ವಿಶ್ವಮಾನವ ದಿನಾಚರಣೆ: ಸಾಹಿತಿಗಳಿಗೆ ಸನ್ಮಾನ

ಕುವೆಂಪು ಅವರು ವಿಭಿನ್ನವಾದ ಕವಿ-ಬಸವರಾಜ ಕಳಸ
ರಾಯಚೂರು.ಡಿ.೨೯.ರಾಷ್ಟ್ರಕವಿ ಕುವೆಂಪು ಅವರ ಮಹಾನ್ ಕವಿ ಇವರ ಜಯಂತಿಯನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ಬಸವರಾಜ ಕಳಸ ಅವರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇ ಗೌಡರ ಬಣ ಇವರ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ ೧೧೬ನೇ ಜಯಂತಿಯ ಅಂಗವಾಗಿ ರಾಷ್ಟ್ರಕವಿ ಕುವೆಂಪು ಸಂಭ್ರಮ ಮತ್ತು ಸಾಹಿತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಯಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರಕವಿ ಕುವೆಂಪು ಅವರೊಬ್ಬರು ಮಹಾನ್ ಕವಿ ಅತಿ ಶ್ರೀಮಂತ ಮನೆತನದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಜನಿಸಿದರು. ಇವರ ವ್ಯಕ್ತಿತ್ವ ಸಾಗರದಷ್ಟು ಇವರೊಬ್ಬ ಭಿನ್ನವಾಗಿ ಆಲೋಚನೆ ಮಾಡುವ ಕವಿಗಳ ಆಗಿದ್ದು.
ಇವರು ಜಗತ್ತನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿದೆ.
ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯನ್ನು ಜಗತ್ತೇ ತಿರುಗಿ ನೋಡಿದೆ ಈ ಕೃತಿಯಲ್ಲಿ ಪಾತ್ರಗಳನ್ನು ವಿಭಿನ್ನ ರೂಪದಲ್ಲಿ ತೋರಿಸಿದ್ದಾರೆ ಹಾಗೂ ಇದರಲ್ಲಿ ಮಾನವೀಯತೆ,ಸಾಮಾಜಿಕ ಕಳಕಳಿಯ ಬಗ್ಗೆ ಎತ್ತಿ ತೋರಿಸಿದ್ದಾರೆ. ಮೂಲತಃ ಇವರು ಕನ್ನಡ ಮಾಧ್ಯಮ ದೇವರಾಗಿದ್ದು ಆದರೆ ಇಂಗ್ಲಿಷ್ ಭಾಷೆಯಲ್ಲಿ ಆರು ಕೃತಿಗಳನ್ನು ಬರೆದಿದ್ದಾರೆ ಎಂದು ಹೇಳಿದರು.
ನಂತರ ಸಾಹಿತಿಗಳಾದ ಈರಣ್ಣ ಬೆಂಗಾಲಿ ಮತ್ತು ಮಹೇಂದ್ರ ಕುರ್ಡಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ ಜೈನ್.ಗೋವಿಂದ ರಾಜು, ಈರಣ್ಣ ಬೆಂಗಾಲಿ, ಮಲ್ಲೇಶ್ ಗಾಧ, ವೆಂಕಟೇಶ ಅರಗೋಲ್, ಮಹೇಂದ್ರ ಕುರ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.