುಕ್ತರನ್ನಾಗಿಸುವ ಪರಿ ಅದ್ಭುತವಾಗಿರುತ್ತಿತ್ತು ಚಟ-ಬಿಟ್ಟವರು ಉದ್ಧಾರವಾದ ಲಕ್ಷೂಪಲಕ್ಷ ಉದಾರಣೆಗಳು ಇಂದಿಗೂ ನಿತ್ಯ ಸತ್ಯ ಜೋಳಿಗೆ ಜೋಳಿಗೆ ವಿಜಯ ಮಹಾಂತರ ಜೋಳಿಗೆ ನಾಳೆಗೆ ನಾಳೆಗೆ ನಮ್ಮ ಬಾಳಿನ ಏಳಿಗೆ ಎಂಬ ಸತ್ಯದ ಮಹಿಮೆ ಅಸಾಮಾನ್ಯ.
ನಮ್ಮ ಸಂವಿಧಾನದ ೪೭ನೇ ಪರೀಚ್ಛೇದ ಹೀಗೆ ಹೇಳಿದೆ ಸರಕಾರವು ತನ್ನ ಪ್ರಜೆಗಳ ಆಹಾರಮಟ್ಟವನ್ನು ಜೀವನ ಮಟ್ಟವನ್ನು ಏರಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತಮಪಡಿಸುವುದು ಇವುಗಳನ್ನು ಆದ್ಯ ಕರ್ತವ್ಯಗಳೆಂದು ಪರಿಭಾವಿಸಿ ಅಮಲೇರಿಸುವ ಪದಾರ್ಥಗಳನ್ನು ಔಷಧಕ್ಕಾಗಿ ವಿನಹ ಮತ್ತಾವ ವಿಧದಲ್ಲಿಯೂ ಸೇವಿಸದಂತೆ ಪ್ರತಿಭಂದಿಸುವ ಪ್ರಯತ್ನವನ್ನು ಮಾಡಬೇಕು ದುಚ್ಚಟಗಳಿಂದ ಧನ ಹಾನಿ ಮಾನಹಾನಿ ಪ್ರಾಣ ಹಾನಿ ಮನೆತನದ ಹಾನಿ ನಾಗರಿಕ ಸಮಾಜದ ಪ್ರಜೆಗಳಾಗಿರುವ ನಾವು ನಮ್ಮೆಲ್ಲರ ಕರ್ತವ್ಯವೆಂದರೆ ವ್ಯಸನ ಮುಕ್ತ ಸಮಾಜವನ್ನಾಗಿಸುವುದು.
ಆಗಸ್ಟ್ ಒಂದನೇ ತಾರೀಕನ್ನು ವ್ಯಸನ ಮುಕ್ತ ದಿನಾಚರಣೆಯಾಗಿ ಸರ್ಕಾರ ಘೋಷಿಸಿ ರಾಜ್ಯದ ಎಲ್ಲೆಡೆ ಜಿಲ್ಲೆ ತಾಲೂಕು ಪುರಸಭೆ ನಗರಸಭೆ ಪಂಚಾಯಿತಿಗಳಲ್ಲಿ ಶಾಲೆ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡು ಕಾರ್ಯಕ್ರಮವನ್ನು ಸಂಘಟಿಸಿ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಿ ವ್ಯಸನ ಮುಕ್ತ ದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುವುದು ಕಾರಣ ಅಂದು ಮಹಾಂತಜೋಳಿಗೆಯ ಮಹಾನ್ ಸಂತರದ ಚಿತ್ತರಗೆ ಇಳಕಲ್ ಸಂಸ್ಥಾನ ಮಠದ ಮಹಂತಪ್ಪಗಳ ಜನ್ಮದಿನೋತ್ಸವ ಈ ದಿನವನ್ನು ಅರಿತು ಆಚರಿಸಿದರೇ ಮಹಂತಜೋಳಿಗೆ ವ್ಯಸನಿಗಳ ಬಾಳನ್ನು ಉದ್ದರಿಸುತ್ತದೆ ಬದುಕಿನ ಪುನರು ಜೀವನಕ್ಕೆ ತನ್ಮೂಲಕ ನಾಡಿನ ರಾಷ್ಟ್ರದ ಪುನರುಜ್ಜೀವನಕ್ಕೆ ನಾಂದಿ ಹಾಡುತ್ತದೆ.
ನಾವು ಮೊದಲು ಮಾನವರಾಗಬೇಕು ಮಾನವತೆಯನ್ನು ರೂಪಿಸಿಕೊಳ್ಳಬೇಕು ಇದಕ್ಕೆ ಬೇಕಾಗಿರುವುದು ಶ್ರದ್ಧೆ ಯೊಂದೇ ಈ ಶ್ರದ್ಧೆ ಇಚ್ಛಾಶಕ್ತಿ ಯಾಗಿ ಪರಿವರ್ತಿತವಾದಾಗ ಭರವಸೆಗೊಂದು ಹೊಸ ಅರ್ಥ ಇಂದು ಹಳ್ಳಿ ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ ಆದರೆ ನೀರಾದೊರೆಯುತ್ತದೆ ಎಷ್ಟೋ ಮಕ್ಕಳಿಗೆ ಪುಷ್ಟಿದಾಯಕವಾದ ಹಾಲಿಲ್ಲ ಆದರೆ ಆಲ್ಕೋಹಾಲ್ ಎಲ್ಲೆಡೆಯೂ ಲಭ್ಯ ಮನೆಗೆ ಬಂದವರಿಗೆ ಶರಬತ್ತು ಸಿಗುವುದಿಲ್ಲ ಆದರೆ ಶರಾಬು ಧಾರಾಳವಾಗಿ ಸಿಗುತ್ತದೆ ಇದೊಂದು ಮಾನವ ಸಮಾಜದ ವಿಪರ್ಯಾಸ ಚಟಕ್ಕೆ ಬಿದ್ದ ಬಾಳು ಹಾಳು ಸಂಸಾರದ ತುಂಬಾ ಗೋಳು.
ಚಟಕ್ಕೆ ಬಿದ್ದವನನ್ನು ಎಬ್ಬಿಸುವುದು ಕಷ್ಟ ಚಟಕ್ಕೆ ಆತನೇ ಆಹಾರವಾಗುತ್ತಾನೆ. ಇಷ್ಟೆಲ್ಲದರ ಮಧ್ಯದಿ ಬಿದ್ದ ಬಾಳುಗಳನ್ನು ಎಬ್ಬಿಸಿ ಉದ್ದರಿಸಿ ಹರಸಿದ ಮಹಂತರ ಮಹತ್ಕಾರ್ಯಕ್ಕೆ ಮನುಕುಲವೇ ಶರಣಾಗಿ ಜಾತಿ ಮತ ಪಂಥ ಪಂಗಡವನ್ನು ಮೀರಿ ನಿಂತ ಈ ಸಮಾಜವಾದಿಯ ಸಂತನ ಸತ್ಯ ಸಂಕಲ್ಪಕ್ಕೆ ನಾವೆಲ್ಲ ನಿತ್ಯ ಶ್ರಮಿಸಬೇಕು ಸಾಮಾಜಿಕ ಸಬ್ಯತೆಗೆ ಭಂಗ ತರುವ ಕುಟುಂಬಗಳನ್ನು ಅದೋಗತಿಗೆಳೆದು ಬೀದಿಗೆ ತರುವ ಈ ದುಶ್ಚಟವೆಂಬ ಮಾರಿಯನ್ನು ತೊಲಗಿಸಲೇಬೇಕು ಬನ್ನಿ ಬಾಂಧವರೇ ವ್ಯಸನ ಮುಕ್ತಿ ದಿನವನ್ನು ಕೇವಲ ಒಂದು ಸಾಮಾನ್ಯ ಜಯಂತಿಯನ್ನಗಿರಿಸದೆ ನಮ್ಮೆಲ್ಲರ ಜವಾಬ್ದಾರಿಯ ದಿನವಾಗಿಸೋಣ
ನಾಳೆ ಎಂದರೆ ಹಾಳು ಇಂದೇ ಮುಂದಡಿ ಇಡೋಣ, ಸುಖೀ ಸಮೃದ್ಧ ವ್ಯಸನ ಮುಕ್ತ ಸಮಾಜದ ಕನಸು ಕಾಣೋಣ,ಮಹಾಂತ ಜೋಳಗಿಯ ಸಂತರ ಸತ್ಯ ಸಂಕಲ್ಪಕ್ಕೆ ಜೊತೆಯಾ
ಗೋಣ, ಜೈ ಅನ್ನೋಣ.

            ಮಹಾಂತ ಸ್ವಾಮೀಜಿ ಮುದ್ಗಲ್,
         ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ.
           ಮಠ, ತಿಮ್ಮಾಪುರ.