ವಿಶ್ವಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ


(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು31: ಪಟ್ಟಣದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಲಕ್ಷ್ಮೇಶ್ವರ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಕಂದಾಯ ಇಲಾಖೆ ಪೆÇಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಿವಾಣಿ ನ್ಯಾಯಾಧೀಶರಾದ ಅಪ್ಪಾಸಾಬ ಆರ್ ನಾಯಿಕ ಅವರು ಇಂದು ಜಗತ್ತಿನಾದ್ಯಂತ ಮಾನವ ಕಳ್ಳ ಸಾಗಾಣಿಕೆ ಹೆಚ್ಚಾಗುತ್ತಿದೆ ಆಸೆ ಆಮಿಷಗಳನ್ನು ವಡ್ಡಿ ಜನರ ಮುಗ್ಧತೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಇಲ್ಲವೇ ಮೋಸ ಮಾಡಿ ಅವರನ್ನು ಮಾರಾಟ ಮಾಡುವ ವ್ಯವಸ್ಥಿತ ಜಾಲ ಹರಡಿಕೊಂಡು ನಡೆಯುತ್ತಿದೆ ಇದನ್ನು ಮಟ್ಟ ಹಾಕಲು ಸಾರ್ವಜನಿಕರು ಸಹ ಸಂಶಯಾಸ್ಪದ ವ್ಯಕ್ತಿಗಳು ಅಂಥವರ ಬಗ್ಗೆ ಪೆÇಲೀಸರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಿಪಿಐ ವಿಕಾಸ್ ಲಮಾಣಿ ಅವರು ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪೆÇಲೀಸ್ ಇಲಾಖೆ ಅತ್ಯಂತ ಜಾಗೃತವಾಗಿದ್ದು ಯಾವುದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರದೇಶದಲ್ಲಿ ಅನಾಮದೇ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೆÇಲೀಸರನ್ನು ಸಂಪರ್ಕಿಸುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಂದ ಶೀಲ್ ಎಂಎ ವಹಿಸಿದ್ದರು ಕಾರ್ಯಕ್ರಮದಲ್ಲಿ ಕೆಎಎಸ್ ಅಧಿಕಾರಿ ಅನಿಲ್ ಬಡಿಗೇರ್ ಗ್ರೇಡ್ 2 ತಹಶೀಲ್ದಾರ್ ನಟರಾಜ್ ಪಿಎಸ್‍ಐ ಯೂಸುಫ್ ಜಮುಲಾ ಸಿ ಡಿ ಪಿ ಓ ಮೃತ್ಯುಂಜಯ ಗುಡ್ಡದಾನ್ವೇರ
ನ್ಯಾಯವಾದಿಗಳಾದ ಬಿಎಸ್ ಬಾ ಳೇಶ್ವರ ಮಠ ಎ ಟಿ ಕಟ್ಟಿಮನಿ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು ನ್ಯಾಯವಾದಿಗಳಾದ ವಿ ಎಸ್ ಪಶುಪತಿಹಾಳ ಪಿಎಂ ವಾಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಉಪನ್ಯಾಸ ನೀಡಿದರು.