ವಿಶ್ವದ ಬೆಳ್ಳಿಪರದೆಗಳ ಮೇಲೆ ಭಾಗ್ಯವಂತರು

ಬೆಂಗಳೂರು,ಆ೩:ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಹಾಗೂ ಬಿ.ಸರೋಜಾದೇವಿ ಅಭಿನಯದ ’ಭಾಗ್ಯವಂತರು’ ಸಿನಿಮಾ ಹೊಸತಂತ್ರಜ್ಞಾನದೊಂದಿಗೆ ಆ.೧೯ರಂದು ತೆರೆಗೆ ಬರಲು ಸಜ್ಜಾಗಿದೆ.


ನೂತನ ಬಣ್ಣವಿನ್ಯಾಸ, ೭.೧ಡಿಜಿಟಲ್ ಸೌಂಡ್,ಡಿಟಿಎಸ್ ಸೇರಿದಂತೆ ಹಲವು ವಿಶೇಷಗಳೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸರೂಪದಲ್ಲಿ ವಿತರಕ ಮುನಿರಾಜು ಮರು ಬಿಡುಗಡೆ ಮಾಡುತ್ತಿದ್ದಾರೆ. ೧೯೭೪ರಲ್ಲಿ ಭಾಗ್ಯವಂತರು ಚಿತ್ರವನ್ನು ದ್ವಾರಕೀಶ್ ನಿರ್ಮಾಣದಲ್ಲಿ ಭಾರ್ಗವ ನಿರ್ದೇಶನ ಮಾಡಿದ್ದರು. ಕೌಟುಂಬಿಕ ಕಥಾಹಂದರ ಹೊಂದಿದ್ದ ಸಿನೆಮಾ ಯಶಸ್ಸುಕಂಡಿತ್ತು.
ಅಭಿಮಾನಿಗಳು ದೊಡ್ಡಪರದೆಯ ಮೇಲೆ ಅಣ್ಣಾವ್ರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆಯಂದು ಥಿಯೇಟರ್‌ಗಳನ್ನು ಮದುಮಗಳಂತೆ ಸಿಂಗಾರಗೊಳಿಸಲು ಸಿದ್ದತೆ ನಡೆದಿದೆ.ಇನ್ನು, ಮಲ್ಟಿಪ್ಲೆಕ್ಸ್ ಸೇರಿದಂತೆ ವಿಶ್ವದಾತ್ಯಂತ ಸುಮಾರು ೧೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಡಾ.ರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜು ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬಕಳ್ಳ, ದಾರಿತಪ್ಪಿದ ಮಗ ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದಾರೆ. ಇದೀಗ ಭಾಗ್ಯವಂತರು ಸಿನಿಮಾ ತೆರೆಗೆ ತರುತಿದ್ದು, ಮುಂದಿನದಿನಗಳಲ್ಲಿ ಹುಲಿಯ ಹಾಲಿನ ಮೇವು ಸೇರಿದಂತೆ ಇನ್ನಿತರ ಚಿತ್ರಗಳನ್ನು ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆ. ವಿಶೇಷವಾಗಿ ಅಣ್ಣಾವ್ರ ಕನಸಿನ ಭಕ್ತ ಅಂಬರೀಶ ಚಿತ್ರವನ್ನು ಆ?ಯನಿಮೇಷನ್‌ನಲ್ಲಿ ನಿರ್ಮಾಣ ಮಾಡಲು ಸಿದ್ದತೆ ನಡೆಸಿದ್ದಾರೆ.