ವಿಶ್ವಮಾನವತ್ವ ಸಂವಿಧಾನದ ಮೂಲ ಉದ್ದೇಶ

ಸಾಣೇಹಳ್ಳಿ, ನ. 8; ಸಮುದ್ರದ ವಿಸ್ತಾರದಂತೆ ಭಾರತದ ಸಂವಿಧಾನವೂ ಇದೆ. ಇದನ್ನೇ ಶರಣರು ಸಂಕ್ಷಿಪ್ತವಾಗಿ `ಸಕಲ ಜೀವಾತ್ಮರಿಗೆ ಲೇಸ ಬಯಸುವುದು’ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.ರಾಷ್ಟಿçÃಯ ನಾಟಕೋತ್ಸವ’ದ ನಿಮಿತ್ತ ಇಲ್ಲಿನ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರಾರ್ಥನಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿಇಂದಿನ ಸಂವಿಧಾನದ ಆಶಯಗಳನ್ನು ಬಸವಾದಿ ಶರಣರು `ಅನುಭವ ಮಂಟಪ’ದ ಮೂಲಕ ಜಾರಿಯಲ್ಲಿ ತಂದದ್ದು ಐತಿಹಾಸಿಕ ಸತ್ಯ. ಕಾಯಕ-ದಾಸೋಹ ಅವರು ಪ್ರಮುಖ ತತ್ವವಾಗಿತ್ತು. `ಲಂಚ ವಂಚನಕ್ಕೆ ಕೈಯನ್ನಾದ ಭಾಷೆ’ ಎನ್ನುವ ಮೂಲಕ ಭ್ರಷ್ಟಾಚಾರವನ್ನು ಅಂದೇ ನಿರ್ಮೂಲನ ಮಾಡುವ ಪ್ರಯತ್ನ ಮಾಡಿದರು. ಶರಣರು ಸ್ವತಂತ್ರö್ಯವಾಗಿ, ಸಾಮರಸ್ಯದಿಂದ, ಸಮಾನತೆಯನ್ನು ಎತ್ತಿ ಹಿಡಿದು ಜೀವಿಸಿದರು. ಹೆಣ್ಣು-ಗಂಡುಗಳ ತಾರತಮ್ಯ ಇಂದಿಗೂ ಇದೆ. ಆದರೆ ಶರಣರು `ನಡುವೆ ಸುಳಿವ ಆತ್ಮ ಗಂಡೂ ಅಲ್ಲ; ಹೆಣ್ಣು ಅಲ್ಲ’ ಎಂದು ಲಿಂಗ ಸಮಾನತೆಯನ್ನು ಸಾರಿದರು. `ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ’ ಎನ್ನುವ ಮೂಲಕ ಇಂದು ಸಂವಿಧಾನ ಬಯಸುವ ಸಾಮಾಜಿಕ ನ್ಯಾಯವನ್ನು ಅಂದೇ ಹೇಳಿದ್ದಾರೆ. ವಿಶ್ವಮಾನವನಾಗಿ ಬದುಕಬೇಕೆಂಬುದು ಶರಣರ ಮತ್ತು ಸಂವಿಧಾನದ ಆಶಯ. ವಿಷಾದದ ಸಂಗತಿ ಈ ಆಶಯಗಳ ಅರಿವು ಅನೇಕರಿಗಿದ್ದರೂ ಹಾಗೆ ನಡೆದುಕೊಳ್ಳುತ್ತಿಲ್ಲ. ಕಾರಣ ಸಂಸ್ಕಾರ ಇಲ್ಲದಿರುವುದು. ಓದಿಗಿಂತ ವಿವೇಕ ಮುಖ್ಯವಾದುದು. ಅಂತಃಕರಣ, ಮಾನವೀಯತೆ, ವಿವೇಕ ಸಮ್ಮಿಳಿತಗೊಂಡರೆ ಸಂವಿಧಾನದ ಆಶಯಗಳು ಜಾರಿಗೊಳ್ಳಲು ಸಾಧ್ಯ. ಇಲ್ಲದೇ ಹೋದರೆ ಅದು ಕೇವಲ ಉಪದೇಶದ ಸರಕಾಗಬಹುದಷ್ಟೇ. ವ್ಯಕ್ತಿಗತ ಪರಿವರ್ತನೆಯೇ ಸಮಾಜಿಕ ಪರಿವರ್ತನೆಗೆ ಮುನ್ನಡಿ ಇಡುವುದು. ಭಾಷೆ, ಜಾತಿ, ಮತ, ಲಿಂಗ ಮೊದಲಾದ ಸಂಕುಚಿತ ಬೇಲಿಗಳನ್ನು ಕಿತ್ತು ವಿಶ್ವಪ್ರಜೆಯಾಗುವಂಥ ಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಇಂದಿನ ಚಿಂತನೆಯಲ್ಲಿ `ಸಂವಿಧಾನದ ಆಶಯಗಳು’ ಕುರಿತಂತೆ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಹೆಚ್ ಬಿಲ್ಲಪ್ಪ ಮಾತನಾಡಿ ಎಲ್ಲರೂ ತಿಳಿಯಲೇ ಬೇಕಾದುದು ಪವಿತ್ರ ದಾಖಲೆ ಭಾರತೀಯ ಸಂವಿಧಾನ. ಇದು ದಿನನಿತ್ಯ ಭಾರತೀಯರೆಲ್ಲರ ಜೀವನವನ್ನು ಚಿಂತಿಸುವುದು. ಇದನ್ನು ಮಕ್ಕಳು ವಿಶೇಷವಾಗಿ ತಿಳಿಯಲೇಬೇಕಾಗಿದೆ. ದೇಶದಲ್ಲಿ ಅವ್ಯವಸ್ಥೆಯಿದ್ದರೂ ಅದರ ವಿರುದ್ಧ ಧ್ವನಿಯೆತ್ತುವವರ ಸಂಖ್ಯೆ ಬಹಳ ಕಡಿಮೆ ಇದೆ. ಇದಕ್ಕೆ ಕಾರಣ ಸಂವಿಧಾನದ ಅರಿವು ಇಲ್ಲದೇ ಇರುವುದು. ರಾಷ್ಟಾçಧ್ಯಕ್ಷರೂ ಸೇರಿದಂತೆ ಎಲ್ಲರೂ ಕೂಡ ಪ್ರಜೆಗೆ ಬಾಧ್ಯಸ್ಥರೇ. ಸಾಮಾಜಿಕ ನ್ಯಾಯ, ಸಮಾನತೆ, ವ್ಯಕ್ತಿತ್ವ ಸ್ವಾತಂತ್ರö್ಯಗಳು ಪ್ರತಿಯೊಬ್ಬ ಪ್ರಜೆಗೂ ಬೇಕು ಎಂದು ಹೇಳುವುದು ಸಂವಿಧಾನ. ಸರ್ಕಾರದ ಮುಂದೆ ಕೈಚಾಚುವ ಪ್ರವೃತ್ತಿ ಸರಿಯಲ್ಲ ಎಂದರು. ಮಾತಿಗೂ ಮುನ್ನ ಧ್ಯಾನ, ಮೌನ, ಪ್ರಾರ್ಥನೆ, ಶಿವಮಂತ್ರ ಲೇಖನ, ಚಿಂತನೆಗಳು ನಡೆದವು. ಶಿವಸಂಚಾರದ ಕೆ ಜ್ಯೋತಿ ಮತ್ತು ಹೆಚ್ ಎಸ್ ನಾಗರಾಜ್ ಪ್ರಾರ್ಥನಾ ಕಾರ್ಯ ನಡೆಸಿಕೊಟ್ಟರು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ನೌಕರರು, ಗ್ರಾಮಸ್ಥರು ಭಾಗವಹಿಸಿದ್ದರು.