ವಿಶ್ವಪರಿಸರ ಜಾಗೃತಿ ಜಾಥಾಗೆ ಚಾಲನೆ

ಮುದ್ದೇಬಿಹಾಳ: ಜೂ.7:ಪಟ್ಟಣದ ಬಸವ ಇಂಟರ್‍ನ್ಯಾಶನಲ್ ಸ್ಕೂಲ್ ಹಾಗೂ ಇನ್ನರ್ ವೇಲ್ತ್ ಕ್ಲಬ್(317) ಇವರ ಸಹಯೋಗದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಜಾಗೃತಿ ಮೂಡಿಸುವ ಉದ್ದೇಶದಿಂದ ಸೋಮವಾರ ಶಾಲಾ ಮಕ್ಕಳಿಂದ, ಪಾಲಕರಿಂದ ಮ್ಯಾರಾಥಾನ್ ಜಾಥಾಗೆ ತಾಲೂಕಾ ಹಿರಿಯ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ಗರಗ ಅವರು ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಿದರು.
ಬೆಳಿಗ್ಗೆ 7 ಗಂಟೆಗೆ ಪ್ರಾರಂಭಗೊಂಡ ಮ್ಯಾರಾಥಾನ್ ಇಲ್ಲಿನ ಇಂದಿರಾ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಅಂಬೇಡ್ಕರ ವೃತ್ತದಿಂದ ತಾಳಿಕೋಟ ರಸ್ತೆ ಮಾರ್ಗದಲ್ಲಿರುವ ಬಸವ ಇಂಟರನ್ಯಾಶನಲ್ ಸ್ಕೂಲ್‍ವರಗೆ ಮ್ಯಾರಾಥಾನ್ ಜಾಥಾ ನಡೆಸಲಾಯಿತು.
ಬಳಿಕ ತಾಲೂಕಾ ಹಿರಿಯ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ಗರಗ ಅವರು ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವೇಲ್ಲ ಉತ್ತಮ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಜೊತೆಗೆ ನಾವಿಂದು ವ್ಯಾಪಕವಾಗಿ ಬಳಸುತ್ತಿರುವ ಪ್ಲ್ಯಾಷ್ಟಿಕ್ ನಿಂದಾಗಿ ಪರಿಸರ ಕಲುಷಿತಗೊಂಡು ಆರೋಗ್ಯದ ಮೇಲೆ ಮಾತ್ರವಲ್ಲದೇ ಪ್ರಕೃತಿಯ ಮೇಲೆ ದುಷ್ಪರಿಣಾಮ ಬಿರುವಂತೆ ಮಾಡುತ್ತಿದ್ದೇವೆ ಈ ಹಿನ್ನೇಲೆ ಪ್ರತಿಯೋಬ್ಬರು ಪ್ಲ್ಯಾಷ್ಠಿಕ ಮುಕ್ತ ಪರಿಸರ ಮಾಡಲು ಪಣತೊಡಬೇಕು ಎಂದರು.
ಪ್ರತಿಯೊಬ್ಬರೂ ನಮ್ಮ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು.ಸರಕಾರ ಎಷ್ಟೇ ಕಾನೂನು ಮಾಡಿದರೂ, ಜನರಲ್ಲಿ ಜಾಗೃತಿ ಮೂಡದಿದ್ದರೆ ಉದ್ದೇಶ ಸಫಲವಾಗುವುದಿಲ್ಲ ಎಂಬುದನ್ನು ತಿಳಿಯಬೇಕು. ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತಿಚಿನ ದಿನಗಳಲ್ಲಿ ಮಾನವನು ತಮ್ಮ ಐಶಾರಾಮಿ, ಆಧುನಿಕ ಬದುಕಿನ ಗೀಳಿಗೆ ಬಿದ್ದು ಗಿಡಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಸಧ್ಯ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.
ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವ ಉದ್ದೇಶದಿಂದ ಸರಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆಯಾದರೂ ಜನರು ಜಾಗೃತರಾಗುತ್ತಿಲ್ಲ ಮನುಷ್ಯನಲ್ಲಿ ನಾನು ಪರಿಸರ ನಾಶ ಮಾಡದೇ ರಕ್ಷಣೆ ಮಾಡಬೇಕು ಎಂದು ಸ್ವಯಂ ಪ್ರೇರಿತ ಮನೋಭಾವ ಬಂದಾಗ ಮಾತ್ರ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
ಈ ವೇಳೆ ಬಸವ ಇಂಟರ್ ನ್ಯಾಶನಲ್ ಸ್ಕೂಲ್ ನ ಮುಖ್ಯ ಶಿಕ್ಷಕಿ ಡಾ, ಪ್ರಭಾ ಚಿನಿವಾರ, ಪ್ರೋ ಶಿವಕುಮಾರ ಹರ್ಲಾಪೂರ, ನಾಗರಾಜ ಚಿನಿವಾಲರ, ವಿದ್ಯಾ ತಡಸದ, ನ್ಯಾಯವಾದಿಗಳಾದ ಜಯಾ ಸಾಲಿಮಠ, ಅನ್ನಪೂರ್ಣ ನಾವದಗಿ, ಪಿಂಕಿ ಓಸ್ವಾಲ್, ರೂಪಾ ದೇಸಾಯಿ, ಶಿಕ್ಷಕರಾದ ಸಿದ್ರಾಮ ಭಜಂತ್ರಿ, ಲಕ್ಷ್ಮೀ ಪಾಟೀಲ, ವಿಜಯಲಕ್ಷ್ಮೀ ಮಳಖೇಡ, ಸಿದ್ದಪ್ಪ ತೊಂಡಿಹಾಳ, ಅಮೋಘವರ್ಷ ಕೆ, ರಿಯಾನಾ ಬಾಗವಾನ, ಸಹನಾ ದೇಶಪಾಂಡೆ, ಮಮತಾಜ ಬಿಳಗಿ, ಆಶಾರಾಣಿ ಗೋಗಿಮಠ, ಬಸಮ್ಮ ದರ್ಮಟ್ಟಿ, ಜ್ಯೋತಿ ಪೂಜಾರಿ ಸೇರಿದಂತೆ ಹಲವರು ಇದ್ದರು.