ವಿಶ್ವನಾಥ್ ಪುತ್ರ ಅಮಿತ್ ವಿರುದ್ದ ಎಫ್‍ಐಆರ್ ದಾಖಲು

ಮೈಸೂರು, ಮೇ.27: ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮ ಪ್ರವೇಶ, ಕೊಲೆ ಬೆದರಿಕೆ, ಲಾಕ್‍ಡೌನ್ ನಿಯಮ ಉಲ್ಲಂಘನೆ ಆರೋಪ ದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪುತ್ರನ ವಿರುದ್ದ ಎಫ್‍ಐಆರ್ ದಾಖಲಾಗಿದೆ.
ಜಿಪಂ ಸದಸ್ಯ ಅಮಿತ್ ದೇವರಹಟ್ಟಿ ವಿರುದ್ದ ಮೈಸೂರಿನ ವಿಜಯನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಹಿನಕಲ್ ಬಳಿಯ ಖಾಲಿ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಿದ್ದು ತಡೆಯಲು ಬಂದ ಮೂಲ ವಾರಸುದಾರ ಯೋಗೀಶ್ ಕುಟುಂಬಕ್ಕೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಮಾಲೀಕ ಯೋಗೀಶ್ ದೂರು ನೀಡಿದ್ದು, ಐಪಿಸಿ ಸೆಕ್ಷನ್ 504 , 506 ರಡಿ ಎಫ್‍ಐಆರ್ ದಾದಾಖಲಾಗಿದೆ.
ಪಟೇಲ್, ಅನೂಪ್, ವೈಕುಂಠಾಚಾರ್ ಸೇರಿದಂತೆ ಎಂಟು ಮಂದಿ ವಿರುದ್ದ ಎಫ್‍ಐಆರ್ ದಾಖಲಾಗಿದ್ದು, ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಮೂರನೇ ಆರೋಪಿಯಾಗಿದ್ದಾರೆ.