ವಿಶ್ವರಾಧ್ಯರ ಪುರಾಣ ಮಹಾಮಂಗಳೋತ್ಸವ

ಕಲಬುರಗಿ,ಡಿ 26: ಇಲ್ಲಿನ ಮಹಾದೇವ ನಗರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ವೀರಶೈವ ಅಕ್ಕಮಹಾದೇವಿ ಮಹಿಳಾ ಮಂಡಳ ಹಾಗೂ ವೀರಶೈವ ಬಂಧು ಸಮಾಜದ ಸಂಯುಕ್ತಾಶ್ರಯದಲ್ಲಿ ಡಿ.13ರಿಂದ ಸಾಗಿ ಬಂದ ಅಬ್ಬೆತುಮಕೂರ ವಿಶ್ವರಾಧ್ಯರ ಪುರಾಣದ ಮಹಾಮಂಗಲೋತ್ಸವ ಹಾಗೂ ಅಕ್ಕಮಹಾದೇವಿ ಪಂಚಲೋಹ ಮೂರ್ತಿ ಪಲ್ಲಕ್ಕಿ ಉತ್ಸವ ನೆರವೇರಿತು.
ಪುರಾಣ ಪ್ರವಚನಕಾರರಾದ ನಾಗಲಿಂಗಯ್ಯ ಶಾಸ್ತ್ರಿಗಳು ಸ್ಥಾವರಮಠ ಆಲೂರ ಬಿ ಸುಂಟನೂರ ರವರು ನಡೆಸಿಕೊಟ್ಟರು ಸಂಗೀತ ಗಾನಕೋಗಿಲೆ ಚೇತನ ಎಸ್ ಬೀದಿಮನಿ ತಬಲ ಮೌನೇಶ ಪಂಚಾಳ ಇವರ ಸಂಗೀತ ಸಾಹಿತ್ಯದೊಂದಿಗೆ ನಡೆದುಕೊಂಡು ಬಂದಿತು.
ಧರ್ಮ ಸಭೆ ಕಾರ್ಯಕ್ರಮದ ಸಾನಿಧ್ಯವನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ,ಚಿನ್ಮಯಗಿರಿಯ ಸಿದ್ದರಾಮ ಶಿವಾಚಾರ್ಯರು , ನರೋಣದ ಚನ್ನಮಲ್ಲ ಸ್ವಾಮಿಗಳವರು ವಹಿಸಿದ್ದರು. ವೀರಶೈವ ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷರಾದ ಸಿದ್ದಮ್ಮಾ ಎಸ್ ಬೀದಿಮನಿ. ಹಾಗೂ ವೀರಶೈವ ಬಂಧು ಸಮಾಜ ಮಹಾದೇವ ನಗರ ಶೇಖರೋಜ ಅಧ್ಯಕ್ಷ ಸುಭಾಶ್ಚಂದ್ರ ಜಾಬಾಶೆಟ್ಟಿ ಸಿದ್ದಣ್ಣ ಗೌಡ ಉದನೂರ ಶಿವಾನಂದ ಬೆನ್ನೂರ ಶಂಕ್ರಯ್ಯ ಸ್ವಾಮಿ ಹಿರೇಮಠ ಶಿವಯ್ಯ ಸ್ವಾಮಿ ಚಂದ್ರಕಾಂತ ಹವನೂರ ಸಂಜಯ ಕಾಂಬ್ಳೆ ಚಂದ್ರಕಾಂತ ವಡಗೇರಿ ಶಿವಶರಣಪ್ಪ ಅಷ್ಟಗಿ ರೇವಣಸಿದ್ದಪ್ಪಾ ಗೌಡ ಬಿರಾದಾರ ನಾಗೇಂದ್ರಪ್ಪಾ ಬಿರಾದಾರ ಮಹಾದೇವಿ ಹಿರೇಮಠ ಹಾಗೂ ಅತಿಥಿ ಗಣ್ಯರು ಮತ್ತು ಅಪಾರ ಭಕ್ತ ಜನಸ್ತೋಮ ಉಪಸ್ಥಿತರಿದ್ದರು ಎಂದು ವಿಶ್ವರಾಧ್ಯ ಸೇವಾ ಸಮಿತಿ ಸಂಘಟನೆ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗಿ ತಿಳಿಸಿದ್ದಾರೆ.