ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಕೆ-ಸೆಟ್ ವಿದ್ಯಾರ್ಥಿಗಳಿಗೆ ಸನ್ಮಾನ

ಕಲಬುರಗಿ:ನ.18: ಗುಲಬರ್ಗಾ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದಲ್ಲಿ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬಿಳ್ಕೋಡವ ಸಮಾರಂಭಕ್ಕೆ ಹಣಕಾಸು ಅಧಿಕಾರಿಗಳಾದ ವಿಜಯಕುಮಾರ ಭೂತಪೂರ ಅವರು ಉದ್ಘಾಟಿಸಿದರು.

ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ವಿಜಯಕುಮಾರ ಅವರು ಮಾತನಾಡಿ ಪ್ರತಿ ವರ್ಷ ನಮ್ಮ ವಿಭಾಗದಿಂದ 10-15 ವಿದ್ಯಾರ್ಥಿಗಳು ಪಾಸಾಗತಾನೆ ಹೊಗುತ್ತಾರೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ ರಾಜಕುಮಾರ ಕಗ್ಗನಮಡಿ, ಪ್ರಮೋದ ಅವರು ಆಗಮಿಸಿದರು. ಸಿಂಡಿಕೇಟ್ ಸದಸ್ಯರಾದ ಸಂಪತಕುಮಾರ ಲೋಯಾ ಅವರು ಅಧ್ಯಕ್ಷತೆ ವಹಿಸಿದ್ದರು.

ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸಮರಿನ್ ಬೇಗಂ ಮಖಬೂಲ್‍ಮಿಯಾ, ಸೈಯದಾ ಅಫಸಾನಾ ಅಂಜುಮ್ ಸೈಯ್ಯದ ಮಹಬೂಬ, ರೇಣುಕ ಶಿವಕುಮಾರ, ಗರೀಬ್ ಪಾಶಾ ಸಾಧಿಕ್ ಹುಸೇನ, ಸೈಯಿದಾ ಖಸೀಮ್ ಫಾತಿಮಾ ಸೈಯ್ಯದ ಮುಸ್ತಫಾ ಹುಸೇನ, ರೂತ್ ಮಾಕ್ರ್ಸ್ ಶರ್ಮಾ, ಶ್ರೀಕಾಂತ ಭೀಮಣ್ಣ, ಸಾದಿಯಾ ತಹಸೀನ್, ಸಿದ್ದಕ್ಯೂ ಮಹ್ಮದ ಉಸ್ಮಾನ, ಅಶ್ವಿನಿ ವೀರಣ್ಣಾ ಗುಳಗಿ, ನಟರಾಜ್ ಬಸವರಾಜ ಹೀಗೆ 10 ಜನ ವಿದ್ಯಾರ್ಥಿಗಳು ಕೆ-ಸೆಟ್‍ನಲ್ಲಿ ಪಾಸಾಗಿರುತ್ತಾರೆ. ಹಾಗೂ ವಿಭಾಗದಿಂದ ವರ್ಗಾವಣೆಯಾದ ಸಿಬ್ಬಂದಿಗಳಾದ ಲಕ್ಷ್ಮೀಬಾಯಿ ಪರೀಟ, ಜಗನ್ನಾಥ ಕೆಂಗಲ್, ದೀಪೀಕಾ ಭೀಮಶಾ ಇವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.

ವಿಭಾಗದ ಅತಿಥಿ ಉಪನ್ಯಾಸಕರಾಗಿ ಪೃಥ್ವಿರಾಜ ಬೆಡಜರಗಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಸಂಜೀವಕುಮಾರ ಕಾಂಬಳೆ, ಮಹಾದೇವ ಗೌಳಿ, ಶರಣಪ್ಪಾ ಮುಡಬೂಳ, ಸಿದ್ದಣ್ಣ ಕುಸನೂರ, ರಾಜೇಶ್ವರಿ ಪಾಟೀಲ, ಸರಸ್ವತಿಬಾಯಿ ಹಾಗೂ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.