ವಿಶ್ವದ ಸಕಲ ಜೀವಿಗಳಿಗೆ ಪರಿಸರವೇ ಜೀವನಧಾರ: ಕಟ್ಟೆ

ಬೀದರ:ಜೂ,6: ಪರಿಸರ ನಮ್ಮ ಜೀವನದ ಅಮೂಲ್ಯ ಜೀವಾಳ, ಭೂ ಮಂಡಲದ ಮೇಲಿರುವ ಸಕಲ ಜೀವಿಗಳಿಗೆ ಪರಿಸರವೇ ಜೀವನಾಧಾರ, ಜನರಿಗೆ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದಾಗ ಮಾತ್ರ ನಾವು ಉತ್ತಮ ಆರೋಗ್ಯಕರ ವಾತಾವರಣವನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ನೀಡಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ನುಡಿದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತಾಲೂಕಿನ ಚಿಟ್ಟಾ ಗ್ರಾಮದಲ್ಲಿರುವ ನವೀನ್ ಶಿಕ್ಷಣ ಸಂಸ್ಥೆ ಹಾಗೂ ಮದರ್ ತೆರೆಸಾ ಸಂಸ್ಥೆ ವತಿಯಿಂದ ನವೀನ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕ್ರತಿಕ ಸಂಘದ ಸದಸ್ಯ ರೇವಣಸಿದಪ್ಪ ಜಾಲಾದೆ ಮಾತನಾಡಿ, ಪರಿಸರವು ನಿಸರ್ಗದ ಆತ್ಯಮೂಲ್ಯ ಸಂಪತ್ತು ಇದ್ದು, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಮರ ಬೆಳೆಸಿ ಜೀವ ಉಳಿಸಿ ಎಂಬ ಸಂಕಲ್ಪ ಕಾರ್ಯ ರೂಪಕ್ಕೆ ತಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನುಡಿದರು.
ಸಮಾಜ ಸೇವಕರು ಮತ್ತು ಖ್ಯಾತ ಉದ್ಯಮಿ ವಿವೇಕ ವಾಲಿ, ಮಾತನಾಡಿ, ನಮಗೆ ಇರುವುದೊಂದ ಭೂಮಿ ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಕರ್ನಾಟಕ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಷ್ಣು ಸಿಂಗ್ ಠಾಕುರ, ನವೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಮಾತನಾಡಿದರು,
ವಿಜ್ಞಾನ ಶಿಕ್ಷಕ ಸಂಜೀವಕುಮಾರ ಸ್ವಾಮಿ ಪ್ರತಿಜ್ಞೆ ಭೋಧಿಸಿದರು. ಕರ್ನಾಟಕ ಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ ಮಂಗಳೂರೆ, ಶಿಕ್ಷಕಿ ಸುನೀತಾ ರಾಮಶೆಟ್ಟಿ, ಸ್ವಾತಿ ಕುಡ್ತೆ, ರಾಜಕುಮಾರ, ರಾಘವೇಂದ್ರ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.