ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಮೂಲಕ ವಸತಿ ನಿಲಯಗಳ ನಿರ್ವಹಣೆ

ಕಲಬುರಗಿ,ಆ.25: ಸುಗಮ ಕಾರ್ಯನಿರ್ವಹಣೆ ಮತ್ತು ನಿಖರತೆಗಾಗಿ ಡಿಜಿಟಲೀಕರಣವು ಬಹಳ ಮುಖ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ಮ್ಯಾನೇಜ್‍ಮೆಂಟ್ ಸಾಫ್ಟ್‍ವೇರ್ ಅಪ್ಲಿಕೇಶನ್ ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲೀಕರಣವು ವಿಶ್ವವಿದ್ಯಾನಿಲಯ ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮ ಪ್ರವೇಶ, ಕೊಠಡಿ ಹಂಚಿಕೆ, ಪಾವತಿಯನ್ನು ತಮ್ಮ ಮೊಬೈಲ್ ಮೂಲಕ ಪಡೆಯಲು ಇದು ಸಹಾಯ ಮಾಡುತ್ತದೆ. ಅವರು ತಮ್ಮ ಹಾಸ್ಟೆಲ್ ಚಟುವಟಿಕೆಗಳನ್ನು ತಮ್ಮ ಮೊಬೈಲ್‍ನಿಂದ ನಿರ್ವಹಿಸಬಹುದು. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಕ್ಕೆ ಬರುವ ಮೊದಲು ಅವರು ತಮ್ಮ ವಸತಿ ಸೌಕರ್ಯವನ್ನು ಪಡೆಯಬಹುದು. ವಿದ್ಯಾರ್ಥಿಗಳ ವಿಷಯಗಳನ್ನು ಡಿಜಿಟಲ್ ರೀತಿಯಲ್ಲಿ ನಿರ್ವಹಿಸುವ ಮೂಲಕ ವಿಶ್ವವಿದ್ಯಾಲಯವೂ ಇದರ ಪ್ರಯೋಜನ ಪಡೆಯುತ್ತದೆ ಎಂದು ಅವರು ಹೇಳಿದರು.
ಡೇಟಾದ ನಿಖರತೆ, ಪಾವತಿಯ ಮೇಲ್ವಿಚಾರಣೆ, ವಸತಿ ಲಭ್ಯತೆ ಇತ್ಯಾದಿ. ನಾವು ಡಿಜಿಟಲ್ ಪ್ರಪಂಚದಲ್ಲಿದ್ದೇವೆ. ಆದ್ದರಿಂದ ನಮ್ಮ ಕೆಲಸ ಸುಲಭವಾಗಿ ಮಾಡಲು ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಬೇಕಾಗಿದೆ ಎಂದು ಅವರು ತಿಳಿಸಿದರು.
ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ. ಆರ್.ಎಸ್. ಹೆಗಡಿ, ಕ್ಯಾಂಪಸ್ ಡೆವಲಪ್ಮೆಂಟ್ ಡೀನ್ ಪೆÇ್ರ. ಪೆÇ್ರ. ಚನ್ನವೀರ್ ಆರ್.ಎಂ., ಸಿಒಇ ಕೋಟ ಸಾಯಿಕೃಷ್ಣ, ಐಕ್ಯೂಎಸಿ ನಿರ್ದೇಶಕ ಪೆÇ್ರ. ಗಣೇಶ್ ಪವಾರ್, ಮುಖ್ಯ ವಾರ್ಡನ್ ಡಾ. ಬಸವರಾಕ್ ಎಂಎಸ್, ಎಲ್ಲ ವಾರ್ಡನ್‍ರು ಮತ್ತು ಕೇರ್ ಟೇಕರ್‍ಗಳು ಉಪಸ್ಥಿತರಿದ್ದರು.