ವಿಶ್ವಮಾನವ ಕುವೆಂಪು ರವರ 116ನೇ ಜನ್ಮ ದಿನಾಚರಣೆ

ಮೈಸೂರು. ಡಿ.30 ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪು ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡುವುದರ ಮೂಲಕ ವೇದಿಕೆಯ ಸದಸ್ಯರೆಲ್ಲರೂ ನಮನ ಸಲ್ಲಿಸುವುರೊಂದಿಗೆ ಕುವೆಂಪು ರವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಮೈಮುಲ್ ನಿರ್ದೇಶಕರಾದ ಎಸ್.ಸಿ ಅಶೋಕ್ ರವರು ಕುವೆಂಪು ರವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರು ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿ ಈ ಸುಸಂಸ್ಕೃತ ಲೋಕಕ್ಕೆ
ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಡಿಸೆಂಬರ್ 29,1904 ರಲ್ಲಿ ಜನಿಸಿದ ಇವರು ಕನ್ನಡದ ಅಗ್ರಮಾನ್ಯ ಕವಿ ,ಕಾದಂಬರಿಕಾರ,ನಾಟಕಕಾರ,ವಿಮರ್ಶಕ,ಮತ್ತು ಚಿಂತಕರಾಗಿರುತ್ತಾರೆ.ವಿಶ್ವಮಾನವ ಸಂದೇಶವನ್ನು ನೀಡಿದವರು ಇವರಾಗಿರುತ್ತಾರೆ,ಕನ್ನಡದ ಎರಡನೆಯ ರಾಷ್ಟ್ರಕವಿ ,ಜ್ಞಾನಪೀಠ ಪ್ರಶಸ್ತಿಯನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರಿವರಾಗಿರುತ್ತಾರೆ.ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ,ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು ಇವರಾಗಿರುತ್ತಾರೆ,ಎಂದು ಕುವೆಂಪು ರವರ ಜೀವನಾಧರಿತ ಚಿತ್ರಣವನ್ನು ಎಲೆಎಲೆಯಾಗಿ ಬಿಡಿಸಿಟ್ಟರು,ಅವರು ಬಿಟ್ಟು ಹೋದಂತಹ ಜೀವನಾಧರಿತ ಸಂಚಿಕೆಗಳೆಲ್ಲವೂ ನಮ್ಮ ಬದುಕಿಗೆ ಪ್ರೇರಣೆಯಾಗಿದೆ ಎಂದು ವಿಶ್ವಮಾನವ ಕುವೆಂಪು ರವರ ಬಗ್ಗೆ ಅಶೋಕ್ ರವರು ಮೇಲಿನಂತೆ ಮಾತನಾಡಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ .ಮೈಮುಲ್ ನಿರ್ದೇಶಕರಾದ ಎಸ್.ಸಿ.ಅಶೋಕ್ ವೇದಿಕೆ ಅಧ್ಯಕ್ಷೆ ಹಾಗು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮೀದೇವಿ, ವೇದಿಕೆಯ ಪದಾಧಿಕಾರಿಗಳಾದಂತಹ ಜಯಲಕ್ಷ್ಮಿ, ಮೀನಾ, ಪಾರ್ವತಿ, ಹಂಸ, ವಿಜಯಲಕ್ಷ್ಮಿ, ಪುಷ್ಪ, ಮೂರ್ತಿ .ರಂಗನಾಥ್ .ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.