ವಿಶ್ವವಿದ್ಯಾಲಯಗಳ ಸಿಬ್ಬಂದಿಗಳ ವೇತನಕ್ಕಾಗಿ 11 ಕೋಟಿ 60 ಲಕ್ಷ ಬಿಡುಗಡೆ- ಎಸ್.ವಿ ಸಂಕನೂರ

ಧಾರವಾಡ ಮಾ.28-ರಾಜ್ಯದಲ್ಲಿ ಅಡ್ಹಾಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೂರು ಚಿತ್ರಕಲಾ ಮಹಾವಿದ್ಯಾಲಯದ ಹಾಗೂ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವುಗಳ ಸಿಬ್ಬಂದಿಗಳಿಗೆ 2020-21 ನೇ ಸಾಲಿನಲ್ಲಿ ನೀಡಬೇಕಾದಂತಹ ಬಾಕಿ ವೇತನಕ್ಕಾಗಿ ಆರ್ಥಿಕಿ ಇಲಾಖೆಯು11 ಕೋಟಿ 60 ಲಕ್ಷ ಹಣ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ತ ಸದಸ್ಯರಾದ ಎಸ್.ವ್ಹಿ.ಸಂಕನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಚಿತ್ರಕಲಾ ಪರಿಷತ್ತಿನ ಕಾಲೇಜ ಆಫ್ ಫೈನ್ ಆಟ್ರ್ಸ್-ಬೆಂಗಳೂರು, ವಿಜಯ ಲಲಿತ ಕಲಾ ಕಾಲೇಜು-ಗದಗ ಮತ್ತು ಎಂ.ಎಂ.ಕೆ. ಕಾಲೇಜ್ ಆಫ್ ವಿಜುಯಲ್ ಆಟ್ರ್ಸ್-ಕಲಬುರ್ಗಿ ಇಲ್ಲಿ 8 ತಿಂಗಳಿಂದ ವೇತನ ಬಿಡುಗಡೆಯಾಗದೆ ತೊಂದರೆಗಿಡಾಗಿದ್ದು ಅದೇ ರೀತಿ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಹೊರಗುತ್ತಿಗೆ ಆಧಾರ ಮೇಲೆ ನೇಮಕಾತಿಗೊಂಡು ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಕೂಡ ವೇತನವಿಲ್ಲದೆ ಆರ್ಥಿಕ ತೊಂದರೆಗಿಡಾಗಿದ್ದರು. ಈ ಕುರಿತು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ನಿಯಮ 72 ಮತ್ತು 330 ರ ಅಡಿಯಲ್ಲಿ ಈ ವಿಷಯವನ್ನು ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ ಸಂಕನೂರ, ಶ್ರೀಕಂಠೇಗೌಡರು, ಮರಿತಿಬ್ಬೇಗೌಡರು ಪ್ರಸ್ತಾಪಿಸಿದ್ದು ಇದು ಅಲ್ಲದೆ ವಿಧಾನ ಪರಿಷತ್ತ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸಹ ಅರಕಾರಕ್ಕೆ ಹಣಬಿಡುಗಡೆಗೆ ಸೂಚನೆ ನೀಡದ್ದನ್ನು ಸ್ಮರಿಸಬಹುದಾಗಿದೆ ಎಂದು ವಿಧಾನ ಪರಿಷತ್ತ ಸದಸ್ಯರಾದ ಎಸ್.ವ್ಹಿ.ಸಂಕನೂರ ಹೇಳಿದರು.