ವಿಜಯಪುರ:ಮಾ.30: ಮಾಸಿಕ ಶಿವಾನುಭವ ಗೊಷ್ಟಿಯ ಅಂಗವಾಗಿ ವೀರಶೈವ ಲಿಂಗಾಯತ ಸಾಂಸ್ಕøತಿಕ ಭವನದಲ್ಲ ವಿಶ್ವರಂಗ ಭೂಮಿ ದಿನಾಚಾರಣೆಯನ್ನು ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದ ಸಾಹಿತಿರಮೇಶ ಕೋಟ್ಯಾಳ ಪ್ರತಿವರ್ಷಜಗತ್ತಿನಾದ್ಯಂತ ಮಾರ್ಚ್ 27 ರಂದು ವಿಶ್ವರಂಗಭೂಮಿ ದಿನಾಚರಣೆಆಚರಿಸಲಾಗುತ್ತಿದೆ.
ಅಂದುರಂಗಕಲಾವಿದರೆಲ್ಲ ಸೇರಿಉತ್ಸವರೂಪದಲ್ಲಿಆಚರಿಸುವದರೊಂದಿಗೆರಂಗ ಸಂದೇಶ, ವಿಚಾರ ಸಂಕಿರಣರಂಗಗೀತೆರಂಗಭೂಮಿಯ ವಿವಿಧ ಸಂಕೀರ್ಣ ಸಮಸ್ಯಗಳ ಕುರಿತುಕಲಾವಿದರುರಂಗಾಸಕ್ತರು ರಂಗಕರ್ಮಿಗಳು ರಂಗ ನಿರ್ದೇಶಕರು, ರಂಗ ನಟರು, ರಂಗತಂತ್ರಜ್ಞರು, ರಂಗ ಪ್ರದರ್ಶನ ಹಾಗೂ ಸಂವಾದವನ್ನುಏರ್ಪಡಿಸುವದು ಆ ಮೂಲಕ ರಂಗ ಸಂಸ್ಕøತಿಯನ್ನುಇನ್ನಷ್ಟು ಕ್ರಿಯಾಶೀಲಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಪವಿತ್ರ ದಿನವೆಂದು ಭಾವಿಸಲಾಗಿದೆ.
ಭಾರತದಲ್ಲಿಯು ಸಹ ಮುಂಬೈಯಿ, ಕೊಲ್ಕತ್ತಾ, ಭೂಪಾಲ ಮುಂತಾದ ಕೆಲ ಮಹಾ ನಗರಗಳಲ್ಲಿ ನಟ ನಟಿಯರು ರಂಗಪೊಷಾಕುಗಳನ್ನು ಧರಿಸಿ ಬೀದಿಗಳಲ್ಲಿ ಮೆರವಣಿಗೆಮಾಡುವದರ ಮೂಲಕ ರಂಗಭಿಯಾನದ ಮೂಲಕ ಜಗೃತಿ ಮೂಡಿಸಲಾಗುತ್ತಿದೆಎಂದಅವರುರಂಗ ಭೂಮಿಯ ಆಯಾಮಗಳನ್ನು ಜಿಜ್ಷಾಸೆಗೆ ಒಳಪಡಿಸಿದ ಆಧುನಿಕರಂಗ ನಿದೇರ್ಶಕರಲ್ಲಿ ಸಿಜಿಕೆ, ಕೆವಿ ಸುಬ್ಬಣ್ಣ, ಶ್ರೀರಂಗ, ಬಿ ವಿ ಕಾರಂತ, ಕಿ ರಂ ನಾಗರಾಜ, ಪ್ರಸನ್ನಆಧುನಿಕರಂಗ ಭೂಮಿಗೆಕಾಯಕಲ್ಪ ನೀಡಿದವರು. ಕನ್ನಡ ಸಾಹಿತ್ಯದ ಮಹತ್ವದಕಥೆ, ಕಾದಂಬರಿ, ಕಾವ್ಯ ಅಳವಡಿಸಿಕೊಂಡು ರಂಗದ ಮೇಲೆ ರಂಗವಿನ್ಯಾಸ, ವಸ್ತ್ರ ವಿನ್ಯಾಸ, ಬೆಳಕಿನ ವಿನ್ಯಾಸ, ರಂಗ ಪರಿಕರ, ಪ್ರಸಾದನ ಹೀಗೆ ಪ್ರತಿಯೊಂದರಲ್ಲಿ ಹೊಸದೊಂದು ಲೋಕವನ್ನುತೋರಿಸುವಛಲ ಹೊಂದಿದ್ದರು. ಅದರಂತೆ ಶ್ರೀಶಿವಕುಮಾರ ಶಿವಾಚಾರ್ಯರು ಸಿರಿಗೆರೆಯಲ್ಲಿ ಶ್ರೀ ತರಳುಬಾಳು ಕಲಾ ಸಂಘ ಸ್ಥಾಪಿಸಿ ತನ್ಮೂಲಕ ಶರಣರ ನಾಟಕಗಳನ್ನು ತೆರೆಯ ಮೇಲೆ ತಂದರು. ಮುಂದೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಈ ಪರಂಪರೆ ಮುಂದುವರೆಸಿ ಶಿವ ಸಂಚಾರದ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಜನರಿಗೆತಲುಪಿಸುವಲ್ಲಿರಂಗಭೂಮಿಯೊಂದು ಸುವರ್ಣ ಮಾಧ್ಯಮವೆಂದು ಅರಿತಿದ್ದರು.
ಅದರಂತೆ ಸುಮಾರು ದಶಕಗಳಿಂದ ವಿಜಯಪುರದ ಸ್ಥಳಿಯ ರಂಗ ಸಂಸ್ಥೆಗಳಾದ ಕಲಾ ಮಾಧ್ಯಮ, ರಂಗ ಮೇಳ, ಬೆಳಗು ರಂಗ, ಆಗಾಗ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತ ರಂಗ ಪ್ರಯೋಗಗಳನ್ನು ನಡೆಸುತ್ತಿರುವುದು ಶ್ಲಾಘನೀಯಎಂದು ಹೇಳಿದ ಅವರು ಇಂದಿನ ಜಾಗತಿಕರಣದಲ್ಲಿರಂಗ ಭೂಮಿಯನ್ನುರಂಗಚಿಕಿತ್ಸೆಎಂದು ತಿಳಿದು ಮನ ಪರಿವರ್ತನೆಗಾಗಿ ಸಮಾಜದಎಲ್ಲ ಸ್ಥರಗಳನ್ನುಮುಟ್ಟಬೇಕಾಗಿದೆ. ನಮಗೆ ಇಷ್ಟೆಲ್ಲಾಕೊಟ್ಟ ಸಮಾಜಕ್ಕೆ ಪ್ರತಿಯಾಗಿಎಲ್ಲಾ ಬಗೆಯ ರಂಗಕರ್ಮಿಗಳು ನಾಟಕಕಲೆಯ ಮೂಲಕ ಶ್ರಮಿಸಿ ತಮ್ಮಋಣ ಸಂದಾಯಮಾಡಬೇಕಾಗಿದೆ. ಹೀಗಾದಗ ಮಾತ್ರರಂಗ ಭೂಮಿಜನರಿಗೆ ಹತ್ತಿರವಾಗುತ್ತದೆಎಂದು ಹೇಳಿದರು.
ರಂರ ನಿದೇರ್ಶಕ ಸಂಗಮೇಶ ಬದಾಮಿ ವಿಶ್ವರಂಗಭೂಮಿಯ ಸಂದೇಶ ವಾಚಿಸುತ್ತಾ ‘ಉತ್ತರಕರ್ನಾಟಕದಲ್ಲಿ ಸಾಕಷ್ಟು ಕಲಾವಿದರಿದ್ದಾರೆಅವರನ್ನುಗುರುತಿಸುವ ಕೆಲಸವಾಗಬೇಕಾಗಿದೆ. ವ್ಯಕ್ತಿಗಳಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿಸಲುರಂಗಭೂಮಿ ಸಹಕಾರಿಯಾಗಿದೆಎಂದರು.
ಶ್ರೀ ವಿ ಸಿ ನಾಗಠಾಣಅಧ್ಯಕ್ಷರು ಅಖಿಲ ಭಾರತೀಯ ವೀರ ಶೈವ ಮಹಾಸಭಾಇವರುಅಧ್ಯಕ್ಷತೆ ವಹಿಸಿ ಮಾತನಾಡುತ್ತಾಜಗತ್ತೆಒಂದುರಂಗಭೂಮಿಕಲಾವಿದರ ಬದುಕು ಬಡತನದಿಂದತುಂಬಿರುತ್ತದೆ ಎಷ್ಟೇ ಕಷ್ಟ ಬಂದರೂಕಲೆಯಿಂದ ವಿಮುಖರಾಗುವುದಿಲ್ಲ ಎಂದು ನುಡಿದರು. ರಂಗಕಲಾವಿದರಾದರವೀಂದ್ರನಾಥ ಮೇಡೆಗಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ಸೋಮಶೆಖರ ವಾಲಿ ಸ್ವಾಗತಿಸಿ ರಂಗಗೀತೆ ಹಾಡಿದರು. ಪ್ರೋ.ವಿ ಡಿ ಐಹೊಳ್ಳಿ. ಪ್ರೋದೊಡ್ಡಣ್ಣ ಬಜಂತ್ರಿ ಪ್ರೋಎಮ್ ವೈ ಜಾವಡಗಿ, ಬಿ ಎಚ್ ಬಾದರಬಂಡಿ, ಕೋರಿ, ನಾಡಗೌಡ,ತೇಲಿ ಕಲಾವಿದರಾದ ವೀರಣ್ಣಾತೊಂಡಿಕಟ್ಟಿ, ಎಮ್ ಜಿ ಯಾದವಾಡ ಮುಂತಾದವರು ಉಪಸ್ಥಿತರಿದ್ದರು. ಪ್ರೋ ಸುಭಾಸಕನ್ನೂರ ನಿರೂಪಿಸಿದರು. ಬಸವರಾಜಒಂಟಗೂಡಿ ವಂದಿಸಿದರು.