ವಿಶ್ವದ ದೊಡ್ಡಣ್ಣನ ಪಟ್ಟ ಬೀಡೆನ್ ಪಾಲು

ವಾಷಿಂಗ್ಟನ್, ನ.7- ಕೊನೆಗೂ ಅಮೆರಿಕದ ಅಧ್ಯಕ್ಷರಾಗಿ ಡೆಮಾಕ್ರಿಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಆಯ್ಕೆಯಾಗಿದ್ದಾರೆ.ಈ ಮೂಲಕ ಅಮೇರಿಕಾದ ಇತಿಹಾಸದಲ್ಲಿ ಅತಿ ಹಿರಿಯ ವ್ಯಕ್ತಿ ಅಧ್ಯಕ್ಷರಾದ ಹಿರಿಮೆಗೆ ಪಾತ್ರರಾಗಿದ್ದಾರೆ

ವಿಶ್ವದ ದೊಡ್ಡಣ್ಣ’ನ ಪಟ್ಟವನ್ನು ಮತ್ತೊಮ್ಮೆ ಅಲಂಕರಿಸಬೇಕು ಎನ್ನುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕನಸು ನುಚ್ಚುನೂರಾಗಿದೆ.ನವಂಬರ್ 3ರಂದು ನಡೆದ ಮತದಾನದ ನಂತರ ಮತಎಣಿಕೆ ಸುದೀರ್ಘ ಕಾಲ ನಡೆದು ಕೊನೆಗೂ ಜೋ ಬೀಡೆನ್ ವಿಜಯಿ ಎಂದು ಘೋಷಿಸಲಾಗಿದೆ.

ಅಮೆರಿಕದ ಅಧ್ಯಕ್ಷರಾಗಲು ಬೇಕಾಗಿದ್ದ 270 ಎಲೆಕ್ಟ್ರಾಲ್ ಮತಗಳನ್ನು ಪಡೆದು ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 77 ವ ರ್ಷದ ಬೀಡೆನ್ ಅವರು ಬಾರಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಂಟು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದರು ಅಧ್ಯಕ್ಷರಾಗಿ ಶ್ವೇತಭವನ ಕುರ್ಚಿ ಏರಿದ್ದಾರೆ.

ಅಮೆರಿಕದ ಇತಿಹಾಸದಲ್ಲೇ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ಸರಿ ಸುಮಾರು 8 ಕೋಟಿ ಮತಗಳನ್ನು ಪಡೆಯುವ ಮೂಲಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಹೊಸ ದಾಖಲೆ ಬರೆದಿದ್ದರು ಈ ಎಲ್ಲ ಮತಗಳು ಜನಪ್ರಿಯ ಮತಗಳಿಂದ ಬಂದಿದ್ದವು ಎನ್ನುವುದು ಹೆಗ್ಗಳಿಕೆಯ ವಿಷಯ.

ಆದರೆ ಅಮೆರಿಕದ ಅಧ್ಯಕ್ಷರಾಗಲು ಬೇಕಾಗಿದ್ದ 270 ಮತ ಪಡೆಯಲು ಎಲೆಕ್ಟ್ರೋರಲ್ ಪ್ರತಿನಿಧಿಗಳ ಅಗತ್ಯವಿತ್ತು.ಕೊನೆಗೂ ಮೂರು ದಿನಗಳ ಕಾಲ ನಡೆದ ಮತ ಎಣಿಕೆಯಲ್ಲಿ ಜೋ ಬೀಡೆನ್ ಅವರು ಜಯಗಳಿಸುವ ಮೂಲಕ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಟ್ರಂಪ್ ಗೆ ನಿರಾಸೆ

ಮತ್ತೆ ನಾಲ್ಕು ವರ್ಷಗಳಿಗೆ ಟ್ರಂಪ್ ಎನ್ನುವ ಘೋಷವಾಕ್ಯದೊಂದಿಗೆ ಡೊನಾಲ್ಡ್ ಟ್ರಂಪ್ ಅಬ್ಬರದ ಪ್ರಚಾರ ನಡೆಸಿದ್ದರು ಮತಎಣಿಕೆ ನಡೆದ ಮೊದಲ ದಿನವೇ ಅರ್ಧಕ್ಕೂ ಹೆಚ್ಚು ರಾಜ್ಯಗಳ ಮತ ಎಣಿಕೆ ಬಾಕಿ ಇರುವಂತೆಯೇ ತಾವು ಅಮೆರಿಕದ ಅಧ್ಯಕ್ಷ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿಕೊಂಡು ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದರು

ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಹಲವು ರಾಜ್ಯಗಳು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೀಡೆನ್ ಪರ ವಾಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು ಚುನಾವಣೆಯಲ್ಲಿ ರಾತ್ರೋರಾತ್ರಿ ಅಕ್ರಮ ನಡೆದಿದೆ ಎಂದು ದೂರಿದ್ದರು.

ಮುಳುವಾದ ಆಡಳಿತ:

ಅಮೆರಿಕದ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಕಾರ್ಯ ನಿರ್ವಹಣೆಗೆ ಅಮೇರಿಕಾದ ಜನತೆ ಬೇಸತ್ತಿದ್ದರು.ಹೀಗಾಗಿ ಅವರ ಆಡಳಿತವೇ ಅವರಿಗೆ ಮುಳುವಾಗಿದೆ. ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಳ್ಳುತ್ತಿದ್ದ ಹುಚ್ಚು ನಿರ್ಧಾರಗಳೂ ಕೂಡ ಅವರ ಸೋಲಿಗೆ ಕಾರಣವಾಗಿವೆ.

ಹಿರಿಯ ಅಧ್ಯಕ್ಷ
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹಿರಿಯ ವ್ಯಕ್ತಿ ಶ್ವೇತಭವನ ಪ್ರವೇಶಿಸಿದ ಹಿರಿಮೆಗೆ ಡೆಮಾಕ್ರಟಿಕ್ ಪಕ್ಷದ ಜೋ ಬೀಡೆನ್ ಪಾತ್ರರಾಗಿದ್ದಾರೆ.77 ವರ್ಷದ ಬೀಡೆನ್ ಅವರು ಈ ಹಿಂದೆ ಉಪಾಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿದ್ದರು.

ಹಣಾಹಣಿ ರಾಜ್ಯದಲ್ಲಿ ಮೇಲುಗೈ

ತೀವ್ರ ಹಣಾಹಣಿಯಿಂದ ಕೂಡಿದ ರಾಜ್ಯಗಳಾದ ಪೆನ್ಸಿಲ್ವೇನಿಯಾ, ಜಾರ್ಜಿಯಾ,ವಿಲ್ಕಿನ ಸನ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬಿಡೆನ್ ಅವರು ಜಯಗಳಿಸುವ ಮೂಲಕ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರ

538 ಸದಸ್ಯ‌ಬಲ

538 ಸದಸ್ಯ ಬಲದ ಅಮೇರಿಕಾ ಸಂಸತ್ತಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಲು 270 ಮತಗಳ ಅಗತ್ಯವಿತ್ತು.ಈ ಹಿನ್ನಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಆರಂಭದಿಂದ ಹಿಂದಿಕ್ಕುವ ಮೂಲಕ ಅಮೇರಿಕಾದ ಅಧ್ಯಕ್ಷರಾಗಿ ಜೋ ಬೀಡೆನ್ ಆಯ್ಕೆ ಯಾಗಿದ್ದಾರೆ‌

6 ಬಾರಿ ಸೆನೆಟರ್

ಡೆಲಾವೇರ್ ನಿಂದ ಆರು ಬಾರಿ ಸೆನೆಟರ್ ಆಗಿದ್ದ ಅವರು 1972ರಲ್ಲಿ ಮೊದಲ ಬಾರಿಗೆ ಚುನಾಯಿತರಾದರು. 2009ರಿಂದ 2017ರ ವರೆಗೆ ಒಬಾಮಾ ಆಡಳಿತದಲ್ಲಿ ಅಮೆರಿಕದ 47ನೇ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1988ರಲ್ಲಿ ಅವರು ಅಧ್ಯಕ್ಷಸ್ಥಾನಕ್ಕೆ ಓಡಿದರು, ಆದರೆ ಅಂದಿನ ಬ್ರಿಟಿಷ್ ನಾಯಕ ನೀಲ್ ಕಿನೋಕ್ ಅವರ ಭಾಷಣವನ್ನು ಕೃತಿಚೌರ್ಯದ ಮೂಲಕ ಒಪ್ಪಿಕೊಂಡ ನಂತರ ಅವರು ಹಿಂದೆ ಸರಿದರು.

ಹೆಮ್ಮೆ ಸಂಗತಿ; ಬೀಡೆನ್

ಅಮೆರಿಕದಂತಹ ಅತಿದೊಡ್ಡ ದೇಶ ಮುನ್ನೆಡೆಲು ಅವಕಾಶ ಮಾಡಿಕೊಟ್ಟಿರುವುದು ಹೆಮ್ಮೆಯ ಸಂಗತಿ ಎಂದು ಚುನಾಯಿತ ಅಧ್ಯಕ್ಷ ಜೋ ಬೀಡೆನ್ ಹೇಳಿದ್ದಾರೆ.ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಜೋ ಬಿಡೆನ್, ಅಮೇರಿಕದ ಎಲ್ಲಾ ಜನರ ಅಧ್ಯಕ್ಷರಾಗಿ ನಾನು ಕರ್ತವ್ಯ ನಿರ್ವಹಿಸುತ್ತೇನೆ ಎಂದು ದೇಶದ ಜನರಿಗೆ ಭರವಸೆ ನೀಡಿದ್ದಾರೆ.ನೀಲಿ ಮತ್ತು ಕೆಂಪು ಜನ ಎಂದು ಯಾವುದೇ ಕಾರಣಕ್ಕೂ ಭೇದ-ಭಾವ ಮಾಡುವುದಿಲ್ಲ ನನಗೆ ಎಲ್ಲರೂ ಸಮಾನರು ಎಂದು ದೇಶದ ಜನರಿಗೆ ವಾಗ್ದಾನ ನೀಡಿದ್ದಾರೆ